ವರದಿ ರಾಣಿ ಪ್ರಸನ್ನ
,ಸಕಲೇಶಪುರ ವಿಧಾನಸಭಾ ಕ್ಷೇತ್ರದ ಸಕಲೇಶಪುರ ತಾಲ್ಲೂಕಿನ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಮಿತಿಯ ಅಧ್ಯಕ್ಷರು ಆದಂತ ಮುರಳಿ ಮೋಹನ್ ರವರು ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಸಮಿತಿಯ ಮಾಸಿಕ ಪರಿಶೀಲನ ಸಭೆಯನ್ನ ಇಂದು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದರು .
ಈ ಸಭೆಗೆ ಐದು ಗ್ಯಾರಂಟಿ ಯೋಜನೆ ಗಳಿಗೆ ಸಂಬಂಧಿಸಿದ ಅಧಿಕಾರಿಗಳು ತಾಲ್ಲೂಕು ದಂಡಾಧಿಕಾರಿಗಳು ಕಾರ್ಯನಿರ್ವಣಅಧಿಕಾರಿಗಳು ಪುರಸಭೆಯ ಮುಖ್ಯ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರುಗಳು ಆಗಮಿಸಿ ಐದು ಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ಎಲ್ಲಾ ಜನತೆಗೆ ಶೇಕಡ 96% ರಷ್ಟು ತಲುಪಿದ್ದು ಕೇವಲ 4% ತಲುಪದೇ ಇದ್ದ ತಾಂತ್ರಿಕ ಕಾರಣಗಳಿಂದಾಗಿ ಅಡಚಣೆಯಾಗಿದ್ದು ಬಹುಬೇಗ ಅದನ್ನು ಕೂಡ ಫಲಾನುಭವಿಗಳಿಗೆ ತಲುಪಿಸುವಂತೆ ತಿಳಿಸಿದರು.
ನಂತರ ಅಧ್ಯಕ್ಷರು ಮಾತನಾಡಿ ತಾಲ್ಲೂಕಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಬಡವರಿಗು ಈ ಯೋಜನೆಗಳು ತಲುಪಬೇಕು ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಿ ಕೆಲಸವನ್ನು ನಿರ್ವಹಿಸಬೇಕೆಂದು ತಿಳಿಸಿದರು
ಈ ಸಂದರ್ಭದಲ್ಲಿ ಐದನೇ ಗ್ಯಾರಂಟಿ ಯೋಜನೆಯದಂತಹ ಯುವ ನಿಧಿ ಯೋಜನೆಯ ಅರ್ಜಿ ಹಾಕುವ ಪೋಸ್ಟರ್ ಬಿಡುಗಡೆ ಮಾಡಿ ಈ ಯೋಜನೆಯನ್ನು ಫಲಾನುಭವಿಗಳು ಪಡೆಯಬೇಕು ಅದನ್ನ ತಲುಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸದಸ್ಯರುಗಳು ಕಾರ್ಯಾ ನಿರ್ವಹಿಸಬೇಕೆಂದು ತಿಳಿಸಿದರು.
ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಈ ಅವಧಿಯಲ್ಲಿ ಕೆಲ ಗ್ರಾಮಗಳಲ್ಲಿ ಜನರಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಸರ್ಕಾರವು ಉಚಿತ ವಿದ್ಯುತ್ ನೀಡಿದರೂ, ಅವುಗಳ ಸಮರ್ಪಕ ವಿತರಣೆಗೆ ಸಂಬಂಧಿಸಿದಂತೆ ನಾವು ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ ಬೇಸಿಗೆಯಲ್ಲಿ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು
, ‘ಸಾರಿಗೆ ಬಸ್‌ಗಳ ಸ್ಥಿತಿಗತಿ ಬಗ್ಗೆ ಕೂಡ ಚರ್ಚೆ ಮಾಡಲಾಗಿದೆ. ಸರಕಾರದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಮತ್ತು ಈ ಯೋಜನೆಗಳ ಅನುಷ್ಠಾನದಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಸಹ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ ಎಂದರು.
ಅನ್ನಭಾಗ್ಯ ಯೋಜನೆ, ಗೃಹ ಲಕ್ಷ್ಮೀ ಯೋಜನೆ, ಗೃಹ ಜ್ಯೋತಿ ಯೋಜನೆ, ಯುವ ನಿಧಿ ಯೋಜನೆ,ಶಕ್ತಿ ಯೋಜನೆಯ ಪ್ರಗತಿ ವರದಿ ಬಗ್ಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ, ತಮ್ಮ ಪ್ರಗತಿ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೇಘನಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್, ಪುರಸಭಾ ಮುಖ್ಯ ಅಧಿಕಾರಿ ಮಹೇಶ್ವರಪ್ಪ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರೀಶ್ ಇದ್ದರು.
ಸಭೆಯಲ್ಲಿ ಗ್ಯಾರಂಟಿ ಸಮತಿ ಸದಸ್ಯರಾದ ಹಸೀನಾ ಹುರುಡಿ, ಸಾದತ್ ಆಲಿ ,ಮನೋಜ್ ವಿ.ಆರ್, ಸಿ.ಆರ್ ಚಂದ್ರಶೇಖರ್ ವೆಂಕಟೇಶ್, ಮಮತ,ಶೇಕ್ ಅಬ್ದ, ಪುಟ್ಟರಾಜು ಜಿ.ಕೆ, ಪುನೀತ್ ಜಿ.ಈ ,ಬಿ.ಹೆಚ್ ಯಶವಂತ್ ಕುಮಾರ್ ಹೆಚ್.ಕೆ ಹರ್ಷ,ಗಗನ್ ಕುಮಾರ್ ಹೆಚ್.ಸಿ, ಹೆಚ್.ಡಿ ಚೇತನ್ ಕುಮಾರ್ ಹಾಜರಿದ್ದರು
