ವರದಿ ರಾಣಿ ಪ್ರಸನ್ನ
ಅಲಂಕಾರಿಕ ತೋಟ ನಿರ್ವಹಣೆ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ
ಶ್ರೀ ಹಾಸನಾಂಬ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಹಾಗೂ ಹೇಮಾವತಿ ತೋಟಗಾರಿಕೆ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಫಲಪುಷ್ಪವನ್ನು ನಗರದ ಸಿಲ್ವರ್ ಜ್ಯೂಬಿಲಿ ಆರ್ಚಡ್ ಪಾರ್ಕ್‌ನಲ್ಲಿ ದಿನಾಂಕ: 26-10-2024 ರಿಂದ 29-10-2024 ರವರೆಗೆ ಪ್ರದರ್ಶನವನ್ನು ಆಚರಿಸಲಾಗುತ್ತಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಮನೆ/ ಖಾಸಗಿ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲೆ/ ಕಛೇರಿಗಳ ಅಂಗಳದಲ್ಲಿ ಆಲಂಕಾರಿಕ ತೋಟ ನಿರ್ವಹಣೆ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು ಆಸಕ್ತಿವುಳ್ಳ ನಗರದ ನಾಗರೀಕರು, ಖಾಸಗಿ ಸಂಸ್ಥೆಗಳು, ಸರ್ಕಾರಿ ಶಾಲೆ/ ಕಾಲೇಜು ಹಾಗೂ ಸರ್ಕಾರಿ ಕಛೇರಿಗಳು ದಿನಾಂಕ 22.10.2024 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಸಂತೇಪೇಟೆ, ಹಾಸನ ರವರ ಕಚೇರಿಗೆ ಸಂಪರ್ಕಿಸಿ, ನಿಗದಿತ ಅರ್ಜಿಯನ್ನು ಸಲ್ಲಿಸಿ ನೊಂದಾಯಿಸಿಕೊಳ್ಳಬಹುದು
ಸಾರ್ವಜನಿಕರಿಗೆ ದಿನಾಂಕ: 25.10.2024 ರಂದು ಪುಷ್ಪ ರಂಗೋಲಿ/ ಬಣ್ಣದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ. ಆದ್ದರಿಂದ ಆಸಕ್ತಿಯುಳ್ಳ ಸಾರ್ವಜನಿಕರು ಸದರಿ ಸ್ಪರ್ಧೆಯಲ್ಲಿ ಭಾಗವಹಿಸಲು ದಿನಾಂಕ: 21.10.2024 ರೊಳಗೆ ಕಛೇರಿಗೆ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಹಾಗೂ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ- 08172-269995 ಗೆ ಸಂಪರ್ಕಿಸುವಂತೆ ರಾಜ್ಯವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
previous post
next post