ಸಕಲೇಶಪುರ ತಾಲೂಕು ಬೆಳಗೋಡು ಹೋಬಳಿಯ ವೃತ್ತದಲ್ಲಿರುವಂತಹ ಹೈ ಮಾಸ್ಟ್ ದೀಪ ಸರಿಯಾಗಿ ಬೆಳಕು ಬೀಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಈ ಪ್ರದೇಶಕ್ಕೆ ತೀರಾ ಅನಿವಾರ್ಯತೆ ಇದ್ದುದರಿಂದ ದೀಪ ಅಳವಡಿಸಲಾಗಿತ್ತು.
ಇದೀಗ ಹೈ ಮಾಸ್ಟ್ ನಂತಹ ದೀಪ ಇದ್ದರೂ ಕೂಡ ಕತ್ತಲೆಯಂತೆ ಆಗಿದೆ.
ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕೆಂದು ಬೆಳಗೋಡು ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೋರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಲ್ಲಿನ ಸ್ಥಳೀಯರಾದ ನಾಗೇಂದ್ರ ಆದಷ್ಟು ಬೇಗ ದುರಸ್ತಿ ಪಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
previous post
next post