ವರದಿ ರಾಣಿ ಪ್ರಸನ್ನ
ಹೆತ್ತೂರು ಹೋಬಳಿ ಅಡ್ರಹಳ್ಳಿ ಆನಂದ್ ಅವರ ಶೆಡ್ನಲ್ಲಿ ಇಂದು ನಾಗರಹಾವು ಕಾಣಿಸಿಕೊಂಡಿದೆ .
ಅದೇ ಗ್ರಾಮದ ನಾಗರಾಜ್ ಅವರು ಕೂಡಲೆ ಚಂಗಡಹಳ್ಳಿಯ ಸ್ನೇಕ್ ರವಿಯವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಬರಲು ಹೇಳಿದ್ದಾರೆ.
ಕರೆಗೆ ಸ್ಪಂದಿಸಿದ ಸ್ನೇಕ್ ರವಿ ಅವರು ಅಲ್ಲಿಗೆ ಧಾವಿಸಿ ನಾಗರ ಹಾವನ್ನು ಸೆರೆ ಹಿಡಿದಿರುವ ಘಟನೆ ನಡೆದಿದೆ. ಹಿಡಿದ ನಂತರ ಉರಗವನ್ನು ಕಾಡಿಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ನೇಕ್ ರವಿ ಅವರು ಹಿಡಿದಿರುವ 2374 ನೇ ಹಾವು ಇದಾಗಿರುತ್ತದೆ ಎಂದು ತಿಳಿಸಿದ್ದಾರೆ .
ಯಾರಿಗೂ ಯಾವುದೇ ತರಹದ ಹಾನಿ ಸಂಭವಿಸಿಲ್ಲ.
previous post
next post