ವರದಿ ರಾಣಿ ಪ್ರಸನ್ನ
ಹೆತ್ತೂರಿನಲ್ಲಿ ಶಾಲಾ ಹಾಗು ಕಾಲೇಜು ವಿದ್ಯಾರ್ಥಿಗಳಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆದಿದೆ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಸರ್ವೆ ನಂಬರ್ 302 ರಲ್ಲಿ ಟ್ರಾನ್ಸ್ ಫಾರ್ಮ್ಅನ್ನು ಕೆ ಪಿ ಎಸ್ ಶಾಲೆಯ ಬಳಿಗೆ ಸ್ಥಳಾಂತರಿಸಿದ್ದ ವಿಚಾರವಾಗಿ ಈ ಹಿಂದೆ ಫೆಬ್ರವರಿ 21-22 ರಂದು ಸಹಾಯಕ ಅಭಿಯಂತರವರಿಗೆ ಪತ್ರದ ಮುಖೇನ ವಿಚಾರ ತಿಳಿಸಲಾಗಿತ್ತು.
ಈ ವಿಚಾರ ತಿಳಿದು ಸ್ಥಳಕ್ಕೆ ಬಂದು ಪರಿಶೀಲಿಸಿ 15 ರಿಂದ 20 ದಿನಗಳೊಳಗೆ ಸಮಸ್ಯೆ ಬಗೆಹರಿಸಿಕೊಡುವುದಾಗಿ ಹೇಳಿದ್ದರು.
ಆದರೆ ಒಂಬತ್ತು ತಿಂಗಳಾದರೂ ಸಮಸ್ಯೆ ಬಗೆಹರಿಸಿಲ್ಲ. ಕಾಲಹರಣ ಮಾಡಿಕೊಂಡು ಈ ಸದರಿ ಜಾಗದಲ್ಲಿ ಪ್ರತಿನಿತ್ಯ 300 ರಿಂದ 400 ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವುದರಿಂದ ಅನಾಹುತ ಆಗುವ ಸಾಧ್ಯತೆ ಇದೆ ಹಾಗೆ ಸದರಿ ಜಾಗದಲ್ಲಿ ಕೆಪಿಎಸ್ ಶಾಲೆಯ ಎಲ್ ಕೆ ಜಿ ಮತ್ತು ಯು ಕೆ ಜಿ ಯ ಕೊಠಡಿಗಳಿದ್ದು ಭಾರಿ ಅನಾಹುತ ಸಂಭವಿಸಬಹುದಾಗಿದೆ
ಈ ಸಮಸ್ಯೆಯನ್ನು ಚಸ್ಕಾಂ ಅಧಿಕಾರಿಗಳು ಕೂಡಲೇ ಬಗೆಹರಿಸದಿದ್ದಲ್ಲಿ ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸುವುದಾಗಿ ಈ ಮೂಲಕ ಎಚ್ಚರಿಸಿದ್ದಾರೆ