ಸ್ವಾತಂತ್ರ.. ಗಣತಂತ್ರ.. ಪ್ರಜಾತಂತ್ರ ವ್ಯವಸ್ಥೆಯನ್ನು ಹೊಸಕಿ ಹಾಕಿರುವ ದೇಶದ ಕುಟುಂಬ ರಾಜಕಾರಣ.
ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ರಚನೆ ಮಾಡಿ ಸಾರ್ವಜನಿಕರಿಗೆ ಮತದಾನದ ಹಕ್ಕನ್ನು ನೀಡಿ ರಾಜ್ಯ ಪ್ರಭುತ್ವ ಕೊನೆಗಾಣಬೇಕು, ರಾಜನ ನಂತರ ಪತ್ನಿ ಮಗ ಅಧಿಕಾರ ನಡೆಸುವುದು ಕೊನೆಗಾಣಿಸಿ ಚುನಾವಣೆ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕನು ಕೂಡ ಅಧಿಕಾರ ನಡೆಸುವಂತೆ ಚುನಾಯಿತ ರಾಜನಾಗಬಹುದು ಎಂಬ ಜಗತ್ತಿನ ಶ್ರೇಷ್ಠ ಗಣತಂತ್ರ ಪ್ರಜಾತಂತ್ರ ವ್ಯವಸ್ಥೆಯನ್ನು ನಿರ್ಮಾಣ ಮಾಡಿದರು.ಅದೆಲ್ಲವನ್ನು ಗಾಳಿಗೆ ತೂರಿ ದೇಶದ ಹಲವಾರು ಕುಟುಂಬಗಳು ರಾಜರ ಆಡಳಿತದ ರೀತಿಯಲ್ಲೇ ಕುಟುಂಬ ರಾಜಕಾರಣ ನಡೆಸುತ್ತ ಸ್ವಾತಂತ್ರ…ಪ್ರಜಾತಂತ್ರ… ಗಣತಂತ್ರವನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ಗಾಳಿಗೆ ತುರುತ್ತಿರುವುದು ಸಂವಿಧಾನ ವಿರೋಧಿ ನಡೆ, ಇದನ್ನೇ ಸಂವಿಧಾನದ ಬದಲಾವಣೆ ಎನ್ನುವುದು.
ಅದರೆ ಆಮಿಷಗಳಿಗೆ ಬಲಿಯಾಗಿ ಸ್ವಾಭಿಮಾನವನ್ನು ಬಲಿಕೊಟ್ಟು ಕುಟುಂಬ ರಾಜಕಾರಣಿಗಳಿಗೆ ಎಳ್ಳು ನೀರು ಎರದ ಪ್ರಜೆಗಳಿಗೂ ಕೂಡ ಸತ್ಯದ ಅರಿವಿನ ದರ್ಶನ ಇಪ್ಪತ್ತೊಂದನೆ ಶತಮಾನ ಬಂದರೂ ಕೂಡ ತಿಳಿಯದಿರುವುದು ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರದ ಕಗ್ಗೊಲೆಯಾಗಿದೆ.
