ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲ್ಲೂಕು ಕಚೇರಿಯಲ್ಲಿ ಕಡತಗಳ ವಿಲೇವಾರಿ ವಿಭಾಗ (ರೆಕಾರ್ಡ್ ರೂಂ ) ನಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್ (ಶಿವು )ಇನ್ನಿಲ್ಲ.
ಇಂದು ದಿನಾಂಕ ಏಪ್ರಿಲ್ 13 ಭಾನುವಾರ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ಸಮಯದಲ್ಲಿ ಗ್ರಾಮ ಸಹಾಯಕ ಶಿವರಾಜ್ ಹೃದಯಘಾತದಿಂದ ಮರಣ ಹೊಂದಿರುತ್ತಾರೆ
ಇವರ ತಂದೆ ಕುಮಾರ್ ಎನ್ನುವವರು ಸಹ ಬೆಳಗೋಡು ನಾಡ ಕಛೇರಿಯಲ್ಲಿ ಗ್ರಾಮ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಮರಣ ನಂತರ ಅವರ ಕೆಲಸ ಇವರಿಗೆ ದೊರಕಿತ್ತು. ಇವರು ತಾಯಿ ಮಂಜುಳಾ ಹಾಗೂ ಸಹೋದರನನ್ನು ಬಿಟ್ಟು ಅಗಲಿದ್ದಾರೆ. ಮನೆಗೆ ಇವರೆ ಆಸರೆಯಾಗಿದ್ದರು. ಇವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಚೇರಿ ಸಿಬ್ಬಂದಿಯವರು ಸಂತಾಪ ಸೂಚಿಸಿದ್ದಾರೆ.
previous post
next post