Blog

ಬಸವರಾಜು ಲೋಕಾಯುಕ್ತ ಬಲೆಗೆ

ವರದಿ ರಾಣಿ ಪ್ರಸನ್ನ

ಆಲೂರು ತಾಲ್ಲೂಕಿನ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಸವರಾಜು  ಲೋಕಾಯುಕ್ತರ ಬಲೆಗೆ.

ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜ್ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ವ್ಯಕ್ತಿಯೊಬ್ಬರಿಗೆ ಕೈಗಾರಿಕೆ ಇ-ಖಾತೆ ಮಾಡುವ ಸಲುವಾಗಿ ಬಸವರಾಜ್ ಅವರು  ಎರಡು ಲಕ್ಷ ರೂಪಾಯಿ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ. ಅವರು ಇ ಖಾತೆಗೆ 2 ಲಕ್ಷ ಕೊಟ್ಟರೆ ಮಾಡಿಕೊಡಲಾಗುವುದು ಎಂದು ಡಿಮ್ಯಾಂಡ್ ಇಟ್ಟಿದ್ದರು. ಇದರ ಪರ್ಯಾಯ ಅವರು ಮೊದಲ ಕಂತಿನಲ್ಲಿ 1.30ಲಕ್ಷ ರೂ. ವಸೂಲಿ ಮಾಡಿದ್ದರು. ಇಂದು 70,000 ರೂಪಾಯಿ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದೆ.

ಈ ದಾಳಿಯನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಮತ್ತು ಶಿಲ್ಪಾ ನೇತೃತ್ವದಲ್ಲಿ ನಡೆಸಲಾಯಿತು. ಅಧಿಕಾರಿಗಳು ಬಸವರಾಜು ಅವರಿಂದ ಲಂಚದ ಹಣವನ್ನು ವಶಪಡಿಸಿಕೊಂಡು ತನಿಖೆ  ಪ್ರಾರಂಭಿಸಿದ್ದಾರೆ.

Related posts

ಟೋಲ್ ಸಂಗ್ರಹಣೆ ವಿರುದ್ಧ ಹೋರಾಟ

Bimba Prakashana

ಅಭಿವೃದ್ಧಿಗಾಗಿ ಹೋರಾಟ – ಅಧಿಕಾರಿಗಳಿಗೆ ಮನವಿ ಮಾಡಿದ ಬಾಗೆ ಗ್ರಾಮ ಪಂಚಾಯತ್

Bimba Prakashana

ಹೆತ್ತೂರುಗೆ ಪುತ್ತಳಿ ಪ್ರಚಾರ ರಥ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More