ವರದಿ ರಾಣಿ ಪ್ರಸನ್ನ
ಬಾಳ್ಳುಪೇಟೆ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರದ ಶಂಕೆ ಹಲವು ದಿನಗಳಿಂದ ಮುಗಿಯದ ಕತೆ.
ರೊಚ್ಚಿಗೆದ್ದ ಗ್ರಾಮಸ್ಥರು
ಕರವಸೂಲಿ ಹಣ ದುರುಪಯೋಗ ಆರೋಪದ ಹಿನ್ನೆಲೆ ಗ್ರಾಮ ಪಂಚಾಯತಿಗೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ.
ಗ್ರಾಮಾಂತರ ಠಾಣಾ ಪೊಲೀಸರಿಂದ ಬಿಗಿ ಬಂದೋಬಸ್ತ್.
ಸಕಲೇಶಪುರ ತಾಲೂಕು ಬಾಳ್ಳುಪೇಟೆ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ.ಘಟನೆ ಸ್ಥಳಕ್ಕೆ ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆಗಮಿಸುವವರೆಗೂ ಹೋರಾಟ ನಡೆಸುವುದಾಗಿ ಪ್ರತಿಭಟನೆಕಾರರು ಬಿಗಿಪಟ್ಟು ಹಿಡಿದು ಕುಳಿತ ಘಟನೆ ವರದಿ ಆಗಿದೆ.
ನಿನ್ನೆ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿ ವಿರುದ್ದ ಘೋಷಣೆ ಕೂಗಿದರು .
ಎಲ್ಲಾ ಕರವಸೂಲಿ ಪುಸ್ತಕಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು, ಸರಿಯಾದ ಲೆಕ್ಕ ಪತ್ರಗಳನ್ನು , ಕರ ವಸೂಲಿ ಮಾಡದೆ ಗ್ರಾಮಸ್ಥರಿಗೆ ಯಾವುದೇ ರಸೀದಿಗಳನ್ನು ನೀಡದೆ ಸ್ವಲ್ಪ ದಿನದ ನಂತರ ಮತ್ತೆ ಕಂದಾಯ ಕಟ್ಟಿ ಎಂದು ಮೋಸ ಮಾಡಿಕೊಂಡು ಬಂದಿದ್ದಾರೆ. ಆಡಿಟಿಂಗ್ ಸಮಯದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಈ ದುರುಪಯೋಗ ಕಾರ್ಯವು 2021-22 ರಿಂದ ನಡೆದುಕೊಂಡು ಬಂದಿದೆ. ಈಗ ಕರವಸೂಲಿಗಾರನು ಈ ಕೃತ್ಯ ಎಸಗಿದ್ದಾನೆ ನಮಗೆ ತಿಳಿದಿಲ್ಲ ಎಂದು ಎಲ್ಲಾ ಸದಸ್ಯರು, ಹಾಗು ಕಚೇರಿ ವರ್ಗದವರು ತಿಳಿಸಿದ್ದಾರೆ. ತನಿಖೆಗೆ ನೀಡಬೇಕೆಂದು ಆಗ್ರಹಿಸಿದ್ದಾರೆ ತನಿಖೆ ನಂತರವಷ್ಟೇ ಎಷ್ಟು ಹಣ ದುರುಪಯೋಗವಾಗಿದೆ ಯಾರ್ಯಾರು ಶಾಮೀಲಾಗಿದ್ದಾರೆ ಎಂದು ತಿಳಿದು ಬರಲಿದೆ
ಈ ಸಂದರ್ಭದಲ್ಲಿ ಬಾಳ್ಳುಪೇಟೆ ಸದಸ್ಯರು, ಪೀ ಡಿ ಓ , ಕಚೇರಿ ವರ್ಗದವರು, ನೇತ್ರಾಮಂಜುನಾಥ್, ಶಿವಕುಮಾರ್, ಉದೀಶ್, ಮೆಣಸಮಕ್ಕಿ ಉದಯ್, ಪುಟ್ಟರಾಜು ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.