ಜಗತ್ತಿನಲ್ಲೂ ಯಾವ ರಾಷ್ಟ್ರದಲ್ಲಿ ಕೂಡ ಈ ರೀತಿ ಘಟಿಸುವ ಅವಕಾಶವಿಲ್ಲ,ಅದು ಭಾರತದ ರಾಜಕೀಯ ವಲಯದಲ್ಲಿ ಮಾತ್ರ. ವಂಶ ರಾಜಕಾರಣ ಭಾರತೀಯ ರಾಜಕೀಯ ವಲಯದಲ್ಲಿ ಆಳವಾಗಿ ಬೇರು ಬಿಟ್ಟಿದೆ. ಪ್ರಸ್ತುತ ಸುಮಾರು 125 ಸಂಸದರು ತಮ್ಮ ಮನೆತನದ ಹೆಸರನ್ನೇ ಬಂಡವಾಳವನ್ನಾಗಿಸಿಕೊಂಡು ಲೋಕಸಭಾ ಮೆಟ್ಟಿಲು ತುಳಿಯುತ್ತಿದ್ದಾರೆ.ಭಾರತೀಯ ರಾಜಕಾರಣದಲ್ಲಿ ವಂಶ ರಾಜಕೀಯ ಪದ್ಧತಿಯನ್ನು ಹುಲಸಾಗಿ ಬೆಳೆಸಿದ ಕುಖ್ಯಾತಿ ಹಲವಾರು ಕುಟುಂಬಗಳಿಗಿದೆ. ಇಂದು ವಂಶ ರಾಜಕಾರಣ ಪ್ರತಿಯೊಂದು ಪಕ್ಷದ ಪಡಸಾಲೆಯನ್ನು ಏರಿದೆ.ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಮಾಜಿ ಮುಖ್ಯಮಂತ್ರಿಗಳ ಮಗನು ಹೌದು ಮೊಮ್ಮಗನು ಹೌದು, ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿಯವರ ಪುತ್ರ ಸ್ಟಾಲಿನ್ ಮುಖ್ಯಮಂತ್ರಿಯು ಹೌದು ಅವರ ಕುಟುಂಬದವರೆಲ್ಲರೂ ಕೂಡ ರಾಜಕೀಯವನ್ನು ಆಕ್ರಮಿಸಿಕೊಂಡಿದ್ದಾರೆ,ಒಂದು ಕಾಲದಲ್ಲಿ ಅಪ್ಪಟ ಸಮಾಜವಾದಿಯಾಗಿದ್ದ ಗಾಂಧಿ ಕುಟುಂಬದ ಬದ್ಧ ವಿರೋಧಿಯಾಗಿದ್ದ ಮುಲಾಯಿಂಗ್ ಸಿಂಗ್ ಯಾದವ್ ತಮ್ಮ ಮಗ ಸೊಸೆ ಪುತ್ರಿ ಎಲ್ಲರನ್ನೂ ಕೂಡ ರಾಜಕೀಯದಲ್ಲಿ ತೊಡಗಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಕುಟುಂಬ ಸಂಪೂರ್ಣ ತೊಡಗಿಸಿಕೊಂಡಿದೆ ಕರ್ನಾಟಕದ ದೇವೇಗೌಡರ ಕುಟುಂಬವೆಂದು ಮಕ್ಕಳು ಸೊಸೆಯಂದಿರು ಬೀಗರು ಎಲ್ಲರೂ ಹಂಚಿಕೊಂಡುಬಿಟ್ಟಿದ್ದಾರೆ.ಅದಲ್ಲದೆ ರಾಜಕೀಯ ಕುಟುಂಬದಿಂದ ಬರುತ್ತಿರುವ ಸುಪ್ರಿಯ ಸೂಲ,ರೀಟಾ ಬಹುಗುಣ, ಅಗಾತ ಸಂಗಮ, ಭರತ್ ಸಿಂಗ್ ಸೋಲಂಕಿ,ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್ , ಹೆಚ್.ಡಿ .ಕುಮಾರಸ್ವಾಮಿ,ಪ್ರಜ್ವಲ್ ರೇವಣ್ಣ, ರಾಘವೇಂದ್ರ ಯಡಿಯೂರಪ್ಪ,ತಮ್ಮ ವಂಶದ ಮನೆತನದ ಹೆಸರನ್ನು ಪ್ರಧಾನವಾಗಿ ಬಳಸಿಕೊಂಡು ಜನನಾಯಕರಾಗಿ ಮುಂದೆಯೂ ಆಗಲು ಇಚ್ಚಿಸುತ್ತಿರುವ ರಾಜಕಾರಣಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಹಾಗೆ ನೋಡಿದರೆ ಭಾರತದಲ್ಲಿ ರಾಜಕೀಯ ಕೊಡ ಒಂದು ಉದ್ಯಮವೇ ಅಗಿದೆ. ತಂದೆ ಬಳಿಕ ಮಗ ಮತ್ತು ಮಗಳು… ಮಗನ ಬಳಿಕ ಮೊಮ್ಮಗ,ಸೊಸೆ, ಸಹೋದರಿಯರು,ಸಹೋದರರು, ಬೀಗರು, ನೆಂಟರು ಸ್ಥಾನಕ್ಕೆ ಬರುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದೆ.
