ವರದಿ ರಾಣಿ ಪ್ರಸನ್ನ
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಹಾಸನ:ಕೃಷಿಕ್ ಸರ್ವೋದಯ 12 ವರ್ಷಗಳಿಂದ ಕರ್ನಾಟಕದ ಗ್ರಾಮೀಣ ಪ್ರದೇಶದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಪಿ.ಯು.ಸಿ, ಪದವಿ, ವೃತ್ತಿಪರ ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ.80 ಅಂಕಗಳನ್ನು ಪಡೆದು ತೇರ್ಗಡೆಯಾಗಿ ವಿದ್ಯಾಭ್ಯಾಸ ಮುಂದುವರೆಸಲು ಬಯಸುವ ಕರ್ನಾಟಕ ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಅರ್ಹ ಬಡ ವಿದ್ಯಾರ್ಥಿಗಳಿಗೆ ಕೃಷಿಕ್ ಸರ್ವೋದಯ ಫೌಂಡೇಶನ್ ಬೆಂಗಳೂರು ಇವರ ವತಿಯಿಂದ 2024-25 ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
ಗ್ರಾಮೀಣ ಪ್ರದೇಶ ಹಾಗೂ ತಾಲೂಕು ಕೇಂದ್ರಗಳ ಶಾಲೆಯಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ, ಗ್ರಾಮೀಣ
ಪ್ರದೇಶದ ಆರ್ಥಿಕವಾಗಿ ಹಿಂದುಳಿದ ವ್ಯವಸಾಯ ಆಧಾರಿತ ಕುಟುಂಬದ ಹಾಗೂ ಒಂದು ಹೆಕ್ಟೇರ್ ಗಿಂತ ಕಡಿಮೆ ಭೂಮಿಯುಳ್ಳ ಸಣ್ಣ/ಅತಿ ಸಣ್ಣ ವ್ಯವಸಾಯಗಾರರ ಮಕ್ಕಳು ಮತ್ತು ವ್ಯವಸಾಯ ಕೂಲಿ ಕಾರ್ಮಿಕರ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಥಮ ಪಿ.ಯು.ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ 10,000 ರೂ., ಪದವಿ ಓದುತ್ತಿರುವವರಿಗೆ 15,000 ರೂ. ಹಾಗೂ ಸ್ನಾತಕೋತ್ತರ ಮತ್ತು ವೃತ್ತಿಪರ ಪದವಿ ಓದುತ್ತಿರುವವರಿಗೆ 20,000 ರೂಪಾಯಿಗಳು ವಿದಾರ್ಥಿವೇತನ ನೀಡಲಾಗುವುದು.
ಪ್ರತೀ ವರ್ಷವೂ ಸಹ ವಿದ್ಯಾರ್ಥಿವೇತನವನ್ನು ನವೀಕರಿಸಿ ಸ್ನಾತಕೋತ್ತರ ಪದವಿ ಪೂರ್ಣಗೊಳ್ಳುವವರೆಗೆ ఈ విద్యాథింగళ ఓదిగాగి
ಪ್ರೋತ್ಸಾಹಿಸಲಾಗುವುದು. ಅರ್ಹ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ನವೆಂಬರ್ 30 ರೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿಯನ್ನು ដ www.ksfkar- nataka.com
ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 23.080-25202299/ d7625000990/ 9901911410 ಸಂಪರ್ಕಿಸಬಹುದೆಂದು ಕಾರ್ಯದರ್ಶಿ ಹೆಮ್ಮಿಗೆ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.