ವರದಿ ರಾಣಿ ಪ್ರಸನ್ನ
ಮಲೆನಾಡು ವೀರಶೈವ ಸಮಾಜ ಮತ್ತು ಅಂಗ ಸಂಸ್ಥೆಗಳಿಂದ ಶಂಕರ್ ಮಹದೇವ ಬಿದರಿ ಅವರಿಗೆ ” ವೃತ್ತಿ ಚೈತನ್ಯ ಸೇವಾ ರತ್ನ “” ಎಂಬ ಪದನಾಮ್ ನೀಡಿ ಗೌರವ ಸಮರ್ಪಣೆ .
ಶ್ರೀ ಮಲೆನಾಡು ವೀರಶೈವ ಸಮಾಜ ಮತ್ತು ಅಂಗಸಂಸ್ಥೆಯಿಂದ ನಿನ್ನೆ ಸೆ.4ರಂದು ಬ್ಯಾಕರವಳ್ಳಿ ಶ್ರೀ ಗುರುವೇಗೌಡ ಕಲ್ಯಾಣ ಮಂದಿರ ಸಕಲೇಶಪುರದಲ್ಲಿ ಅಭಿನಂದನಾ ಕಾರ್ಯಕ್ರಮ ದಾನಿಗಳಿಗೆ ನೆರವೇರಿಸಲಾಯಿತು.
“*ವೀರಶೈವ ಸಮಾಜಕ್ಕೆ ಒಂದು ಕಲಾಸ್ ಎಂಬಂತೆ ಇರುವ ಇವರ ಶಂಕರ್ ಮಹದೇವ ಬಿದರಿ ಅವರ ಒಂದು ಕಿರುನೋಟ “*
ಅವರು ಶರಣ ಮಹದೇವಪ್ಪ ಶರಣೆ ಗುರವ್ವ ದಂಪತಿಗಳ ಜೇಷ್ಠ ಪುತ್ರನಾಗಿ 27/08/1954 ರಲ್ಲಿ ಜನಿಸಿದರು. ಬಿದರಿ ಎಂಬುದು ಶ್ರೀಯುತರ ಮನೆತನದ ಹೆಸರು. ವಿದ್ಯಾಭ್ಯಾಸ ಸ್ವಂತ ಊರಿನಲ್ಲಿ ಪ್ರಾಥಮಿಕ ಶಿಕ್ಷಣ, ತಾಲೋಕು ಕೇಂದ್ರ ಬನಹಟ್ಟಿಯಲ್ಲಿ ಮಾಧ್ಯಮಿಕ ಶಿಕ್ಷಣ, 1969 ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 88 ಅಂಕಗಳನ್ನು ಗಳಿಸಿ ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದರು. ಅಂದಿನ ಕಾಲದಲ್ಲಿ ಈ ಶೇಕಡವಾರು ಅಂಶ ಮಹತ್ಸಾಧನೆಯ ಸರಿ, ನಂತರ ನಿಪ್ಪಾಣಿಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು, 1970ರಲ್ಲಿ ಅಂದಿಗೆ ಚಾಲ್ತಿಯಲ್ಲಿದ್ದ ಒಂದು ವರ್ಷದ ಪಿಯುಸಿಯನ್ನು ಪೂರೈಸಿದರು. ನಂತರ ತಂದೆಯವರ ಅನಾರೋಗ್ಯದ ಕಾರಣ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹೇಳಬೇಕಾಯಿತು ಇದು ಈ ಪ್ರತಿಭಾನ್ವಿತ ವಿದ್ಯಾರ್ಥಿಯ ದೌರ್ಭಾಗ್ಯ ಎನ್ನಲೆಬೇಕಾಗುತ್ತದೆ.
ಆ ವರ್ಷವೇ ಮುಂಬೈನಲ್ಲಿ ಜೀವನೋಪಾಯಕ್ಕಾಗಿ ಖಾಸಗಿ ಕೆಲಸಕ್ಕೆ ಸೇರ್ಪಡೆಗೊಂಡರು. ಕೆಲವು ದಿನಗಳ ನಂತರ 1971ರಲ್ಲಿ ಅಂಚೆ ತಂತಿ ಇಲಾಖೆಯಲ್ಲಿ ಟೆಲಿಫೋನ್ ಅಪರೇಟರ್ ಆಗಿ ಸರ್ಕಾರದ ಸೇವೆ ಪ್ರಾರಂಭಿಸಿದರು. ಹಾಗೆಯೇ ಸರ್ಕಾರಿ ಸೇವೆಯಲ್ಲಿ ಇದ್ದುಕೊಂಡೆ 1975ರಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಬಿಎ ಪದವಿ ದಕ್ಕಿಸಿಕೊಂಡರು. ಜೊತೆ ಜೊತೆಗೆ ಕಂಕಣ ಭಾಗ್ಯ ಒದಗಿ ಬಂದು ಹೆಸರಾಂತ ಸಾಹಿತಿ ಮಧುರಚನ್ನ ರವರ ಮಗಳು ಉಮಾದೇವಿಯವರನ್ನು 1975 ಡಿಸೆಂಬರ್ 13ರಂದು ವರಿಸಿದರು. ಶ್ರೀಯುತರಿಗೆ ವಿಜಯಲಕ್ಷ್ಮಿ ಬಿದರಿ ಎಂಬ ಪುತ್ರಿ ಇದ್ದು ಕನ್ನಡದಲ್ಲಿ ಐಎಎಸ್ ಸಾಧಿಸಿದ ಕರ್ನಾಟಕದ ಹೆಮ್ಮೆಯ ಮಗಳು. ಹಾಗೆ ವಿಜಯೇಂದ್ರ ಬಿದರಿ ಎಂಬ ಸುಪುತ್ರನನ್ನು ಹೊಂದಿದ್ದಾರೆ.
