ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿ ದೇವಲಕೆರೆ ಗ್ರಾಮದಲ್ಲಿರುವ ಹೊಂಬಾಳೆ ಹೋಂ ಸ್ಟೇ ಗೆ ಸಂಜೆ ಸುಮಾರು 5:00 ಗಂಟೆಗೆ ಬೃಹತ್ ಗಾತ್ರದ ಕಾಡುಕೋಣ ಕಾಣಿಸಿಕೊಂಡಿದೆ ಇದರ ಕುರಿತು ಹೋಮ್ ಸ್ಟೇ ಮಾಲಿಕರಾದ ಆದಿ ಗಣೇಶ್ ಅವರು ದೃಶ್ಯಗಳನ್ನು ಸೆರೆ ಹಿಡಿದು ದೂರವಾಣಿ ಮೂಲಕ ಸಂಪರ್ಕಿಸಿ ತಿಳಿಸಿದ್ದಾರೆ.
ಈ ಕಾಟಿಯನ್ನು( ಕಾಡುಕೋಣ )ವನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ. ಹಾಗೆಯೇ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
ಇದರ ಕುರಿತು ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಆದಿ ಗಣೇಶ್ ಅವರು ತಿಳಿಸಿದ್ದಾರೆ.
previous post
next post