ವರದಿ ರಾಣಿ ಪ್ರಸನ್ನ
ಅಕ್ಕಮಹಾದೇವಿಯ ದೃಢತೆ, ಧೈರ್ಯವನ್ನ ಬೆಳೆಸಿಕೊಳ್ಳಬೇಕು = ಅರ್ಚನಾ ಜಯಂತ್
ನನ್ನ ನಂತರವು ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಬೇಕು ಎಂದು ಅಕ್ಕಮಹಾದೇವಿ ವೇದಿಕೆಗೆ ಒಂದು ಲಕ್ಷ ಧತ್ತಿ ದೇಣಿಗೆ ನೀಡಿದ ಅರ್ಚನಾ ಜಯಂತ್
ಸಕಲೇಶಪುರದಲ್ಲಿ ಅಕ್ಕಮಹಾದೇವಿ ವೇದಿಕೆ ವತಿಯಿಂದ ಅಕ್ಕ ಮಹಾದೇವಿ ಜಯಂತಿ.
ದಿನಾಂಕ 12 4 2025 ಶನಿವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಅಕ್ಕ ಮಹಾದೇವಿ ಜಯಂತಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಕೋಮಲಾ ದಿನೇಶ್, ಅಥಿತಿಯಾಗಿ ಆಗಮಿಸಿದ್ದ ಅರ್ಚನಾ ಜಯಂತ್ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಬಂದ ದಾರಿ ಅವರ ಹುಟ್ಟು ಸಾವು ಎಲ್ಲದರ ಕುರಿತು ಸವಿವಾರವಾಗಿ ತಿಳಿಸಿಕೊಟ್ಟರು ಇಂತಹ ಕಾರ್ಯಕ್ರಮಕ್ಕೆ ಮಹಿಳೆಯರೆಲ್ಲರೂ ಭಾಗವಹಿಸಬೇಕು. ಅತಿಯಾದ ಸಂಖ್ಯೆಯಲ್ಲಿ ಹಾಜರಾಗಬೇಕು ಎಂದರು.
ಅಕ್ಕಮಹಾದೇವಿಯ ವೇಷಭೂಷಣ ಸ್ಪರ್ಧೆ, ಹಾಗೂ ಅಕ್ಕಮಹಾದೇವಿಯ ವಚನ ಗಾಯನ ಸ್ಪರ್ಧೆ, ವೇದಿಕೆಯ ಕಾರ್ಯಕ್ರಮವನ್ನು ಮಾಡಲಾಯಿತು. ನಂತರ ಗೆದ್ದವರಿಗೆ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು.
ಹಾಗೆಯೇ ಭೀಮ ಜ್ಯುವೆಲರ್ಸ್ ನವರು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಅವರ ವತಿಯಿಂದ ಸ್ಪರ್ಧೆ ಹಾಗೂ ಲಕ್ಕಿ ಡಿಪ್ ಅನ್ನು ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿತ್ತು
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕೋಮಲ ದಿನೇಶ್, ಕಾರ್ಯದರ್ಶಿ ಗಾಯತ್ರಿ ಮುರುಗೇಶ್, ಖಜಾಂಚಿ ಸುಮಾ ಸೋಮಶೇಖರ್ , ಬಿಜೆಪಿ ಜಿಲ್ಲಾಧ್ಯಕ್ಷರು ನೇತ್ರ ಮಂಜುನಾಥ್, ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯನೀಯರು ಮಾಜಿ ಅಧ್ಯಕ್ಷರುಗಳು, ವಿವಿಧ ಸಂಸ್ಥೆಗಳಲ್ಲಿರುವ ಪದಾಧಿಕಾರಿಗಳು, ಹಾಗೂ ಎಲ್ಲಾ ಹಿರಿಯ, ಕಿರಿಯ ಸದಸ್ಯನಿಯರೆಲ್ಲರು ಭಾಗವಹಿಸಿದ್ದರು