ವರದಿ ರಾಣಿ ಪ್ರಸನ್ನ
ಸಕಲೇಶಪುರದ ಹಾನುಬಾಳುವಿನಲ್ಲಿ ಗ್ರಾಮ ಸಭೆ ನಡೆಯಿತು.
ಈ ಬಾರಿಯ ಗಾಂಧಿ ಪುರಸ್ಕಾರಕ್ಕೆ ಭಾಜನವಾದ ತಮ್ಮ ಗ್ರಾಮ ಪಂಚಾಯಿತಿ ಕುರಿತು ಅಧ್ಯಕ್ಷರು ಹಾಗೂ ಪಿಡಿಓ ಹರೀಶ್ ಅವರು ಸಂತಸ ವ್ಯಕ್ತ ಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂತೋಷ್ ಅವರು ವಹಿಸಿದ್ದರು ಹಾಗು ನೋಡಲ್ ಅಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕರು ಪ್ರಕಾಶ್ ಕುಮಾರ್ ಅವರು ವಹಿಸಿದ್ದರು.
ಸಭೆಯ ಉದ್ಘಾಟನೆಯನ್ನು ಸಂತೋಷ್ ನೆರವೇರಿಸಿ ನಂತರ ಸಭೆಯಲ್ಲಿ ಎಲ್ಲಾ ಇಲಾಖೆಗಳ ಜೊತೆ ಚರ್ಚಿಸಲಾಯಿತು.
ಹಾನುಬಾಳುವಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹಲವು, ಜನಪರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದು ಪರಿಹಾರಕ್ಕೆ ಆಗ್ರಹಿಸಲಾಯಿತು.
ರಸ್ತೆ ಅಕ್ಕ ಪಕ್ಕದಲ್ಲಿ ಬೀಳುವ ಸಂಭವ ಇರುವ ಮರಗಳನ್ನು ಗುರುತು ಮಾಡಿ ಅವುಗಳನ್ನ ತೆರವು ಮಾಡಿ ತೆಗೆಯಬೇಕು, ಇದರಿಂದ ಮಳೆಗಾಲ ದಲ್ಲಿ ಗಾಳಿ ಮಳೆಗೆ ರಸ್ತೆಗೆ ಮರ ಬೀಳುವುದು ಮತ್ತು ರಸ್ತೆ ಪಕ್ಕದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಮೇಲೆ ಬಿದ್ದು ಕಂಬ ತುಂಡು ಆಗುವುದು, ಇದರಿಂದ ಪ್ರಾಣಾಪಾಯ ಆಗುವುದು ತಪ್ಪುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಯಿತು .
ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅಂತಹ ಮರಗಳನ್ನು ಗುರುತಿಸಿ ಕಾನೂನು ರೀತ್ಯಾ ಕಟಾವು ಮಾಡಲಾಗುವುದು ಎಂದು ತಿಳಿಸಿದರು.
ಇನ್ನು ಹಾನುಬಾಳು ಹೆತ್ತೂರು ಭಾಗದಲ್ಲಿ ಸಂಚಾರಿಸುವ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನ ಸಕಲೇಶಪುರದ ಹಳೆ ಬಸ್ ನಿಲ್ದಾಣದವರೆಗೂ ವಿಸ್ತರಿಸಬೇಕು,ಈಗಾಗಲೇ ಮನವಿ ಪತ್ರವನ್ನು ಕೆ ಎಸ್ ಆರ್ ಟಿ ಸಿ ಡಿಪೋ ಮ್ಯಾನೇಜರ್ ಅವರಿಗೆ 3 ತಿಂಗಳ ಮುಂಚೆ ಸಲ್ಲಿಸಲಾಗಿದೆ ಮತ್ತು ಸಕಲೇಶಪುರ ಹಾನುಬಾಳು ಮೂಡಿಗೆರೆ ಮಾರ್ಗವಾಗಿ ಸಂಚರಿಸುವ ಬಸ್ ಗಳನ್ನ ಪ್ರಯಾಣಿಕರು ಕೈ ಅಡ್ಡ ಹಾಕಿದ ಜಾಗದಲ್ಲಿ ನಿಲ್ಲಿಸುವ ಗ್ರಾಮೀಣ ಸಾರಿಗೆ ಬಸ್ ಗಳನ್ನಾಗಿ ಪರಿವರ್ತಿಸಿ, ಪ್ರತಿ 40 ನಿಮಿಷಕ್ಕೆ ಬಸ್ ಗಳನ್ನ ಮೂಡಿಗೆರೆ ಹಾಗು ಸಕಲೇಶಪುರ ಬಸ್ ನಿಲ್ದಾಣ ದಿಂದ ಸಂಚರಿಸುವಂತೆ ಮಾಡಬೇಕು, ಮತ್ತು ಈ ರೂಟ್ ಗೆ ಮೀಸಲಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಳ್ಳ ಲಾಯಿತು .
