ವರದಿ ರಾಣಿ ಪ್ರಸನ್ನ
ಹಾಸನದಲ್ಲಿ ಪುಡಿ ರೌಡಿಯ ಅಟ್ಟಹಾಸ .
ಹಾಸನ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ದರ್ಪ ಮೆರೆದಿದ್ದ ಪುಡಿರೌಡಿಯನ್ನು ಬೆಂಗಳೂರಿನ ಸಂಜಯ್‌ನಗರದಲ್ಲಿ ಬಂಧಿಸಿ ಕರೆ ತರುತ್ತಿದ್ದ ವೇಳೆ, ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಪೊಲೀಸರ ಮೇಲೆಯೇ ಕೈ ಮಾಡಿ ಪರಾರಿಯಾಗಲು ಯತ್ನಿಸಿ, ಮತ್ತೆ ಸಿಕ್ಕಿ ಬಿದ್ದಿ ಆರೋಪಿ
ಖಾಸಗಿ ಬಸ್ ಚಾಲಕ ಉಡುಪಿ ಮೂಲದ ಅರುಣ್ ಕುಮಾರ್ ಎಂಬುವರು, ಜ.28ರ ಮಧ್ಯರಾತ್ರಿ ಬೆಂಗಳೂರಿನಿಂದ-ಕುಂದಾಪುರಕ್ಕೆ ಬಸ್‌ನಲ್ಲಿ ಪ್ರಯಾಣಿಕರನ್ನು ಕೂರಿಸಿ ಕೊಂಡು ನಗರದ ತಣ್ಣೀರುಹಳ್ಳ ಮಾರ್ಗವಾಗಿ ತೆರಳುತ್ತಿದ್ದಾಗ ಹಿಂದಿನಿಂದ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದ ಮನು, ದೇವರಾಯಪಟ್ಟಣ ಬೈಪಾಸ್ ರಸ್ತೆಯ ಕ್ರಾಸ್ ಬಳಿ ಬಸ್ ಓವರ್ ಟೆಕ್ ಮಾಡಿ ಬಸ್‌ಗೆ ಅಡ್ಡಲಾಗಿ ಕಾರು ನಿಲ್ಲಿಸಿದ. ನಂತರ ಬಾಗಿಲ ಬಳಿ ಬಂದು
ಅವಾಚ್ಯ ಶಬ್ದಗಳಿಂದ ನಿಂದಿಸಿ, ಗಾಡಿಯಿಂದ ಕೆಳಗೆ ಇಳಿಯೋ ಎಂದು, ಕೈಯಲ್ಲಿ ಮಚ್ಚು ಹಿಡಿದು ಬೀಸಿ ಕೊಲೆ ಬೆದರಿಕೆ ಹಾಕಿದ. ತಪ್ಪಿಸಿಕೊಳ್ಳಲು ಚಾಲಕ ಕಿಟಕಿ ಬಾಗಿಲ ಚಿಲಕ ಹಾಕಿದ. ಈ ದಿನ ನಿನ್ನನ್ನು ಮಚ್ಚಿನಿಂದಲೇ ಕೊಚ್ಚಿ ಮುಗಿಸಿಯೇ ತೀರುತ್ತೇನೆ ಎಂದು ಅವಾಜ್ ಹಾಕಿದ. ಕೊನೆವರೆಗೂ ಅರುಣ್ ಕುಮಾರ್ ಬಾಗಿಲು ತೆರೆಯಲೇ ಇಲ್ಲ. ಕಡೆಗೆ ಬಸ್ ಮುಂಭಾಗದ ಗ್ಲಾಸ್ ಜಖಂ ಮಾಡಿದ್ದ. ಈ ದೃಶ್ಯವನ್ನು ಬಸ್ ನಿರ್ವಾಹಕ ಹರೀಶ ಚಿತ್ರೀಕರಣ ಮಾಡಿದ್ದ. ನಂತರ ಬಂದ ಕಾರಿನಲ್ಲೇ ಮನು ಪರಾರಿಯಾಗಿದ್ದ.
ನಂತರ ಚಾಲಕ ನಗರ ಠಾಣೆಗೆ ದೂರು ನೀಡಿದ ಹಿನ್ನಲೆ ಕಾರ್ಯಾಚರಣೆ ಆರಂಭಿಸಿದ ನಗರಠಾಣೆ ఇನ್ ಸ್ಪೆಪೆಕ್ಟರ್ ಮೋಹನ್ ಕೃಷ್ಣ, ಪಿಎಸ್‌ಐ ಎಂ.ಎನ್.ಕುಮಾರ್ ನೇತೃತ್ವದ ತಂಡ ಕಳೆದ ರಾತ್ರಿ ಪುಡಿರೌಡಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ರಾತ್ರಿ ಹಾಸನಕ್ಕೆ ಕರೆ ತರುತ್ತಿದ್ದರು. ಶಾಂತಿಗ್ರಾಮ ಬಳಿಯ ಸೈಬರ್ಡ್ ಹೋಟೆಲ್ ಮೂತ್ರ ವಿಸರ್ಜನೆ ಮಾಡಬೇಕು ಎಂದು ತಿಳಿಸಿದ. ಪಿಎಸ್‌ಐ ಕುಮಾರ್ ಜೀಪ್ ನಿಲ್ಲಿಸಿದರು. ಮೂತ್ರ ವಿಜರ್ಸನೆ ಮಾಡುವ ನೆಪದಲ್ಲಿ ಕೆಳಗಿಳಿದು ಆತನ ಬೆಂಗಾವಲಾಗಿದ್ದ ಲೋಕೇಶ್ ಎಂಬ ಸಿಬ್ಬಂದಿಯನ್ನು ತಳ್ಳಿ, ಕಣ್ಣಿಗೆ ಮಣ್ಣು ಎರಚಿ ಕಲ್ಲು ತೂರಿದ್ದಾನೆ. ಪೆಟ್ಟಿನಿಂದ ಪೇದೆ ಕೂಗಿಕೊಂಡಿದ್ದಾನೆ. ಎಚ್ಚೆತ್ತ ಪಿಎಸ್‌ಐ ಕುಮಾರ್ ಹಲ್ಲೆ ಮಾಡದಂತೆ ಎಚ್ಚರಿಕೆ ನೀಡಿದರು.
ಆದರೂ ಕೇಳದ ಆರೋಪಿ, ಕೊಲೆ ಮಾಡಿದವನಿಗೆ ನೀವು ಯಾವ ಲೆಕ್ಕ ಎಂದು
ನಿಂದಿಸಿ ಮತ್ತೆ ಕಲ್ಲು ತೂರಲು ಮುಂದಾದಾಗ ಆತ್ಮರಕ್ಷಣೆಗಾಗಿ ಮನು ಕಾಲಿಗೆ ಗುಂಡು ಹಾರಿಸಿದರು. ಪೊಲೀಸರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಆರೋಪಿ ವಿರುದ್ದ ಮತ್ತೊಂದು ಪ್ರಕರಣ ದಾಖಲಾಗಿದೆ.
ಆದರೆ ಕ್ರಿಮಿನಲ್‌ನ ಪ್ಲಾನ್‌ನ್ನು ವಿಫಲಗೊಳಿಸಿದ ಪೊಲೀಸರು, ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಹಿಂದೆ ಒಂದು ಕೊಲೆ, ಮೂರು ಆಫ್ ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿರುವ ಮನು ಅಲಿಯಾಸ್ ಮನೋಜ್‌ಗೌಡ (23) ಏಟು ತಿಂದು ಸಿಕ್ಕಿಬಿದ್ದಿರುವ ಆರೋಪಿ.
previous post
next post