ಮದುವೆ
ಮದುವೆ… ಅಂದ ತಕ್ಷಣ ಬಂದುಗಳು, ಸ್ನೇಹಿತರು,ಹಿತೈಷಿಗಳು,ಅಡು ಮಾತಿನಲ್ಲಿ ಹೇಗೇಗೆ ಹೇಳುತ್ತಾರೆ ನೋಡಿ,ನಿಮಗೂ ಅನುಭವವಾಗಿರುತ್ತದೆ.
- ನಿಮಗೆ ಮದುವೆಯಾಗಿದೆಯೇ? ಇನ್ನೂ ಮದುವೆಯಾಗಿಲ್ಲವೇ ನಿಮಗೆ? ಬೇಗ ಒಂದು ಮದುವೆಯಾಗಿಬಿಡಿ ಆರಾಮವಾಗಿ.
- ಈಗ ಮಾಡಿದಷ್ಟೇ ಮಜ, ಮದುವೆ ಯಾದ ಮೇಲೆ ಎಲ್ಲಾ ಇದ್ದದ್ದೇ.
- ನಿನಗೇನು ಕಮ್ಮಿಯಾಗಿದೆಯಯ್ಯ, ಹೂಂ ಅಂದ್ರೆ ಸಾಕು ಸಾಲು ನಿಲ್ತಾರೆ ಹೆಣ್ಣು ಕೊಡೊಕ್ಕೆ, ಸಾಕಷ್ಟು ಗಿಟ್ಟಿಸಲೂ ಬಹುದು.”
- ನನ್ನ ಕಣ್ಣ ಮು೦ದೆ ಬೆಳೆದೋನು ಕಣಯ್ಯ ನನ್ನ ಮಾತು ಕೇಳ್ದೆ ಇರ್ತಾನೆಯೇ ನಾನು ತೋರಿಸಿದ ಹುಡುಗೀನ
ಮದುವೆಯಾಗ್ತಾನೆ. - ಹ್ಯಾಗೋ ಇವಳೊಬ್ಬಳ ಮದುವೆ ಆದರೆ ಹೊರೆ ಕಳೆದ ಹಾಗಾಗುತ್ತೆ.
- ಇನ್ನೂ ಐದಿವೆಯಲ್ಲಯ್ಯ- ಮುಳುಗಿ ಹೋಗ್ತಾನೆ.
- ಅವರಪ್ಪ ಮಾಡಿಟ್ಟು ಹೋದ-ಇವನು ತಂಗಿಯರ ಮದುವೆ ಮಾಡಿ ಸೋತ.
- ಎಲ್ಲಾದರೂ ಒಂದು ಒಳ್ಳೆ ಸಂಬಂಧ ನೋಡಿ ಮದುವೆ ಮಾಡಿಬಿಡಿ, ಆಮೇಲೆ ನಿಮ್ಮ ಮಗ ಸರಿಯಾಗುತ್ತಾನೆ.
- ಕಾಲು ಸೊಟ್ಟಾದರೇನಯ್ಯ ಆಸ್ತಿ ನೋಡಿ
ಯಾವೋನಾದರು ಕಟ್ಟಿಕೊಳ್ತಾನೆ. - ಎರಡನೇ ಸಂಬಂಧವಾದರೂ ಪರವಾಗಿಲ್ಲ ನಮ್ಮ ಹುಡುಗೀಗಾಗಲೇ ಇಪ್ಪತ್ತೊಂಭತ್ತು ಕಳೀತು.
- ದಾರೀಲಿ ಹೋಗೋ ದಾಸಯ್ಯನಿಗಾದರೂ ಮಗಳನ್ನು ಕೊಟ್ಟೇನು ಅವನ ಮಗನಿಗೆ ಕೊಡೋಲ್ಲ.
- ಅನ್ನ ಬಟ್ಟೆಗೆ ನೆರ್ಪಾಗಿಲ್ಲ ಇನ್ನು ವರದಕ್ಷಿಣೆ ವರೋಪಚಾರ ಅಂದ್ರೆ ನಾವೆಲ್ಲ ಎಲ್ಲಿಂದ ತರಬೇಕು.
- ಇನ್ನೂ ಮದುವೆಯಾಗಿಲ್ಲ ಅಂದ್ರೆ……
ಮದುವೆ ಎನ್ನುವುದೇನು? ಕುಶಲ ಪ್ರಶ್ನೆಯ ಸಾಮಗ್ರಿಯೇ.. ಜೀವನದ ಹಂತವೇ..ಮಾತಾಪಿತೃಗಳ ಜವಾಬ್ದಾರಿಯೇ..
ಹಿರಿಯರ ಪ್ರತಿಷ್ಠೆ ಹಠಸಾಧನೆ ಅಥವಾ ಪ್ರಭಾವ ಬೀರುವ ಅವಕಾಶಕ್ಕೆ ಸಾಧನವೇ..ಕನ್ಯಾಪಿತೃಗಳ ಪಾಲಿಗೆ ಹೊರೆಯೇ..ಆಸ್ತಿ ಲಪಟಾಯಿಸುವ ಅವಕಾಶವೇ..
ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ತಮಾಷೆಯೇ, ಮಕ್ಕಳನ್ನು ಹದಕ್ಕೆ ತರುವ ವಂಶ ಬೆಳೆಸುವ ಕರ್ತವ್ಯವೇ ??? ಉತ್ತರ ನಿಮ್ಮಲ್ಲೇ ಇದೆ.
ಯಡೇಹಳ್ಳಿ”ಆರ್”ಮಂಜುನಾ ಥ್.
9901606220