ವಂಶದ ಪ್ರಭಾವದಿಂದ ಅನಾಯಾಸವಾಗಿ ರಾಜಕೀಯ ಪ್ರವೇಶಿಸುವ ಈ ವಂಶ ರಾಜಕಾರಣದ ಕುಡಿಗಳಿಗೆ ಜನಸೇವೆ ಮುಖ್ಯವಾಗಿರುತ್ತದೆ ಎಂದು ಪ್ರಶ್ನೆ ಹಾಕಿಕೊಂಡರೆ ಅಲ್ಲೂ ನಮಗೆ ದೊರೆಯುವ ಉತ್ತರ ಇಲ್ಲ.ಸಮಾಜವಾದ ಗಾಂಧಿ ವಾದವನ್ನು ಮೆಚ್ಚಿಕೊಂಡರೆ ಅಧಿಕಾರವೂ ಇಲ್ಲ ಹಣವು ಇಲ್ಲ ಎಂಬ ಸಾಮಾನ್ಯ ಪ್ರಜ್ಞೆ ಎಲ್ಲರಿಗಿಂತ ಅವರಿಗೆ ಹೆಚ್ಚಿರುತ್ತದೆ.ಈ ಸಂಪ್ರದಾಯ ಭಾರತೀಯ ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಪೂರಕವೇ ಎಂದು ಮತ್ತೊಮ್ಮೆ ಪ್ರಶ್ನೆ ಮಾಡಿಕೊಂಡಿದ್ದರೆ ಖಂಡಿತ ಇಲ್ಲ.. ಏಕೆಂದರೆ ವ್ಯವಹಾರವಿರಲಿ ರಾಜಕಿಯವಿರಲಿ ಏಕಸ್ವಾಮ್ಯ ಎಂದಿಗೂ ಅಪಾಯಕಾರಿಯ ಕೊನೆಯ ಪ್ರಶ್ನೆ ಈ ನಿಟ್ಟಿನಲ್ಲಿ ಏನಾದರೂ ಮಾಡಲು ಸಾಧ್ಯವೇ ಸದ್ಯಕ್ಕಂತೂ ಅಸಾಧ್ಯ .ಮತದಾರ ಪ್ರಭುಗಳು ಈ ಪ್ರಭಾವಿ ಕುಟುಂಬದ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ,ಯಾವ ರೀತಿ ಗಣರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆಯ ಸಂಭ್ರಮವನ್ನು ಆಚರಿಸುವುದು.
ರಾಜರ ವಂಶ ಪಾರಂಪರಿಕ ಆಡಳಿತವನ್ನೆ ನಾಚಿಸುವಂತೆ ಬೇರು ಬಿಟ್ಟಿರುವ ಕುಟುಂಬ ರಾಜಕಾರಣ.
* ನೆಹರು ಗಾಂಧಿ ಕುಟುಂಬ.
* ಕರ್ನಾಟಕದ ದೇವೇಗೌಡ ಮತ್ತು ಹಲವು ಕುಟುಂಬ.
* ತಮಿಳುನಾಡಿನ ಕರುಣಾನಿಧಿ ಕುಟುಂಬ.
* ಉತ್ತರ ಪ್ರದೇಶದ ಚರಣ್ ಸಿಂಗ್ ಕುಟುಂಬ.
* ಪಶ್ಚಿಮ ಬಂಗಾಳದ ಅಬ್ದುಲ್ ಬರ್ಕತ್ ಅತಾ ಉಲ್ ಘನಿ ಖಾನ್ ಚೌದರಿ ಕುಟುಂಬ.
* ಹರಿಯಾಣದ ದೇವಿಲಾಲ್ ಕುಟುಂಬ.
* ಮಧ್ಯಪ್ರದೇಶದ ಅರ್ಜುನ್ ಸಿಂಗ್ ಕುಟುಂಬ.
* ಹೈದರಾಬಾದ್ ನ ಓವೈಸಿ ಮನೆತನ.
* ರಾಜಸ್ಥಾನದ ರಾಜಮಾತೆ ವಿಜಯ ರಾಜೇ ಸಿಂಧಿಯ ಮನೆತನ.
* ಮಹಾರಾಷ್ಟ್ರದ ಶರದ್ ಪವಾರ್ ಕುಟುಂಬ.
* ಪಂಜಾಬಿನ ಪ್ರಕಾಶ್ ಸಿಂಗ್ ಬಾದಲ ಕುಟುಂಬ.
