ವರದಿ ರಾಣಿ ಪ್ರಸನ್ನ
ಗುಳಗಳಲೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ
ಗುಳಗಳಲೆ ದೇವಸ್ಥಾನ ಕಾರ್ಯವು ಮೂರು ದಿನಗಳಿಂದ ಜನವರಿ 31 ರಿಂದ ನಡೆಯುತ್ತಿದ್ದು ಇಂದು ಬಸವಣ್ಣನವರನ್ನು ಪ್ರತಿಷ್ಟಾಪಿಸುವ ದಿನವಾಗಿದ್ದು ಹಾಗು ಕೊನೆಯ ದಿನವಾಗಿದೆ .
ಇಂದು ಗುಲಗಳಲೆಯಲ್ಲಿ
ದಿನಾಂಕ 3/2/2025 ರಂದು
ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರು
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಹಾಸನ ಕೊಡಗು ಇವರು
ಇಂದು ಬೆಳಿಗ್ಗೆ ಬ್ರಾಹ್ಮ ಲಗ್ನದ ಶುಭ ಮುಹೂರ್ತದಲ್ಲಿ ಬೆಳಗ್ಗೆ 3-00 ಘಂಟೆಯಿಂದ 3 55ರ ವರೆಗೆ ಪ್ರಾಣ ಪ್ರತಿಷ್ಠಾಪನೆ ಅಭಿಷೇಕ ನಡೆದಿದೆ ಎಂದು ತಿಳಿಸಿದ್ದಾರೆ. ನಂತರ
ಶ್ರೀ ಷ|| ಬ್ರ|| ಸದಾಶಿವ ಶಿವಾಚಾರ್ಯ ಸ್ವಾಮಿಗಳು
ಶ್ರೀ ಸಂಸ್ಥಾನ ಹಿರೇಮಠ, ಕಾರ್ಜವಳ್ಳಿ, ಇವರ ಅಮೃತ ಹಸ್ತದಿಂದ ನೇತ್ರೋನ್ನಿಮಿಲ, ಮಂತ್ರೋಪದೇಶ, ನಂತರ ಕಳಸಾರೋಹಣ, ಪೂರ್ಣಹುತಿ, ಅರ್ಚನೆ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರಲಿದೆ.
ನಂತರ ಸಭಾ ಕಾರ್ಯಕ್ರಮ ಸಹ ನೆರವೇರಲಿದ್ದು ಶಾಸಕರು ಹಾಗು ಪೂಜ್ಯ ಸ್ವಾಮೀಜಿಗಳ ಹಿತವಚನಗಳನ್ನು ಸಹ ನೀಡಲಿದ್ದಾರೆ.
ಪೂಜಾ ಕಾರ್ಯಕ್ರಮದ ಪ್ರಧಾನ ಅರ್ಚಕರು :
ಶ್ರೀ ಶಿವಲಿಂಗಯ್ಯ , ಬೆಳಗೋಡು
ಭಕ್ತಾಧಿಗಳು ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೆ ತಾವುಗಳು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ, ತನು, ಮನ, ಧನಗಳ ಸಹಕಾರದೊಂದಿಗೆ, ಶ್ರೀ ಬಸವೇಶ್ವರ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.ಸರ್ವ ಭಕ್ತಾದಿಗಳಿಗೂ ಸುಸ್ವಾಗತ ಎಂದು ಶ್ರೀ ಬಸವೇಶ್ವರ ಸೇವಾ ಸಮಿತಿ (ರಿ.) ತಿಳಿಸಿದ್ದಾರೆ

