ವರದಿ ರಾಣಿ ಪ್ರಸನ್ನ
ಎಂದೂ ಮರೆತರೂ ಮರೆಯಲಾಗದ ಮಾಣಿಕ್ಯ ಉಪನೊಂದಣಾಧಿಕಾರಿ ಅಜಯ್ ಕುಮಾರ್ ಅಪ್ಪ.
ಸಕಲೇಶಪುರದ ಅಜಯ್ ಕುಮಾರ್ ಅಪ್ಪ ರವರಿಗೆ ಇಂದು ವರ್ಗಾವಣೆಯ ಕಾರಣ ಬೀಳ್ಕೊಡುಗೆ ಸಮಾರಂಭ.
ಎಂದಿಗೂ ಯಾರ ಮನಸ್ಸನ್ನು ನೋಯಿಸದ , ಯುವಕರಿಗೆ ಸ್ಪೂರ್ತಿದಾಯವಾಗಿ , ವಯಸ್ಸಾದವರು ಬಂದರೆ ತಮ್ಮ ಕುರ್ಚಿಯ ಬೆಲೆಯನ್ನು ಇಟ್ಟುಕೊಳ್ಳದೆ ಅವರಿಗೆ ಗೌರವ ಸಲ್ಲಿಸುತ್ತಿದ್ದವರು.
ಯಾರೆ ವಯಸ್ಸಾದವರು ಬಂದರು ಅವರೇ ಸ್ವತಃ ಎದ್ದು ಬಂದು ಏನು ನಿಮ್ಮ ಕೆಲಸ ಏನಾಗಬೇಕಿತ್ತು ಎಂದು ವಿಚಾರಿಸಿ ಅವರನ್ನು ಕಾಯಿಸದೆ ಅವರೇ ಕಚೇರಿ ಸಿಬ್ಬಂದಿಯನ್ನು ಕರೆದು ಕೆಲಸ ಮಾಡಿಸಿಕೊಡುತ್ತಿದ್ದರು. ಎಲ್ಲಿಯೂ ಯಾವುದೇ ರೀತಿಯ ಹಣವನ್ನು ಪಡೆಯದೆ ಕೆಲಸ ಮಾಡಿ ಕೊಡುತ್ತಿದ್ದರು.
ಇಂತಹ ಮಾನವೀಯ ಗುಣವುಳ್ಳ ಉಪನೋಂದಣಾಧಿಕಾರಿ ನೋಡುವುದು ಇನ್ನು ಮರೀಚಿಕೆ.
ಯಾರೇ ಬಂದು ಯಾವುದೇ ರೀತಿಯ ಕೇಳಿದರು ತಾಳ್ಮೆಯಿಂದ ಕುಳಿತು ಅವರ ಸಮಸ್ಯೆಯನ್ನು ಆಲಿಸಿ ಯಾವ ರೀತಿ ಬಗೆಹರಿಸಬಹುದು ಎಂದು ಆಗಲೇ ಎಂಜಿನಿಯರ್ ಗಳಿಗೆ ಕರೆಯನ್ನು ತೆಗೆದುಕೊಂಡು ತಿಳಿಸಿಕೊಡುತ್ತಿದ್ದರು. ಯಾವುದೇ ಒಂದು ಮೀಟಿಂಗ್ ಗಳಿಗೂ ತಪಿಸಿಕೊಳ್ಳದೆ ತಮ್ಮ ವೃತ್ತಿ ಧರ್ಮವನ್ನು ಪೂಜಿಸಿದವರು ಇವರು, ತಮ್ಮ ವೃತ್ತಿ ಗೆ ನ್ಯಾಯ ಕೊಟ್ಟವರು ಇವರು
ಯಾವ ಪತ್ರ ಬರಹಗಾರರೊಂದಿಗೂ , ವಕೀಲರೊಂದಿಗೂ, ಸಿಬ್ಬಂದಿವರ್ಗದೊಂದಿಗೂ ಯಾವುದೇ ರೀತಿಯ ವೈಶಮ್ಯಗಳನ್ನು ಇಟ್ಟುಕೊಳ್ಳದೆ ಎಲ್ಲರಿಗೂ ಆಕಾರೆಯ ಪ್ರಿಯವಾಗಿದ್ದವರು ಇವರು . ಇವರು ಇಂದು ಹೋಗುತ್ತಿರುವುದು ನೋಂದಣಿ ಕಚೇರಿಯಲ್ಲಿ ಏನೋ ಕಳೆದು ಹೋದಂತೆ ಭಾಸವಾಗುತ್ತಿದೆ.
ಸಕಲೇಶಪುರದ ಪ್ರತಿ ಜನರಿಗೂ ತಮ್ಮ ಸರಳತೆ , ಸಜ್ಜನಿಕೆಯಿಂದ ಹೊಗಳಿಕೆಗೆ ಪಾತ್ರವಾದವರು ಇವರು.
previous post
next post