* ಜಮ್ಮು-ಕಾಶ್ಮೀರದ ಶೇಕ್ ಅಬ್ದುಲ್ಲಾ ಕುಟುಂಬ.
* ಉತ್ತರ ಪ್ರದೇಶದ ಮೂಲಯಿಂ ಸಿಂಗ್ ಯಾದವ್ ಕುಟುಂಬ
ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಉದ್ಯಮವಾಗುತ್ತಿದೆ.
ಸರಿಸುಮಾರು ಅಂದಾಜಿನ ಪ್ರಕಾರ ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಸುಮಾರು 150 ಕುಟುಂಬ ಸದಸ್ಯರಿದ್ದಾರೆ.ರಾಜಕಾರಣಿಗಳು ಮತ್ತು ಅವರ ಕುಟುಂಬಸ್ಥರು ತಮ್ಮ ವಂಶವಾಹಿ ರಾಜಕಾರಣವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.ಎಲ್ಲಾ ಚುನಾಯಿತ ಪ್ರತಿನಿಧಿಗಳಲ್ಲಿ 40 ಪ್ರತಿಶತಕ್ಕೂ ಹೆಚ್ಚು – ಸಂಸದರು ಮತ್ತು ಶಾಸಕರು, ಜಿಲ್ಲಾ ಪಂಚಾಯಿತಿಗಳು ಮತ್ತು ನಾಗರಿಕ ಸಂಸ್ಥೆಗಳ ಸದಸ್ಯರು – ಒಂದು ರಾಜಕೀಯ ಕುಟುಂಬ ಸೇರಿದವರಾಗಿದ್ದಾರೆ.
ಗಣರಾಜ್ಯ ಎಂದರೆ ?
ಗಣರಾಜ್ಯ ಎಂದರೆ ರಾಜನಿಲ್ಲದ ಮತ್ತು ದೇಶದ ಪ್ರಜೆಗಳು ಚುನಾಯಿಸಿದ ಅಧ್ಯಕ್ಷರನ್ನುಳ್ಳ ರಾಜ್ಯ . ಅಂಥ ರಾಜ್ಯದಲ್ಲಿ ಆಡಳಿತದ ಎಲ್ಲಾ ಅಧಿಕಾರವೂ ಮತ ನೀಡಲು ಅರ್ಹರಾದ ಪ್ರಜೆಗಳಿಗೆ ಸೇರಿದ್ದು . ಅವರು ಚುನಾಯಿಸಿದ ಅವರ ಪ್ರತಿನಿಧಿಗಳು ಆ ಅಧಿಕಾರವನ್ನು ಉಪಯೋಗಿಸಿ ಆಡಳಿತವನ್ನು ನಡೆಸುತ್ತಾರೆ. ಇಂಥ ರಾಜ್ಯವು ಸ್ಥಾಪಿತವಾದ ದಿನವನ್ನು ಗಣರಾಜ್ಯದ ಉತ್ಸವ ಎಂದು ಆಚರಿಸಲಾಗುವುದು.
ಗಣರಾಜ್ಯೋತ್ಸವ ಆಚರಣೆ ಹೇಗೆ ನಡೆಯುತ್ತದೆ.
ಜನವರಿ 26 ರಂದು, ಗಣರಾಜ್ಯೋತ್ಸವವನ್ನು ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ದೆಹಲಿಯಲ್ಲಿ, ಗಣರಾಜ್ಯೋತ್ಸವವನ್ನು ದೇಶದ ಬಾಬಾಸಾಹೇಬರ ಸಂವಿಧಾನವನ್ನು ಜನವರಿ 26, 1950 ರಂದು ಜಾರಿಗೊಳಿಸಲಾಯಿತು.
