ವರದಿ ರಾಣಿ ಪ್ರಸನ್ನ
ಸಕಲೇಶಪುರ ಶ್ರೀ ಸಕಲೇಶ್ವರ ದೇವಸ್ಥಾನದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಯಾವುದೇ ಗೊಂದಲ ಬೇಡ ಎಂದ ಶಾಸಕ ಸಿಮೆಂಟ್ ಮಂಜುನಾಥ್ .
ಆಮ್ಯೂಸ್ ಮೆಂಟ್ನಲ್ಲಿ ಕುಳಿತು ಸ್ವತಃ ಪರಿಕ್ಷಿಸಿದ ಶಾಸಕರು ಹಾಗು ಕುಟುಂಬಸ್ಥರು
ಸಕಲೇಶಪುರ ಶ್ರೀ ಸಕಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಕಾರ್ಯಕ್ರಮದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ದಂಪತಿ ಸಮೇತವಾಗಿ ಪಾಲ್ಗೊಂಡು ದೇವರ ದರ್ಶನಾಶೀರ್ವಾದ ಪಡೆದು ನಾಡಿನಾದ್ಯಂತ ಉತ್ತಮ ಮಳೆ ಬೆಳೆಗಳಾಗಲಿ ಎಂದು ಪ್ರಾರ್ಥಿಸಿದರು
ನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಅವರು ಭಾಗವಹಿಸಿದರು.
ಸಂಜೆ ನಡೆದ ಜಾತ್ರಾ ಸಭಾಂಗಣವನ್ನು ಅವರು ಉದ್ಘಾಟಿಸಿದರು.
ನಂತರ ವಸ್ತು ಪ್ರದರ್ಶನದ ಆಯೋಜಕರಾದ ಜಗದಾಂಬ ಆಮ್ಯೂಸ್ಮೆಂಟ್ ನ ಆಯೋಜಕರಾದ ಪ್ರವೀಣ್ ಅವರನ್ನು ಮಾತನಾಡಿಸಿ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಗಳು ಆಗದಂತೆ ಹಾಗು ಅವಘಡಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಸಿದರು.
ಶಾಸಕರೇ ಸ್ವತಃ ಕುಟುಂಬ ಸಮೇತರಾಗಿ ಹಾಗು ಪುರಸಭೆಯ ಸದಸ್ಯರೆಲ್ಲರೂ ಆಮ್ಯೂಸ್ ಮೆಂಟ್ ನಲ್ಲಿ ಕುಳಿತು ಪರೀಕ್ಷಿಸಿ ಮಾತನಾಡಿ ಜಾತ್ರೆಗೆ ಬರುವವರು ಯಾವುದೇ ಗೊಂದಲಗಳು ಇಲ್ಲದೆ ಜಾತ್ರೆಗೆ ಬಂದು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿಮೆಂಟ್ ಮಂಜುನಾಥ್, ಪ್ರತಿಭಾ ಮಂಜುನಾಥ್, ಪುರಸಭಾ ಅಧ್ಯಕ್ಷರು ಜ್ಯೋತಿ, ಪುರಸಭಾ ಸದಸ್ಯರುಗಳು ಭಕ್ತಾದಿಗಳು ಉಪಸ್ಥಿತರಿದರು.


