ವರದಿ ರಾಣಿ ಪ್ರಸನ್ನ
ರಾಜ್ಯದ ನೋಂದಣಿ ಮತ್ತು
ಮುದ್ರಾಂಕ ಇಲಾಖೆ ರಿಜಸ್ಟ್ರಾರ್, ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಡಾಟಾ ಎಂಟ್ರಿಗಾಗಿ ಗುತ್ತಿಗೆ ಆದಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ನೀಡಿರುವುದಿಲ್ಲ, ಹಲವು ಮನವಿ ಮಾಡಿದರು ಸಹ ನಮ್ಮ ಮನವಿಗೆ ಸ್ಪಂದಿಸದ ಕಾರಣ ಇದೇ 17 ರಿಂದ ಕೆಲಸವನ್ನು ನಿಲ್ಲಿಸಿ ಮುಷ್ಕರ ಕೈಗೊಳ್ಳಲಿದ್ದೇವೆ ಎಂದು ಗುತ್ತಿಗೆ ಡಾಟಾ ಎಂಟ್ರಿ ಕಂಪ್ಯೂಟರ್ ಆಪರೇಟರ್ ಗಳ ಜಿಲ್ಲಾ ಸಂಘದ ಜಿಲ್ಲಾ ಪ್ರತಿನಿಧಿ ಲೋಕೇಶ್ ಮಾಹಿತಿ ನೀಡಿದ್ದಾರೆ
ಕಳೆದ ನವೆಂಬರ್ 28ರಂದು ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ್ ರವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮೂರು ತಿಂಗಳ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ನಿರ್ಣಯ ಕೈಗೊಂಡು ಸಿಎಂಎಸ್ ಕಂಪ್ಯೂಟರ್ ಲಿಮಿಟೆಡ್ ಗೆ ಕಳಿಸಿಕೊಟ್ಟಿದ್ದೆವು. ಆದರೆ ಹಣ ಬಿಡುಗಡೆ ಮಾಡಿಲ್ಲವೆಂದು ಉತ್ತರ ನೀಡಿದ್ದಾರೆ. ಈಗಾಗಲೇ ನಾವು ಮುಖ್ಯಮಂತ್ರಿಗಳಿಗೆ ಕಂದಾಯ ಸಚಿವರಿಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳು ನೊಂದಣಿ ಮಹಾ ಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರಿಗೂ ಸಹ ಮನವಿಗಳನ್ನು
ಸಲ್ಲಿಸಲಾಗಿದೆ. ಮೂರು ನಾಲ್ಕು ತಿಂಗಳು ವೇತನ ವಿಲ್ಲದೆ ತಂತ್ರ ಜೀವನ ಮಾಡುವುದು ಹೇಗೆ? ಮನೆ ಬಾಡಿಗೆ ಕಿರಾಣಿ ಅಂಗಡಿ ಸಾಲ ಮಕ್ಕಳ ವಿದ್ಯಾಭ್ಯಾಸ ಮೊದಲಾದವುಗಳನ್ನು ನಿರ್ವಹಿಸುವುದು ದುಸ್ತರವಾಗಿದೆ.
ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಸರಕಾರಿ ನೌಕರರಂತೆ ನಮಗೂ ಕರ್ತವ್ಯದ ಅವಧಿಯನ್ನು ಅನ್ವಯಿಸುವಂತೆ ಮಾಡಬೇಕು ಅಧಿಕ ಸಮಯ ದುಡಿಸಿಕೊಂಡರು ನಮಗೆ ಓವರ್ ಟೈಮ್ ಆಲೋಯನ್ ಕೊಡುತ್ತಿಲ್ಲ. ಸರ್ವೋಚ್ಚ ನ್ಯಾಯಾಲಯವು ಹೇಳಿದೆ ದೀರ್ಘಕಾಲ ಗುತ್ತಿಗೆಯ ಮೇಲೆ ದುಡಿಸಿಕೊಳ್ಳಬಾರದೆಂದು ಸಹ ತೀರ್ಪು ಒಂದನ್ನು ನೀಡಿದೆ. ಹತ್ತು ವರ್ಷಕ್ಕೂ ಮಿಗಿಲಾಗಿ ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳುತ್ತಿದ್ದಾರೆ ಖಾಲಿ ಇರುವ ಸ್ಥಳಗಳಿಗೆ ನಮ್ಮಗಳನ್ನೇ ನೇಮಕ ಮಾಡಿಕೊಳ್ಳಬೇಕು. ಖಾಲಿ ಇರುವ ಸ್ಥಳಗಳಿಗೆ ಬೇರೆಯವರನ್ನು ನೇಮಕ ಮಾಡಿಕೊಂಡರೆ ನಮ್ಮ ಕುಟುಂಬಗಳು ಬೀದಿಗೆ ಬರುತ್ತವೆ, ನೇಮಕಾತಿ ಸಮಯದಲ್ಲಿ ನಮಗೆ ಪ್ರಥಮ ಪ್ರಥಮ ಆದ್ಯತೆಯನ್ನು ನೀಡಬೇಕು, ಎಂಬ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದೇವೆ ಎಂದರು ಈ ಹುದ್ದೆಗಳನ್ನು ರದ್ದು ಮಾಡಿದಲ್ಲಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಮ್ಮನ್ನು ವಿಲೀನ ಮಾಡಬೇಕು ಎಂಡಿದ್ದಾರೆ.
17 ರಿಂದ ರಾಜ್ಯಾದ್ಯಂತ ಶಾಂತಿಯುತ ಮುಷ್ಕರ ಪ್ರಾರಂಭಿಸಲಿದ್ದಾರೆ.
previous post
next post