ವರದಿ ರಾಣಿ ಪ್ರಸನ್ನ
ಯಸಳೂರು ಹೋಬಳಿ ಚಂಗಡಿಹಳ್ಳಿ ಗ್ರಾಮದ ರಮೇಶ (22) ಇವರು ಆಗತಾನೇ ಖರೀದಿಸಿದ ಹೊಸ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತ ಪಟ್ಟ ಘಟನೆ ವರದಿ ಆಗಿದೆ .
ಸಕಲೇಶಪುರದಲ್ಲಿ ಶ್ರೀ ವೀರಭದ್ರೇಶ್ವರ ಮೋಟಾರ್ಸ್‌ನಲ್ಲಿ ಬಜಾಜ್ ಸಿಟಿ 100 ಬೈಕ್ ಖರೀದಿಸಿ ನಂತರ ಶ್ರೀ ರಾಮ ಫೈನಾನ್ಸ್‌ನಲ್ಲಿ ಲೋನ್ ಪ್ರಕ್ರಿಯೆ ಪೂರ್ಣಗೊಳಿಸಿ ಊರಿಗೆ ವಾಪಾಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಯುವಕನ ನಿರ್ಲಕ್ಷ್ಯದ ಚಾಲನೆಯಿಂದ ಡಿವೈಡರ್ ಗೆ ಡಿಕ್ಕಿಯಾಗಿರುವ ಈ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕೊಲ್ಲಹಳ್ಳಿ ಬಳಿ ನಡೆದಿದೆ ಎಂದು ಅಲ್ಲಿಯೇ ನೆರೆದಿದ್ದ ಜನರು ತಿಳಿಸಿದ್ದಾರೆ
ಮೇಲ್ಸೇತುವೆಯಿಂದ 20 ಮೀ. ದೂರದ ಡಿವೈಡರ್ ಗೆ ಡಿಕ್ಕಿಯಾಗಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
previous post
next post