ವರದಿ ರಾಣಿ ಪ್ರಸನ್ನ
ಸಕಲೇಶಪುರ ಹಲವು ಭಾಗಗಳಲ್ಲಿ ಯುವಕರು ಮಾದಕ ವ್ಯಸನಕ್ಕೆ ಜಾರುತ್ತಿದ್ದಾರೆ.
ಎಲ್ಲೆಂದರಲ್ಲಿ ಯುವಕರು ಮಾದಕ ವಸ್ತುಗಳಾದ ಗಾಂಜಾ , ಎಣ್ಣೆ, ಸಿಗರೇಟ್ , ಬಳಸಿ ಕುಟುಂಬಕ್ಕೂ ಹಾಗು ಸಮಾಜಕ್ಕೂ ಮಾರಕವಾಗುತ್ತಿದ್ದಾರೆ.
ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಮೂಡಿಸಲು ಹಾಗೂ ಸಕಲೇಶಪುರ ನಗರವನ್ನು ಮಾದಕ ವ್ಯಸನ ಮುಕ್ತ ನಗರವನ್ನಾಗಿ ಮಾಡುವ ಸದುದ್ದೇಶದಿಂದ ಇಂದು ಎಸ್.ಕೆ.ಎಸ್.ಎಸ್.ಎಫ್. ಹಾಸನ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ವಿಜಿಲೆಂಟಾ ವಿಖಾಯದ ಸಂಯುಕ್ತಾಶ್ರಯದಲ್ಲಿ ವಿಖಾಯ ದಿನದ ಅಂಗವಾಗಿ ಇಂದು ನಗರದ ತೇಜಸ್ವಿ ಸರ್ಕಲ್‌ನಿಂದ ಪುರಭವನದ ವರೆಗೆ ಮಾದಕ ವ್ಯಸನಗಳ ವಿರುದ್ಧ ಜನಜಾಗೃತಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡು ಪಟ್ಟಣದ ಹಳೆ ಬಸ್‌ನಿಲ್ದಾಣದಲ್ಲಿ ಬಹಿರಂಗ ಸಭೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಾಧಕ ವ್ಯಸನಗಳ ವಿರುದ್ದ ಎಸ್.ಕೆ.ಎಸ್.ಎಸ್.ಎಫ್.ಇಬ್ರಾಹಿಂ ಬಾತಿಷ ಕೊಡ್ಲಿಪೇಟೆ, ಸಹಚಾಲಕರು , ಸಕಲೇಶಪುರ ಯುವಕರು ಪಾಲ್ಗೊಂಡಿದ್ದರು
previous post
next post