Blog

ಆಲೂರುನಲ್ಲಿ ಪ್ರತಿಭಾ ಪುರಸ್ಕಾರ

ಆಲೂರು: ಶಿಕ್ಷಣವು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ನೆರವಾಗುತ್ತದೆ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ತಾಲೂಕು ವೀರಶೈವ ಲಿಂಗಾಯಿತ ಸಮಾಜದ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಜ್ಞಾನ ಸಶಕ್ತವಾದದ್ದು ಅದು ಕೊಡುವ ಬಲದಿಂದ ವ್ಯಷ್ಟಿ ಹಾಗೂ ಸಮಷ್ಟಿಯ ಅಜ್ಞಾನದ ತಮಂಧತೆಯನ್ನು ದೂರ ಮಾಡಿ ವಿವೇಕದ ಬೆಳಕನ್ನು ಮೂಡಿಸಬಹುದು. ಜ್ಞಾನದ ಬೆಳಕಲ್ಲಿ ಸಾಗಿದಾಗ ಲೋಕ ಸುಜ್ಞಾನಗೊಳ್ಳುತ್ತದೆ. ವಿದ್ಯಾರ್ಥಿನಿಯರು ಪದವಿಯೊಂದಿಗೆ ತಮ್ಮ ಜ್ಞಾನವನ್ನು ವಿವೇಕವನ್ನು ಉದ್ದೀಪಿಸಿಕೊಂಡು ಸಮಾಜಕ್ಕೆ ಬೆಳಕಾಗಬೇಕು ಎಂದರು.

ತಾಲೂಕು ವೀರಶೈವ ಸಂಘದ ಅಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ವಿದ್ಯಾರ್ಥಿನಿಯರು ಪರಿಶ್ರಮದಿಂದ ಓದಿದರೇ ಖಂಡಿತ ಯಶಸ್ಸು ಪಡೆಯಬಹುದು. ಸಮಾಜದಲ್ಲಿ ಅನೇಕ ವಿದ್ಯಾರ್ಥಿಗಳು ಕಡುಬಡತನದಲ್ಲಿಯೇ ಓದಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಕಷ್ಟು ಉದಾಹರಣೆಗಳಿವೆ.  ಕಷ್ಟಗಳಿಗೆ ಕೊರಗದೆ ಛಲದಿಂದ ಮುನ್ನುಗ್ಗಿದಾಗ ಮಾತ್ರ ಸಾಧನೆ ನಮ್ಮದಾಗುತ್ತದೆ. ಪದವಿಯೊಂದಿಗೆ ಸಂಸ್ಕಾರ ಬೆಳಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಲೆಕ್ಕಪತ್ರಗಳನ್ನು ಓದಿ ಅಂಗಿಕರಿಸಲಾಯಿತು ನಂತರ ಪ್ರತಿವರ್ಷದಂತೆ ಈ ವರ್ಷವೂ ಸಹ ಕಾರ್ಜುವಳ್ಳಿ ಹಿರೇಮಠದಿಂದ ಲಿಂ. ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸ್ಮರಾಣಾರ್ಥವಾಗಿ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ 4 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು.
ಕಾರ್ಯಕ್ರಮದಲ್ಲಿ ಸಂಕಲಾಪುರ ಮಠದ ಪೀಠಾಧ್ಯಕ್ಷ ಶ್ರೀ ಧರ್ಮರಾಜೇಂದ್ರ ಸ್ವಾಮೀಜಿ, ಆಖಿಲ ಭಾರತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಅಜಿತ್ ಚಿಕ್ಕಕಣಗಾಲು, ಉಪಾಧ್ಯಕ್ಷ ಜಯಣ್ಣ, ಪ್ರಧಾನ ಕಾರ್ಯದರ್ಶಿ ಎಸ್.ಎಸ್ ಶಿವಮೂರ್ತಿ, ಸಹ ಕಾರ್ಯದರ್ಶಿ ಡಾ.ಜಯರಾಜ್, ಖಜಾಂಚಿ ಟೀಕರಾಜು, ನಿದೇರ್ಶಕರಾದ ಉಮಾರವಿಪ್ರಕಾಶ್, ಮೋಹನ್ ಅಬ್ಬನ, ಹೆಮಂತ್, ನಟರಾಜ್, ಸಂದೀಪ, ಕಾಂತರಾಜು, ಶಾಂತರಾಜು, ಸೋಮಶೇಖರ್, ನಂಜೇಶ್, ಸಂತೋಷ್ ಸೇರಿದಂತೆ ಮುಂತಾದವರು ಹಾಜರಿದ್ದರು.

Related posts

ಸಚಿವರ ಮೇಲೆ ಕೇಸು ದಾಖಲಿಸಿದ ರಘು

Bimba Prakashana

ರಂಗೋಲಿ ಹಾಗೂ ತೋಟ ನಿರ್ವಹಣೆ ಸ್ಪರ್ಧೆ

Bimba Prakashana

ಮಂಜರಾ ಬಾದ್ ಕೋಟೆ ಗೆ ಪ್ರವಾಸಿಗರು – ಹೆಚ್ಚುತ್ತಿದೆ ಟ್ರಾಫಿಕ್ ಜಾಮ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More