ಇನ್ನು ಸಕಲೇಶಪುರ ತಾಲ್ಲೂಕು ಕಚೇರಿಯಲ್ಲಿ ನಿವೇಶನ ರಹಿತರಿಗೆ ಎಲ್ಲ ದಾಖಲೆ ಕೊಟ್ಟರು 94 c ಅಡಿಯಲ್ಲಿ ನಿವೇಶನ ಮಂಜೂರು ಮಾಡುವ ಇಲಾಖೆ ಸಿಬ್ಬಂದಿ ಒಬ್ಬ, ಅರ್ಜಿ ಧಾರರಿಗೆ ತುಂಬಾ ಸತಾಯಿಸುತ್ತಿದ್ದು ಅವನ ಬಗ್ಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು .
ಕತ್ತಲು ಆಗುತ್ತಿದ್ದಂತೆ ರಸ್ತೆ ಅಕ್ಕ ಪಕ್ಕ ವಾಹನ ನಿಲ್ಲಿಸಿಕೊಂಡು ಎಣ್ಣೆ ಹೊಡೆದು ಎಲ್ಲಿಂದರಲ್ಲಿ ಉಪಯೋಗಿಸಿದ ಲೋಟ ಬಾಟಲ್ ಸಾಚೆಟ್ ಮತ್ತು ತಿಂಡಿ ತಿನಿಸಿನ ಕವರ್ ಗಳನ್ನ ಎಸೆದು ಮಾಲಿನ್ಯ ಮಾಡುವ, ವಾಹನದ ಮ್ಯೂಸಿಕ್ ಸಿಸ್ಟಮ್ ಅನ್ನು ಜೋರಾಗಿ ಹಾಕಿಕೊಂಡು ರಸ್ತೆ ಪಕ್ಕ ಇರುವ ಮನೆಗಳ ಸ್ಟ್ರೀಟ್ ಲೈಟ್ ನ ಕೆಳಗೆ ದಾಂದಲೆ ಮಾಡಿ ನೆಮ್ಮದಿ ಹಾಳು ಮಾಡುವ ಕುಡುಕ ಪುಂಡರ ಮೇಲೆ, ವಾಹನ ಸೀಜ್ ಹಾಗು ಅಂತ ವಾಹನ ಚಾಲಕರ ಚಾಲಕ ಪರವಾನಗಿಯನ್ನು ರದ್ದುಪಡಿಸುವಂತೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಪಂಚಾಯತ್ ಇಂದ ಪೊಲೀಸ್ ಹಾಗು ಅಬಕಾರಿ ಇಲಾಖೆಗೆ ನಿರ್ಣಯ ಕಳಿಸಿಕೊಡುವಂತೆ ಗ್ರಾಮಸ್ಥರಿಂದ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷ ಶೈಲಾ ರುದ್ರೇಶ್, ಸದಸ್ಯರುಗಳು, ಪಿಡಿಓ ಹರೀಶ್, ಗ್ರಾಮ ಕರಿಣಿಕರು ಆಸೀಫ್ , ಆರ್ ಐ ವೀರಾಜ್, ಇನ್ನಿತರ ಆಡಳಿತಾಧಿಕಾರಿಗಳು, ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.