Blog

ಹೇಮಾವತಿಗೆ ಗಂಗಾರತಿ

ವರದಿ ರಾಣಿ ಪ್ರಸನ್ನ

ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮದ ನಿಮಿತ್ತ ಸಕಲೇಶಪುರ ಇತಿಹಾಸದಲ್ಲಿ ಮೊದಲ ಬಾರಿಗೆ 
ಹೇಮಾವತಿ ನದಿಯಲ್ಲಿ ಗಂಗಾ ಆರತಿ ಕಾರ್ಯಕ್ರಮ.

ಐತಿಹಾಸಿಕ ಪೂಜಾ ಕಾರ್ಯಕ್ರಮದಲ್ಲಿ  ಭಾಗಿಯಾದ ವಿರೋಧ ಪಕ್ಷದ ನಾಯಕ ಆರ್ ಅಶೋಕ್.

ಬೇರೆ ಬೇರೆ ತಾಲ್ಲೂಕುಗಳಿಂದಲು ಹರಿದು ಬಂದ ಭಕ್ತರು

ನಾಡಪ್ರಭು ಕೆಂಪೇಗೌಡ ಪ್ರತಿಮೆ ಉದ್ಘಾಟನೆ ಸಲುವಾಗಿ ಸಕಲೇಶಪುರಕ್ಕೆ ಆಗಮಿಸಿರುವ ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ  ಇವರನ್ನು ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿಮೆಂಟ್ ಮಂಜುರವರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

ಅವರು ಗುರುವಾರ ದಿ.ಪೆ 13 ರಂದು ಆಗಮಿಸಿ ಸಕಲೇಶಪುರದ ಇತಿಹಾಸದಲ್ಲೇ ಹಿಂದೆಂದೂ ಮಾಡದ ಹೇಮಾವತಿ ನದಿಯ ಮಧ್ಯದಲ್ಲಿ   ತಯಾರಿಸಿದ ಸುಂದರವಾದ ಸಭಾಂಗಣದಲ್ಲಿ  ತುಂಬಾ ಸುಂದರವಾಗಿ  ಹಾಗು ಭಕ್ತಿಪೂರ್ವಕವಾಗಿ , ಆಚರಿಸಲಾಯಿತು. ಜನರು ಕಣ್ಮನ ತುಂಬಿಕೊಳ್ಳುವಂತಿತ್ತು.

ಸ್ವಾಮೀಜಿಗಳನ್ನು ಶಾಸಕರು ಬರಮಾಡಿಕೊಂಡು ಮೊದಲ ಬಾರಿಗೆ ಹೇಮಾವತಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಬ್ರಹ್ಮ ರಥೋತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿ , ನಂತರ ಸಕಲೇಶ್ವರ ದೇವಸ್ಥಾನ ಹಾಗು ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಹೋಮವನ್ನು ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು ನಂತರ  ಗಂಗಾರತಿ ಮಾಡಲಾಯಿತು. ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದುದು ವಿಶೇಷ ಆಗಿತ್ತು

ಈ ಸಂದರ್ಭದಲ್ಲಿ  ನದಿಯ ತಟದಲ್ಲಿ ಶಾಸಕರಾದ ಸಿಮೆಂಟ್ ಮಂಜುನಾಥ್,  ಮುರಳಿ ಮೋಹನ್, ಜೈ ಮಾರುತಿ , ಹೆಚ್ ಕೆ ಕುಮಾರಸ್ವಾಮಿ, ಚಂಚಲ ಕುಮಾರಸ್ವಾಮಿ, ವಿರೋಧ ಪಕ್ಷದ ರಾಜ್ಯಾಧ್ಯಕ್ಷರು ಅಶೋಕ್,  ನಾಗೇಶ್ , ಸೋಮೇಶ್ವರ ಸ್ವಾಮೀಜಿ, ಕೈಲಾಸನಾಥ ಸ್ವಾಮೀಜಿ, ಅವರು ಭಾಗಿಯಾಗಿದ್ದರು.

Related posts

ಆಲೂರುನಲ್ಲಿ ಪ್ರತಿಭಾ ಪುರಸ್ಕಾರ

Bimba Prakashana

ಬಿಜೆಪಿ ಪಕ್ಷವನ್ನು ಬಲ ಪಡಿಸಲು ಎಲ್ಲರೂ ಶ್ರಮಿಸೋಣ

Bimba Prakashana

ತುಂತುರು ನೀರಾವರಿಗೆ ಅವಕಾಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More