ಹೀಗೆಯೆ ಅನೇಕ ಕಷ್ಟ ಕಾರ್ಪಣ್ಯಗಳ ನಡುವೆ ಲೋಕ ಸೇವಾ ಆಯೋಗದ ಪರೀಕ್ಷೆ ಬರೆದು 1976 ರಲ್ಲಿ ಅಸ್ಟೆಂಟ್ ಕಮಿಷನರ್ ಹುದ್ದೆಗೆ ಆಯ್ಕೆಯಾದರು. ತದನಂತರ 1977 ರಲ್ಲಿ ಲೋಕಸೇವಾ ಆಯೋಗದಿಂದ ನಡೆದ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಆಗಿ ನೇಮಕಗೊಂಡರು. ಯಶಸ್ವಿಯಾಗಿ ವಿವಿಧ ತರಬೇತಿಗಳನ್ನು ಪೂರೈಸಿ 1980 ರಲ್ಲಿ ಬೆಳಗಾವಿಯ ಉಪ ಪೊಲೀಸ್ ವಿಭಾಗಾಧಿಕಾರಿಯಾಗಿ ನೇಮಕಗೊಂಡು ತದನಂತರ ಸಿಐಡಿ ವಿಭಾಗದ ಎಸ್ಪಿ ಆಗಿ ಮಂಡ್ಯ, ಚಿತ್ರದುರ್ಗ, ರಾಜ್ಯ ರೈಲ್ವೆ, ತುಮಕೂರು, ಬಳ್ಳಾರಿ, ಧಾರವಾಡಗಳಲ್ಲಿ ಪೊಲೀನ್ ಮುಖ್ಯಧಿಕಾರಿಯಾಗಿ ನಂತರ ಡಿಐಜಿ, ಐಜಿಪಿ, ಎಡಿಜಿಪಿಯಾಗಿ ಬೆಂಗಳೂರು ನಗರದ ಕಮಿಷನರ್ ಸಹ ಆಗಿ ಪದೋನ್ನತಿ ಹೊಂದುತ್ತ ಇಲಾಖೆಯ ಅತ್ಯುನ್ನತ ಸ್ನಾನವಾದ ಹೆಮ್ಮೆಯ ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಕಗೊಂಡರು.
ಹೀಗೆ 42 ವರ್ಷಗಳ ಕಾಲ ಕಳಂಕ ರಹಿತ ಸೇವೆ ಸಲ್ಲಿಸಿ, ವೃತ್ತಿಯಲ್ಲಿ ಅನೇಕ ಎಡರು ತೊಡರುಗಳನ್ನು ಎದುರಿಸಿ ನಿವೃತ್ತಿ ಹೊಂದಿದರು.
ಈ ಮಧ್ಯೆ ಇವರ ಸೇವೆಯಲ್ಲಿ ನೆಡೆದ ಪ್ರಮುಖ ಘಟನೆಯೊಂದರ ಪ್ರಸ್ತಾಪ ಮಾಡಲೇಬೇಕು 1993 ರಿಂದ 96 ರವರಿಗೆ ಶ್ರೀಯುತರು ವೀರಪ್ಪನ್ ಕಾರ್ಯಾಚರಣೆ ಪಡೆಯ ಕಮಾಂಡರ್ ಆಗಿ ಜೊತೆಗೆ ದಕ್ಷಿಣ ವಲಯ ಡಿಐಜಿಯಾಗಿ ಜಂಟಿ ನೇಮಕಗೊಂಡರು. ತಮಿಳುನಾಡಿನ ಕಾರ್ಯಾಚರಣೆ ಪಡೆ ಹಾಗೂ ಗಡಿ ಪದ್ರತಾ ಪಡೆಯ ಜೊತೆಗೆ ಉತ್ತಮ ಬಾಂಧವ್ಯ ಸ್ಥಾಪಿಸಿ, ವೀರಪ್ಪನ್ ಪಡೆಯ ಬಹುತೇಕ ಸದಸ್ಯರನ್ನು ಪತ್ತೆ ಹಚ್ಚಿ ಬಂಧಿಸಿದ್ದಲ್ಲದೆ ಕೆಲವರ ಎನೌಂಟರ್ ಮಾಡಿ 300 ರಷ್ಟಿದ್ದ ವೀರಪ್ಪನ್ ಪಡೆಯ ಸಂಖ್ಯಾಬಲವನ್ನು ಐದು ಮಂದಿಗೆ ಇಳಿಸಿದ್ದು ಇವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.