ಗಣರಾಜ್ಯೋತ್ಸವದ ಮುನ್ನಾದಿನದಂದು, ಭಾರತ ರತ್ನ, ಪದ್ಮ ಪ್ರಶಸ್ತಿಗಳು ಮತ್ತು ಕೀರ್ತಿ ಚಕ್ರದಂತಹ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಪ್ರಧಾನಮಂತ್ರಿ, ಜನವರಿ 26 ರಂದು,ಗಣರಾಜ್ಯೋತ್ಸವ ಸಮಾರಂಭವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸುವುದರೊಂದಿಗೆ ಆರಂಭವಾಗುತ್ತದೆ. ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ಅಮನ್ ಜವಾನ್ ಜ್ಯೋತಿಯಲ್ಲಿ ಈ ಸೈನಿಕರಿಗೆ ಹೂಮಾಲೆಗಳನ್ನು ಅರ್ಪಿಸುತ್ತಾರೆ.. ಕೆಂಪು ಕೋಟೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಧ್ವಜವನ್ನು ಹಾರಿಸಿದ ನಂತರ ಭವ್ಯವಾದ ಮೆರವಣಿಗೆಗಳನ್ನು ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಪೊಲೀಸ್ ಮತ್ತು ಅರೆಸೇನಾ ಪಡೆಗಳ ರಾಜಪಥದಲ್ಲಿ ನಡೆಸಲಾಗುತ್ತದೆ. ಭಾರತದ ಎಲ್ಲಾ ರಾಜ್ಯಗಳು ತಮ್ಮ ಸಂಸ್ಕೃತಿ, ಅನನ್ಯತೆಯನ್ನು ಮೆರವಣಿಗೆಯ ಸಮಯದಲ್ಲಿ ಸುಂದರ ಕೋಷ್ಟಕಗಳನ್ನು ನಿರ್ಮಿಸುವ ಮೂಲಕ ಪ್ರದರ್ಶಿಸುತ್ತವೆ.ವಾಯುಪಡೆಯಿಂದ ಏರ್ ಶೋಗಳು ನಡೆಯುತ್ತವೆ. ಪ್ರತಿ ವರ್ಷ, ವಿವಿಧ ದೇಶಗಳ ಮುಖ್ಯಸ್ಥರನ್ನು ಆಚರಣೆಗೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ.
ಗಣರಾಜ್ಯೋತ್ಸವ ದಿನದಂದು, ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ. ನಾಗರಿಕರು ಕೂಡ ಧೈರ್ಯ, ಕಠಿಣ ಪರಿಶ್ರಮ ಮತ್ತು ಧೈರ್ಯಕ್ಕಾಗಿ ನೀಡುತ್ತಾರೆ. ಅಲ್ಲದೆ, ಅಪಾರ ಧೈರ್ಯವನ್ನು ಪ್ರದರ್ಶಿಸಿದ ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಲಾಗುತ್ತದೆ.
ಹೊಸದಿಲ್ಲಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮೂರು ದಿನಗಳ ಸಂಭ್ರಮವಾಗಿದ್ದು, ಜನವರಿ 29 ರಂದು ಬೀಟಿಂಗ್ ರಿಟ್ರೀಟ್‌ನೊಂದಿಗೆ ಕೊನೆಗೊಳ್ಳುತ್ತದೆ. ಇದು ರೈಸಿನಾ ಬೆಟ್ಟದಲ್ಲಿ ನಡೆಯುತ್ತದೆ,ಅಲ್ಲಿ ವಾಯುಪಡೆ, ಸೇನೆ ಮತ್ತು ನೌಕಾಪಡೆ ತಮ್ಮ ವೈಯಕ್ತಿಕ ಬ್ಯಾಂಡ್‌ಗಳನ್ನು ವೈಭವದಿಂದ ಪ್ರದರ್ಶಿಸುತ್ತವೆ. ನಂತರ ಧ್ವಜವನ್ನು ಕೆಳಗಿಳಿಸಲಾಗುತ್ತದೆ, “ನನ್ನೊಂದಿಗೆ ಇರಿ” ಎಂಬ ಸ್ತೋತ್ರವನ್ನು ಆಡುವಾಗ. ಬಾಗಲ್ ಕರೆಯೊಂದಿಗೆ ಆಚರಣೆಯು ಕೊನೆಗೊಳ್ಳುತ್ತದೆ, ನಂತರ ಎಲ್ಲಾ ತಂಡಗಳು “ಸಾರೇ ಜಹಾನ್ ಸೆ ಅಚ್ಚಾ” ರಾಗಗಳಿಗೆ ಹಿಮ್ಮೆಟ್ಟುತ್ತವೆ.
ಲೇಖನದ ಹಕ್ಕುಗಳು:
ಯಡೇಹಳ್ಳಿ”ಆರ್”ಮಂಜುನಾಥ್.
9901606220