ಆಲೂರು.ಜೆಡಿಎಸ್ ಶಾಸಕಂಗ ಸಭಾ ನಾಯಕರು ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾಗಿರುವ ಸುರೇಶ್ ಬಾಬು ರವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ರಾಧಮ್ಮ ಜನಸ್ಪಂದನ ಸಂಸ್ಥೆ ಹೇಮಂತ್ ಕುಮಾರ್ ಅವರು ಬೆಂಗಳೂರಿನ ಅವರ ಮನೆಗೆ ಭೇಟಿ ನೀಡಿ ಶುಭ ಕೋರಿದರು.
ಮಲ್ಲಾಡ್ ಶಾಡೋ ಗೆ ಪ್ರತಿಕ್ರಿಸಿದ ಹೇಮಂತ್ ಕುಮಾರ್ ಕಳೆದ 20 ವರ್ಷಗಳಿಂದ ಆತ್ಮೀಯರಾಗಿರುವಂತಹ ಸುರೇಶ್ ಬಾಬುರವರು ರಾಜಕೀಯ ಜೀವನದಲ್ಲಿ ಎಲ್ಲರನ್ನೂ ಪ್ರೀತಿಯಾಗಿ ಕಾಣುವಂತಹ ಹೃದಯವಂತಿಕೆ ಇರುವ ಜನಪ್ರಿಯ ಶಾಸಕರಾಗಿದ್ದು ಜೆಡಿಎಸ್ ಪಕ್ಷದ ಸಭಾ ನಾಯಕರಾಗಿ ಆಯ್ಕೆಯಾಗಿ ಮುಂದಿನ ದಿನಗಳಲ್ಲಿ ಇನ್ನು ಉನ್ನತ ಮಟ್ಟದ ಸ್ಥಾನ ದೊರೆಯಲಿ ದೇವರ ಸದಾ ಕಾಲ ಆರೋಗ್ಯ ಆಯಸ್ಸು ಯಶಸ್ಸು ನೀಡಲಿ ಎಂದರು.
ಇವರ ಹೆಸರಿನಲ್ಲಿ ಹುಟ್ಟು ಹಬ್ಬದ ಪ್ರಯುಕ್ತವಾಗಿ ಆಲೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿರುವ ಎಲ್ಲಾ ರೋಗಿಗಳಿಗೆ ರಾಧಮ್ಮ ಜನಸ್ಪಂದನ ವತಿಯಿಂದ ಹಣ್ಣುಗಳನ್ನು ವಿತರಿಸಲಾಯಿತು.


