ವರದಿ ರಾಣಿ ಪ್ರಸನ್ನ
ಶ್ರದ್ಧೆಯಿಂದ ಮಾಡುವ ಕೆಲಸ ಯಾವುದು ಕೀಳಲ್ಲ ಯಾವುದು ಮೇಲಲ್ಲ ನಾವು ಮಾಡುವ ಕೆಲಸದಲ್ಲಿ ಪ್ರೀತಿ ಹಾಗು ಶ್ರದ್ಧೆ ಇರಬೇಕು , ಇಂದು ಒಬ್ಬ ಮಹಿಳೆ ಸ್ವತಂತ್ರವಾಗಿ ಸ್ವ ಶಕ್ತಿಯಿಂದ ಇಂದು ಸಮಾಜದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಸದೃಢವಾದ ಜೀವನವನ್ನು ನಡೆಸುವ ಮೂಲಕ ತನ್ನ ಕುಟುಂಬವನ್ನು ನಿರ್ವಹಣೆ ಮಾಡುವ ಶಕ್ತಿಯನ್ನು ಹೊಂದಿದ್ದಾಳೆ ಎಂದು ಹೇಳಿದ ಸಕಲೇಶಪುರ, ಆಲೂರು , ಕಟ್ಟಾಯ ಶಾಸಕರಾದ ಸಿಮೆಂಟ್ ಮಂಜುನಾಥ್ ಅವರ ಪತ್ನಿ ಪ್ರತಿಭಾ ಮಂಜುನಾಥ್ ಅವರು ಹೇಳಿದರು.
ಸಕಲೇಶಪುರ ಈ ದಿನ ಪಟ್ಟಣದ ಮಲ್ಲಿಕಾರ್ಜುನ ಬಡಾವಣೆಯ ಸವಿತಾ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಕಲೇಶಪುರ ಬ್ಯೂಟಿ ಪಾರ್ಲ್ರ್ ಅಸೋಸಿಯೇಷನ್ ಪ್ರಾರಂಭೋತ್ಸವ ಹಾಗು ಉದ್ಘಾಟನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತರ ಸಂಘದ ಅದ್ಯಕ್ಷ ಜೈಭೀಮ್ ಮಂಜು ಅವರು ಕಾರ್ಯಕ್ರಮದಲ್ಲಿ ಮಾತನಾಡಿ ನಾವು ಮಾಡುವ ಕೆಲಸ ಯಾವುದೂ ಕೀಳಲ್ಲ. ನೀವೆಲ್ಲರೂ ಒಗ್ಗಟ್ಟಾಗಿದ್ದರೆ ಜಯ ಸಾದಿಸಲು ಸಾದ್ಯ, ವ್ಯಾಪಾರ ಹಾಗೂ ಉದ್ಯೋಗದಲ್ಲಿ ಇಂದು ಪರಸ್ಪರ ಸ್ಪರ್ಧೆಗಳು ನಡೆಯುತ್ತಿದ್ದು ಆಧುನಿಕತೆಗೆ ನಾವೆಲ್ಲರೂ ಹೊಂದಿಕೊಳ್ಳ ಬೇಕಾಗಿದ್ದು ಒಗ್ಗಟ್ಟಿದ್ದರೆ ಬಲವಿದೆ ಎನ್ನುವ ಹಾಗೆ ಒಗ್ಗಟ್ಟಿದ್ದರೆ ನಿಮ್ಮ ಸಂಘವು ಮತ್ತಷ್ಟು ಎತ್ತರಕ್ಕೆ ಬೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿ ನಿಮ್ಮ ಯಾವುದೇ ಕಾರ್ಯದಲ್ಲಿ ನಮ್ಮ ಸಹಕಾರವೂ ಇರುತ್ತದೆ ಎಂದು ಹೇಳಿದರು.
ಶಕುಂತಲಾ ಹಾಗು ಇನ್ನಿತರ ಸದಸ್ಯರು ಮಾತನಾಡಿ ನಾವು ಈ ಅಸೋಸಿಯೇಷನ್ ಮಾಡಿದ ಉದ್ದೇಶ ನಮ್ಮಿಂದಲೂ ಕೂಡ ಇತರೆ ಸಾಮಾಜಿಕ ಕೆಲಸಗಳನ್ನು ಮಾಡಬೇಕು. ಯುಟ್ಯೂಬ್ ಗಳನ್ನು ನೋಡಿಕೊಂಡು ಹಲವಾರು ಮಂದಿ ಪಾರ್ಲರ್ ಗಳನ್ನು ಪ್ರಾರಂಭಿಸಿ ನಿಷ್ಠೆಯಿಂದ ಮಾಡುವ ಪಾರ್ಲರ್ ನವರಿಗು ಕೂಡ ಇದರಿಂದ ತೊಂದರೆಯಾಗುತ್ತಿದೆ. ಹಾಗೆಯೇ ಪಾರ್ಲರ್ ಎನ್ನುವ ಹೆಸರಲ್ಲಿ ಅನ್ಯ ಚಟುವಟಿಕೆಗಳನ್ನು ಮಾಡುವಂತವರಿಗೆ ಕ್ರಮ ತೆಗೆದುಕೊಳ್ಳಲು ಈ ತರಹದ ಸಂಘ ಸಂಸ್ಥೆಗಳ ಅವಶ್ಯಕತೆ ಇದೆ ಹಾಗೆಯೇ ನುರಿತ ತಜ್ಞರಿಂದ ಹೆಚ್ಚಿನ ಅಭ್ಯಾಸಕ್ಕಾಗಿ ನಾವು ಬೆಂಗಳೂರು ಹಾಗು ಮೈಸೂರಿಗೆ ಹೋಗಬೇಕಾಗಿತ್ತು. ಅಸೋಸಿಯೇಷನ್ ಇದ್ದರೆ ಅವರೆಲ್ಲರೂ ಇಲ್ಲಿಗೆ ಬಂದು ನಮಗೆ ಹೆಚ್ಚಿನ ಶಿಕ್ಷಣವನ್ನು ನೀಡಬಹುದು ಎಂದು ಮಾತನಾಡಿದರು.
ಪ್ರಾಸ್ಥಾವಿಕವಾಗಿ ಸಕಲೇಶಪುರ ಬ್ಯೂಟಿ ಪಾರ್ಲರ್ನ ಸದಸ್ಯರಾದ ವಜ್ರ ಲೋಕೇಶ್ ಮಾತನಾಡಿ ಸಂಘದ ಉದ್ದೇಶಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಕಲೇಶಪುರ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ನ ಅದ್ಯಕ್ಷರಾದ ಸವಿತಾ, ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷರಾದ ಜೈಭೀಮ್ ಮಂಜು, ಪತ್ರಕರ್ತರು ಹಾಗೂ ರೋಟರಿ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್,ಮಲ್ನಾಡ್ ಶಾಡೋ ವೆಬ್ ಚಾನಲ್ ವರದಿಗಾರರಾದ ರಾಣಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಯೋಗೀಶ್ ಪಾರ್ಲರ್ ಸಂಘದ ನಿಶ್ಮಿತಾ ರವಿಕುಮಾರ್, ಶಕುಂತಲಾ, ಸುಮಾ ಆಳ್ವ , ಇನ್ನಿತರ ಸದಸ್ಯರು ಇದ್ದರು.
previous post
next post