ವರದಿ ರಾಣಿ ಪ್ರಸನ್ನ
ಸಕಲೇಶಪುರ: ತಾಲೂಕು ಬಿಜೆಪಿ ಮುಖಂಡ ಹಾಗೂ ಉದ್ಯಮಿ ಜಯಪ್ರಕಾಶ್ ದೊಡ್ಡದೀಣೆರವರ ‘ಧರ್ಮಪತ್ನಿ ಸುಮನಾ ಜಯಪ್ರಕಾಶ್ರವರಿಗೆ ರೇವಾ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇಂಜೀನಿಯರಿಂಗ್ನಲ್ಲಿ ಸ್ನಾತಕೋತರ ಪದವೀಧರೆಯಾಗಿರುವ ಸುಮನಾ ಹಾಸನ ನಗರದ ಒಂದು ಪ್ರಕರಣದಲ್ಲಿ ನಗರ ಪುನರುತ್ಪಾದನೆಗಾಗಿ ಪ್ರದೇಶವನ್ನು ವ್ಯಾಖ್ಯಾನಿಸಲು ಮತ್ತು ಮೌಲ್ಯಮಾಪನ ಮಾಡಲು ಮಾದರಿಯನ್ನು ಅಭಿವೃದ್ಧಿಪಡಿಸುವುದು ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರಿಗೆ ಶಾಸಕ ಸಿಮೆಂಟ್ ಮಂಜು ಸೇರಿದಂತೆ ಇತರ ಮುಖಂಡರು ಅಭಿನಂದನೆ ತಿಳಿಸಿದ್ದಾರೆ.