ವರದಿ ರಾಣಿ ಪ್ರಸನ್ನ
*ದೋಣಿಗಲ್ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಸಿ ಡಿ ಸತ್ತಿಗಾಲ ಶಾಲಾ ವರಣದಲ್ಲಿ ನಡೆಯಿತು.**
ಸಕಲೇಶಪುರ ತಾಲೂಕಿನ ಆನೆ ಮಹಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿ ಡಿ ಸತ್ತಿಗಾಲ ಗ್ರಾಮದ ಸರ್ಕಾರಿ ಹಿರಿಯ ಮತ್ತು ಹಿರಿಯ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮೂಹ ಸಂಪನ್ಮೂಲ ಕೇಂದ್ರ ದೋಣಿಗಾಲು ಆಯೋಗದೊಂದಿಗೆ 2024-25ನೇ ಸಾಲಿನ ದೋಣಿಗಾಲ್ ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ತುಂಬಾ ಅದ್ದೂರಿಯಾಗಿ ನೆರವೇರಿತು ಮಕ್ಕಳ ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಲಾಯಿತು,
ಕಾರ್ಯಕ್ರಮದ ಉದ್ಘಾಟನೆಯನ್ನು ಮುಖಂಡರದ ಜಂಬರಡಿ ಲೋಕೇಶ್ ನೆರವೇರಿಸಿ ಮಾತನಾಡಿದ ಅವರು ಸಾಕಷ್ಟು ಖಾಸಗಿ ಶಾಲೆಗಳು ತಲೆ ಎತ್ತುತ್ತಿದ್ದು, ಸರ್ಕಾರಿ ಶಾಲೆಗಳು ಕಡಿಮೆಯಾಗುತ್ತಿರುವ ಹಿನ್ನೆಲೆ ಗ್ರಾಮಸ್ಥರು, ಪೋಷಕರು ಹೆಚ್ಚಿನ ರೀತಿಯಲ್ಲಿ ಸರ್ಕಾರಿ ಶಾಲೆಗೆ ಪ್ರೋತ್ಸಾಹ ನೀಡಿ ಈ ತರಹದ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಲ್ಲಿ ಕಲಿಯುವ ಆಶಕ್ತಿ ಹೆಚ್ಚಿಸುತ್ತದೆ. ಹಾಗೂ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಕಲಿಯಲು ಉತ್ತಜನಾನೀಡುವುದುದರಿಂದ ಸರ್ಕಾರಿ ಶಾಲೆಗಳ ಉಳಿವಿಗೆ ಕಾರಣವಾಗುತ್ತದೆ,
ಚಿಕ್ಕ ಸತ್ತಿಗಲ್ ಮತ್ತು ದೊಡ್ಡ ಸತ್ತಿಗಾಲ ಗ್ರಾಮದ ಯುವಕರು ಹಾಗೂ ಮುಖಂಡರು, ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಅಭಿವೃದ್ಧಿ ಬಗ್ಗೆ ಹೆಚ್ಚು ಒತ್ತು ನೀಡಿ ಈ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಏರ್ಪಡಿಸಿರುವುದು ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ,ಈ ಶಾಲೆ ಇನ್ನು ಹೆಚ್ಚಿನ ಅಭಿವೃದ್ಧಿ ಆಗಲಿ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಹಾಗೂ ಕೆಪಿಸಿಸಿ ಸಂಯೋಜಕರಾದ ಡಿ ಸಿ ಸಣ್ಣಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿಸಿ ಕೊಂಡ ವರನ್ನು ಗುರುತಿಸಿ ಸನ್ಮಾನಿಸಲಾಯಿತು. ಹಾಗೆ ವೇದಿಕೆ ಮೇಲೆ ಆಸೀನರಾದ ಎಲ್ಲಾ ಗಣ್ಯರಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಹೈಡಕುನ್ನ, ಸಹ ಶಿಕ್ಷಕರಾದ ಆಶಾ, ಮೋಹನ್, ಸುಮಿತ್ರ, ಮೋಹನ್ ಕುಮಾರ್, ಹಾಗೂ ಶಾಲೆಯ ಮಾಜಿ ಮುಖ್ಯ ಶಿಕ್ಷಕರದ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಮ ದೇವರಾಜ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೋಮಶೇಖರ್, ಎಸ್ ಡಿ ಎಮ್ ಸಿ ಸದಸ್ಯರುಗಳು ಗ್ರಾಮದ ಮುಖಂಡರುಗಳು ಇತರರು ಹಾಜರಿದ್ದರು.
previous post
next post