ಒಮ್ಮೆ ಇವರು ವೀರಪ್ಪನ್ ಗುಂಡಿಗೆ ಬಲಿಯಾಗಬೇಕಾದ ಸಂದರ್ಭದಲ್ಲಿ ಇವರ ಅಂಗರಕ್ಷಕ ಪಡೆಯ ಚಾಣಾಕ್ಷತೆಯಿಂದ ಜೀವದಾನವಾಗಿದ್ದು ದೈವ ಚೈಯೆ ಸರಿ. ಹೀಗೆ ವೃತ್ತಿ ಜೀವನದಲ್ಲಿ ಪ್ರತಿಯೊಂದು ಹುದ್ದೆಯನ್ನು ಬಂದ ಅವಕಾಶವನ್ನಾಗಿ ಸ್ವೀಕರಿಸಿ ನೇರ ಮಾರ್ಗದಲ್ಲಿ ಮುನ್ನುಗ್ಗಿದ ಸಾಹಸಿ ಇವರು. ಹಾಗೂ ಸರ್ಕಾರ ಮತ್ತು ಸಾರ್ವಜನಿಕರಿಂದ ಪ್ರಶಂಸೆ ಮತ್ತು ಮನ್ನಣೆ ಪಡೆದವರು.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಎರಡು ಬಾರಿ ಪಡೆದ ಮೊಟ್ಟ ಮೊದಲ ಪೊಲೀಸ್ ಅಧಿಕಾರಿ ಇವರು, ಜೊತೆಗೆ ಆಂಧ್ರಪ್ರದೇಶ ಸರ್ಕಾರದ ಮುಖ್ಯಮಂತ್ರಿಗಳ ಶೌರ್ಯ ಪದಕವನ್ನು ಪಡೆದ ಹೊರರಾಜ್ಯದ ಅಧಿಕಾರಿ ಎಂಬ ಹೆಗ್ಗಳಿಕೆ ಶ್ರೀಯುತರದು. ಅಂತೆಯೇ ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕ ಪಡೆದ ಕರ್ನಾಟಕ ರಾಜ್ಯದ ಪ್ರಥಮ ಐಪಿಎಸ್ ಅಧಿಕಾರಿ, ಈ ಪದಕವನ್ನು ಎರಡನೇ ಬಾರಿ ಪಡೆದ ಪ್ರಥಮರು ಸಹ.
ಇದೆಲ್ಲದಕ್ಕೂ ಮಿಗಿಲಾಗಿ ಭಾರತ ದೇಶದ ಇತಿಹಾಸದಲ್ಲಿ ಸರ್ಕಾರದಿಂದ ಅತಿ ಹೆಚ್ಚು ಮೊತ್ತದ ನಗದು ಬಹುಮಾನ ಪಡೆದ ಪೊಲೀಸ ಅಧಿಕಾರಿ ಎಂಬ ಹಿರಿಮೆ ಇವರಿಗೆ ಸಲ್ಲುತ್ತದೆ.
ಜೊತೆಗೆ ಹಲವಾರು ಸಾಮಾಜಿಕ ಕಳಕಳಿಯ ಕೆಲಸಗಳು ನಿರ್ವಹಿಸುತ್ತಾ ಕರ್ನಾಟಕದ ಜನರ ಹೃದಯ ಭಾಗದಲ್ಲಿ ನೆಲೆಸಿ ಇತ್ತೀಚೆಗೆ ನೂತನವಾಗಿ ಕರ್ನಾಟಕ ರಾಜ್ಯದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರಿಗೂ ಸಂತಸ ಜೊತೆಗೆ ಹೆಮ್ಮೆ ತಂದಿದೆ. ಇವರಿಗೆ ಶ್ರೀ ಮಲೆನಾಡು ವೀರಶೈವ ಸಮಾಜದ ವತಿಯಿಂದ ಇವರ ಸೇವೆಯನ್ನು ಪರಿಗಣಿಸಿ ‘ವೃತ್ತಿ ಚೈತನ್ಯ ಸೇವಾ ರತ್ನ’ ಎಂಬ ಪಧನಾಮ ನೀಡಿ ಗೌರವಿಸಲಾಗುತ್ತಿದೆ.
previous post
next post