ವರದಿ ರಾಣಿ ಪ್ರಸನ್ನ
ಅಧಿಕಾರಿಗಳ ಗೈರು – ವಳಲಹಳ್ಳಿ ಗ್ರಾಮ ಸಭೆ ಬಹಿಷ್ಕರಿಸಿ ಪ್ರತಿಭಟನೆ.
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮಪಂಚಾಯಿತಿಯ ಗ್ರಾಮಸಭೆಯು ದಿನಾಂಕ :- 08-11-2024ನೇ ಶುಕ್ರವಾರ 10.30 ಕ್ಕೆ ವಳಲಹಳ್ಳಿ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಆದರೆ ಗ್ರಾಮ ಸಭೆಯ ಆರಂಭದಲ್ಲಿ ಗ್ರಾಮ ಸಭೆಯನ್ನು ಬಹಿಷ್ಕಾರ ಮಾಡುವ ಘಟನೆ ನಡೆಯಿತು.
ಒಂದು ವರ್ಷದಿಂದ ವಳಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಗಳು ನಡೆಯದೇ ಇದ್ದು, ಹಾಗೂ 15 ನೇ ಹಣಕಾಸು ಹಾಗೂ ನರೇಗಾ ಯೋಜನೆಯಲ್ಲಿ ಅನೇಕ ಅವ್ಯವಹಾರಗಳು ಗ್ರಾಮಪಂಚಾಯಿತಿಯಲ್ಲಿ ನಡೆದಿರುವ ಬಗ್ಗೆ ಸಾರ್ವಜನಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಅಲ್ಲದೆ ಎಲ್ಲಾ ವಿಭಾಗದ ತಾಲ್ಲೂಕು ಆಡಳಿತ ಅಧಿಕಾರಿಗಳು ಹಾಜರಾಗಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರಾದ ವೀರೇಶ್ ರವರು ತಿಳಿಸಿದ್ದರು. ಗ್ರಾಮ ಪಂಚಾಯಿತಿಯ ಗ್ರಾಮ ಸಭೆಗೆ ತಾಲ್ಲೂಕು ಮಟ್ಟದ 26 ಇಲಾಖೆಯ ತಾಲ್ಲೂಕು ಅಧಿಕಾರಿಗಳು ಈ ಗ್ರಾಮಸಭೆಗೆ ಹಾಜರಿರಬೇಕು ಎಂದು ತಿಳಿಸಲಾಗಿತ್ತು.
ಆದರೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಗ್ರಾಮ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ
ಇದರಿಂದ ಆಕ್ರೋಶ ಗೊಂಡ ಸ್ಥಳೀಯರು ವಳಲಹಳ್ಳಿ ಗ್ರಾಮಪಂಚಾಯಿತಿಯ ಗ್ರಾಮ ಸಭೆಯನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡಿದರು ಗ್ರಾಮಸ್ಥರು ಗ್ರಾಮಸಭೆಗೆ ಬಹುತೇಕ ಅಧಿಕಾರಿಗಳು ಗೈರಾಗಿದ್ದುದ್ದಕ್ಕೆ , ಸಮಸ್ಯೆ ಹೇಳಲು ಬಂದ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿ ಸದಸ್ಯರ ಉಡಾಫೆ ಉತ್ತರದಿಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.