ವರದಿ ರಾಣಿ ಪ್ರಸನ್ನ
ಮಾನವೀಯತೆ ಮೆರೆದ ಹಾಸನ ಮೂಲದ ಪಿ ಎಸ್ ಐ ಪ್ರಸನ್ನಕುಮಾರ್ , ಹಾಗು ಸಕಲೇಶಪುರದ ಕೃಷ್ಣಪ್ಪ.
ಸಕಲೇಶಪುರದ ರಾಷ್ಟ್ರೀಯ ಹೆದ್ದಾರಿ 75 ರ ಮಳಲಿ ಗ್ರಾಮದ ಬಳಿ ರಾತ್ರಿ 10ರ ಸಮಯದಲ್ಲಿ 4 ಸಾಕು ಹಸುಗಳು ಹಾಗು ರಿಟ್ಜ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ.
ಈ ಸಂದರ್ಭದಲ್ಲಿ ಆ ಹಾದಿಯಾಗಿ ಹೋಗುತಿದ್ದ ಪಿ ಎಸ್ ಐ ಪ್ರಸನ್ನಕುಮಾರ್ ರವರು ಹಸುಗಳಿಗೆ ನೀರು ಕುಡಿಸಿದ್ದಾರೆ ತಕ್ಷಣವೇ ಪಶು ವೈದ್ಯರಿಗೆ ಕರೆ ಮಾಡಿದ್ದಾರೆ ಆದರೆ ಅಪಘಾತದಲ್ಲಿ ಒಂದು ಹಸುವಿನ ಪ್ರಾಣಪಕ್ಷಿ ಹಾರಿಹೋಗಿದ್ದು ಮೂರು ಹಸುಗಳನ್ನು ಪಶು ಚಿಕಿತ್ಸಾಲಯಕ್ಕೆ ರವಾನಿಸೋವರೆಗೂ ಅಲ್ಲಿಯೇ ಇದ್ದು ನಂತರ ತೆರಳಿದ್ದಾರೆ. ಸಕಲೇಶಪುರದ ಕೃಷ್ಣಪ್ಪರವರು ಕೂಡ ದನಗಳ ಆರೈಕೆ ಮಾಡಿದ್ದಾರೆ
ಹಸುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಿರುತ್ತಾರೆ ಅವರ ಬೇಜಬ್ದಾರಿತನದಿಂದಲೇ ಇಂದು ಈ ಘಟನೆ ಸಂಭವಿಸಿದೆ. ಸಂಜೆ ಆಗುತ್ತಲೇ ಕಟ್ಟಿಹಾಕಬೇಕೆಂಬ ಪರಿಜ್ಞಾನ ಸಹ ಇರುವುದಿಲ್ಲ. ಈ ದಾರಿಯಲ್ಲಿ ಎಲ್ಲಾ ಗಾಡಿಗಳು ವೇಗವಾಗಿಯೇ ಚಲಿಸುತ್ತಿರುತ್ತವೆ. ರಸ್ತೆಯಲ್ಲಿ ಹೋಗುವ ದನಗಳು ಅಪಘಾತಕ್ಕೆ ಒಳಗಾಗುತ್ತವೆ


