ವರದಿ ರಾಣಿ ಪ್ರಸನ್ನ
ಸಕಲೇಶಪುರ ತಾಲ್ಲೂಕು ಹಾನುಬಾಳು ಕ್ಯಾಮನಹಳ್ಳಿ ಗ್ರಾಮದ ಗಡಿಕಲ್ ಬಸ್ ಸ್ಟ್ಯಾಂಡ್ ನಿಂದ (ಸರ್ಕಾರಿ ಆಸ್ಪತ್ರೆ) ಈ ಜಾಗದಿಂದ ಕ್ಯಾಮನಹಳ್ಳಿ ಗ್ರಾಮದ ಕೆಂಚಪ್ಪ ರವರ ಮನೆಗೆ ಬೀದಿ ಲೈಟ್ ಇರುವುದಿಲ್ಲ ಆದ್ದರಿಂದ ಅಲ್ಲಿಂದ ರಾತ್ರಿ ಹೊತ್ತಿಗೆ ಹೆಂಗಸರು ಮಕ್ಕಳು ಹೋಗುವಾಗ ದಾರಿಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಅಲ್ಲದೆ ಕಾಡುಪ್ರಾಣಿಗಳ ಹಾವಳಿ, ಹಾವು ಚೇಳು ಇತರೆ ಪ್ರಾಣಿಗಳಿಂದ ತೊಂದರೆ ಉಂಟಾಗುತ್ತಿದೆ.
ಆದ್ದರಿಂದ ಆದಷ್ಟು ಬೇಗ ಇದರ ಬಗ್ಗೆ ಕ್ರಮ ತೆಗೆದುಕೊಂಡು ಅಲ್ಲಿಗೆ ಬೀದಿ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಗ್ರಾಮಸ್ಥರು ಸಕಲೇಶಪುರ ಉಪ ವಿಭಾಗದ ಹಿರಿಯ ಲೆಕ್ಕ ಅಧಿಕಾರಿಗಳ ಮುಖಾಂತರ ಸಕಲೇಶಪುರ ಉಪ ವಿಭಾಗದ ಸಹಾಯಕರ ಕಾರ್ಯಪಲಕ ಶ್ರೀಯುತ ಹರೀಶ್ ಅವರಿಗೆ ಕ್ಯಾಮನಹಳ್ಳಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರಿಂದ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಯಾಮನಹಳ್ಳಿ ಘಟಕದ ಅಧ್ಯಕ್ಷರಾದ ಗೋಪಾಲ್ ಕೆಎಸ್ ತಾಲೂಕು ಸಂಚಾಲಕರಾದ ಲಿಯಾ ಡಿಸೋಜ ಸ್ವಾಮಿ ಶಿವಪ್ಪ ಶೇಖರ ಪುಟ್ಟು ಶೇಖರ ಸಂತೋಷ್ ರಾಜು ಪೂರ್ಣೇಶ್ ಉಮೇಶ್ ಮತ್ತು ಶ್ರೀ ಶಕ್ತಿ ಸಂಘದ ಮಹಿಳೆಯರು ಹಾಜರಿದ್ದರು
