ವರದಿ ರಾಣಿ ಪ್ರಸನ್ನ
ಪ್ರತಿ ಹೆಣ್ಣು ಮಕ್ಕಳು ರಕ್ತ ಪರೀಕ್ಷೆ ಮಾಡಿಸಿಕ್ಕೊಳ್ಳಲೇಬೇಕು. ಗರ್ಭ ಕೋಶದ ಕ್ಯಾನ್ಸರ್ , ಮಧು ಮೇಹ , ಬ್ರಸ್ಟ್ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳ ಬೇಕು ಎಂದ ಪ್ರತಿಭಾ ಮಂಜುನಾಥ್
ಅಕ್ಕಮಹಾದೇವಿ ಮಹಿಳಾ ವೇದಿಕೆಯಿಂದ ಇಂದು ದಿನಾಂಕ 20-02-2025 ಬೆಳಿಗ್ಗೆ 10-00 ರಿಂದ ಸಕಲೇಶಪುರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಜೀವ ಸಂಜೀವಿನಿ ರಕ್ತನಿಧಿ ಕೇಂದ್ರ, ಹಾಸನ. ಇವರ ಸಹಭಾಗಿತ್ವದಲ್ಲಿ ರಕ್ತದಾನ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಭಾ ಮಂಜುನಾಥ್ ರವರು ಗಂಡಸರು ಒಮ್ಮೆ ರಕ್ತದಾನ ಮಾಡಿದ ನಂತರ ಮೂರು ತಿಂಗಳ ಅಂತರದಲ್ಲಿ ರಕ್ತದಾನ ಮಾಡಬಹುದು ಮತ್ತು ಮಹಿಳೆಯರು ನಾಲ್ಕು ತಿಂಗಳಿ ಗೊಮ್ಮೆ ರಕ್ತ ನೀಡಬಹುದು. ಮಹಿಳೆಯರು ಕೂಡ ರಕ್ತದಾನ ಮಾಡಲು ಮುಂದೆ ಬರಬಹುದು ಎಂದು ಹೇಳಿದರು
ಯಡೆ ಹಳ್ಳಿ ಆರ್ ಮಂಜುನಾಥ್ ಕಾರ್ಯಕ್ರಮ ನಿರೂಪಣೆ ಮಾಡಿದರು.ಒಬ್ಬರು ಉಪಯೋಗಿಸಿದ ಸೂಜಿಯನ್ನು ಬಳಸುವುದು/ಮಾದಕ ವಸ್ತುಗಳನ್ನು ಉಪಯೋ ಗಿಸುವ ಹವ್ಯಾಸದವರಾಗಿದ್ದಲ್ಲಿ, ರಕ್ತದಾನ ಮಾಡಬಾರದು. ಆದ ಕಾರಣ ಆಸ್ಪತ್ರೆಗಳು ಮತ್ತು ರಕ್ತನಿಧಿಗಳು ರಕ್ತ ಪಡೆಯುವಲ್ಲಿ ಮತ್ತು ಸರಿಯಾದ ವಿಧದ ರಕ್ತವನ್ನು ವ್ಯಕ್ತಿಗೆ ನೀಡುವ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಹೇಳಿದರು
ಅಕ್ಕಮಹಾದೇವಿ ಮಹಿಳಾ ವೇದಿಕೆ ಅಧ್ಯಕ್ಷರಾದ ಕೋಮಲಾ ಅವರು ಮಾತನಾಡಿ ನಮ್ಮ ಸಂಘವು ಮಾರ್ಚ್ 30ಕ್ಕೆ ಮೂವತ್ತು ವರ್ಷಗಳನ್ನು ಪೂರೈಸುತ್ತಿರುವ ಕಾರಣ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಡಬೇಕೆಂದು ಈ ರಕ್ತ ಶಿಬಿರವನ್ನು ಏರ್ಪಡಿಸಿದ್ದೀವಿ. ನಿಮಗೆ ರಕ್ತ ಬೇಕಾದಾಗ, ಯಾರಾದರೂ ನಿಮಗೆ ರಕ್ತದಾನ ಮಾಡಿದ್ದಲ್ಲಿ ನೀವು ಸಹ ಬೇರೊಬ್ಬರಿಗೆ ರಕ್ತದಾನ ಮಾಡುವುದು ನಿಮ್ಮ ಕರ್ತವ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಆನಂದ್ ಲಿಯೋ ವಾಸು, ರೇಖಾ ಸುರೇಶ್, ರಘು ಪಾಳ್ಯ ಇವರಿಗೆ ಸನ್ಮಾನಿಸಲಾಯಿತು.
ಅರಣ್ಯ ಇಲಾಖೆ ಮಹದೇವ್ , ಆನಂದ್ ಲಿಯೋ ವಾಸು, ಭಜರಂಗದಳ ರಘು ಜೀ, ರಘು ಪಾಳ್ಯ , ರೇಖಾ ಸುರೇಶ್ , ಸುರೇಶ್,
ಅಧ್ಯಕ್ಷರು ಕೋಮಲ ದಿನೇಶ್ , ಕಾರ್ಯದರ್ಶಿಗಳು ಗಾಯತ್ರಿ ಮುರುಗೇಶ್, ಖಜಾಂಚಿ ಸೋಮಶೇಖರ್ ಉಪಸ್ಥಿತರಿದ್ದರು






