ವರದಿ ರಾಣಿ ಪ್ರಸನ್ನ
ಸಕಲೇಶಪುರದ ಬಾಳ್ಳುಪೇಟೆಯ ಪ್ರಸಿದ್ಧ ದೇವಾಲಯ , ಶಕ್ತಿ ದೇವತೆಯಾದ ದೇವಿರಮ್ಮ ನವರ ದೇವಸ್ಥಾನದಲ್ಲಿ ಕಳ್ಳತನ.
ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಬಾಳ್ಳುಪೇಟೆ ಗ್ರಾಮದ ಇತಿಹಾಸವನ್ನು ಒಳಗೊಂಡಿರುವ ಹಾಗೆಯೇ ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯುವ ಶ್ರೀ ದೇವಿರಮ್ಮನವರ ದೇವಸ್ಥಾನದಲ್ಲಿ ಕಳ್ಳರು ಬೀಗ ಒಡೆದು ದೇವರ ಮುಖವಾಡ ಸೇರಿದಂತೆ ಹಲವು ವಸ್ತುಗಳನ್ನು ಕಳುವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದೇವಿರಮ್ಮನವರ ದೇವಸ್ಥಾನದ ಮುಂಭಾಗ ಇರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲೂ ಕೂಡ ಈ ಹಿಂದೆ ಎರಡು ಮೂರು ಬಾರಿ ದೇವಸ್ಥಾನದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು.. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ದೇವಸ್ಥಾನ ಇದ್ದರು ಈ ರೀತಿಯ ಕಳ್ಳತನ ನಡೆದಿದೆ .
ಪೋಲಿಸರು , ಹಾಗು ಡಾಗ್ ಸ್ಕ್ವಾ ಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರವಷ್ಟೇ ತಿಳಿಯಬೇಕು.
previous post