ವರದಿ ರಾಣಿ ಪ್ರಸನ್ನ
ಚಿನ್ನಹಳ್ಳಿ ಗ್ರಾಮದ ರಸ್ತೆ ಹಾಗು ಬಾಳುಪೇಟೆ ರಸ್ತೆಯ ಅವ್ಯವಸ್ಥೆ
ಸಕಲೇಶಪುರ ತಾಲೂಕು ಹಾಗು ಆಲೂರು ತಾಲ್ಲೂಕು ಎರಡು ತಾಲ್ಲೂಕನ್ನು ಕೂಡಿಸುವ ಈ ಚಿನ್ನಹಳ್ಳಿ ಗ್ರಾಮದ ರಸ್ತೆ ಅವ್ಯವಸ್ಥೆ ಹೇಳ ತೀರದು. ಬಾಳುಪೇಟೆಯಿಂದ ಸಕಲೇಶಪುರಕ್ಕೆ , ಚಿನ್ನಹಳ್ಳಿಯಿಂದ ಮಗ್ಗೆಗೆ , ಆಲೂರಿಗೆ, ಅಬ್ಬನ ಗ್ರಾಮಕ್ಕೆ ಕೂಡುವ ಈ ರಸ್ತೆಯಲ್ಲಿ ಹೋಗಲು ಸಾಧ್ಯವೇ ಇಲ್ಲ. ಇದೇ ಪರಿಸ್ಥಿತಿ ಬಾಳು ಪೇಟೆಯದ್ದು, ಪೇಟೆಯೆಂದು ಹೆಸರಿರುವುದು ಅಷ್ಟೇ ! ಆದರೆ ಹೆದ್ದಾರಿ ರಸ್ತೆಗೆ ಕೂಡಿಕೊಂಡು ಇರುವ ಈ ರಸ್ತೆಗೆ ಇನ್ನು ಗುಂಡಿ ಮುಚ್ಚುವ ರಸ್ತೆ ಸರಿಪಡಿಸುವ ಭಾಗ್ಯ ಒದಗಿ ಬಂದಿಲ್ಲ.
ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು ಪ್ರತಿದಿನ ವಿದ್ಯಾರ್ಥಿಗಳು,ಗ್ರಾಮಸ್ಥರು ಈ ರಸ್ತೆಯಲ್ಲಿ ತಿರುಗಾಡಲು ಹರಸಾಹಸ ಪಡುವಂತಾಗಿದೆ.
ಮಳೆಯಿಂದ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿ ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಾಡುವಂತಾಗಿದೆ . ಈ ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮನೆಗಳಿದ್ದು ಸಾವಿರಕ್ಕೂ ಹೆಚ್ಚು ಜನರು ವಾಸಮಾಡುತ್ತಿದ್ದಾರೆ . ಈ ಗ್ರಾಮದ ರಸ್ತೆಯ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ಮಾಧ್ಯಮದ ಮೂಲಕ ತರುತ್ತಿದ್ದೇವೆ ಎಂದು ಆದಿ ದ್ರಾವಿಡ ಸಂಘದ ಜಿಲ್ಲಾಧ್ಯಕ್ಷರು ಶಂಕರ್ ಅವರು ತಿಳಿಸಿದ್ದಾರೆ.
ಪ್ರತಿದಿನ ಜನರು ಈ ರಸ್ತೆಯಲ್ಲಿ ತಿರುಗಾಡುವಾಗ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನಾದರೂ ಈ ಊರಿನ ಸಮಸ್ಯೆಯತ್ತ ಗಮನಹರಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
previous post
next post