ಸಕಲೇಶಪುರದ ಹೆಗ್ಗದ್ದೆ ಗ್ರಾಮ ಪಂಚಾಯತಿ ವಾಪ್ತಿಯ ಮಾರನಹಳ್ಳಿ ಬಳಿ ಪ್ರಾಣಿ ಬೇಟೆ ನಡೆದಿರುವ ಘಟನೆ ವರದಿಯಾಗಿದೆ.
ಇಲ್ಲಿನ ಕಣೋಲಿ ಗದ್ದೆ ನಂದ್ದಲ್ಲಿ ಅಜ್ಜಿ ಗದ್ದೆಯಲ್ಲಿ ಯಾವುದೋ ಕಾಡು ಪ್ರಾಣಿ ಕೆಲವು ಪ್ರಾಣಿಗಳನ್ನು ಭೇಟೆ ಮಾಡಿರುವ ದ್ರಶ್ಯ ಕಂಡು ಬಂದಿದೆ.
ಇಂದು ಹಗಲು ಹೊತ್ತಿನಲ್ಲಿ ಇಲ್ಲಿನ ಗದ್ದೆಗೆ ರೈತರು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಕಂಡು ಬಂದಿದೆ ಎಂದು ನವೀನ್ ಲಾರೆನ್ಸ್ ತಿಳಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕು ತರಲಾಗಿದೆ.
ತೋಟ ಗದ್ದೆಗೆ ಹೋಗುವವರು ದಯವಿಟ್ಟು ಎಚ್ಚರ ವಹಿಸಿ ಎಂದು ಅವರು ಮನವಿ ಮಾಡಿದ್ದಾರೆ.



