ಶ್ರೀ ದತ್ತ ಜಯಂತಿ ಉತ್ಸವ ಪೂರ್ವಭಾವಿ ಬೈಠಕ್.
ಸಕಲೇಶಪುರ: ವಿಶ್ವ ಹಿಂದೂ ಪರಿಷದ್ ಸಕಲೇಶಪುರ ಮತ್ತು ಹೆತ್ತೂರು ವಿಭಾಗದ ಬೈಠಕ್ ಅನ್ನು ಲಯನ್ಸ್ ಹಾಲಿನಲ್ಲಿ ಕರೆಯಲಾಗಿತ್ತು.. ಇದರ ಅಧ್ಯಕ್ಷತೆಯನ್ನು ತಾಲೂಕು ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಬಿರಡಹಳ್ಳಿ ಬಾಲಕೃಷ್ಣ ವಹಿಸಿದ್ದರು.
ಡಿಸೆಂಬರ್ ನಲ್ಲಿ ನಡೆಯುವ ದತ್ತ ಜಯಂತಿ ಉತ್ಸವದ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಕರೆದು ಸಭೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು.. ಡಿಸೆಂಬರ್ 6ನೇ ತಾರೀಖಿನಿಂದ ದತ್ತ ಮಾಲೆಯನ್ನು ಧರಿಸುವುದು ಹಾಗೂ ಡಿಸೆಂಬರ್ 12 ನೇ ತಾರೀಕು ದತ್ತ ಸಂಕೀರ್ತನ ಯಾತ್ರೆ ಮತ್ತು ಡಿಸೆಂಬರ್ 14ರಂದು ದತ್ತ ಪಾದುಕೆಯ ದರ್ಶನಕ್ಕೆ ಸಕಲೇಶಪುರ ತಾಲೂಕಿನ ಎಲ್ಲಾ ಹಿಂದುಗಳು ಒಟ್ಟಾಗಿ ಚಿಕ್ಕಮಗಳೂರಿಗೆ ತೆರಳಲಾಗುವುದು ಎಂದು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಜಿಲ್ಲಾ ಮತ್ತು ತಾಲೂಕು ಪ್ರಮುಖರಾದ ಮಹಿಪಾಲ್ ಜಿ, ಹರೀಶ್ ಕರಡಿಗಲ್, ವಿಜಿ ಬಾಳೆಗದ್ದೆ, ಕಿಶೋರ್ ಬಾಳ್ಳುಪೇಟೆ ದಿಲೀಪ್ ಮತ್ತು ರವಿತೇಜ ಯಸಳೂರು , ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಭಾಗವಹಿಸಿದ್ದರು.