ವರದಿ ರಾಣಿ ಪ್ರಸನ್ನ
ನಾಡ ಪ್ರಭು ಕೆಂಪೇಗೌಡ 21ಕ್ಕೂ ಹೆಚ್ಚು ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ ಆರ್ ಅಶೋಕ್
ನಮ್ಮ ಪಾಪದ ಕೊಳೆ ಹೋಗಬೇಕಾದರೆ ಮನಸ್ಸು ಶುದ್ಧವಾಗಿರಬೇಕು. ಅಜ್ಞಾನವನ್ನು ಹೋಗಲಾಡಿಸಬೇಕು.ಈ ನಿಟ್ಟಿನಲ್ಲಿ ನಮ್ಮ ಪೂರ್ವಜರ ಪರಂಪರೆ ಅರಿಯಬೇಕು. ಇದರಿಂದ ನಾವು ಸಮಾಜದಲ್ಲಿ ನಮಗೆ ಸಿಕ್ಕ ಅವಕಾಶದಲ್ಲಿ ಸಾಧನೆ ಮಾಡಬಹುದು. ನಮ್ಮ ಪೂರ್ವಜರ ಪರಂಪರೆಯನ್ನು ಅರಿಯದೆ ಹೋದರೆ ನಾವು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಸಕಲೇಶಪುರದಲ್ಲಿ ನಡೆದ ಕೆಂಪೇಗೌಡ ಪುತ್ತಳಿ ಅನಾವರಣದ ನಂತರ ಮಹಿಳೆಯರೆಲ್ಲರೂ ಕಳಸವನ್ನು ಹೊತ್ತು ಸಭಾಂಗಣದವರೆಗೆ ಬಂದರು ನಂತರ ಎ. ಪಿ.ಎಂ.ಸಿ ಮೈದಾನ ದಲ್ಲಿ ಆಯೋಜಿಸಿದ ಗುರು ತೋರಿದ ತಿಂಗಳ ಮಾಮನ ತೇರು ಶತೋತ್ತರ ರಜತ ಹುಣ್ಣಿಮೆ ಸಭಾ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನೋಡಿ ಜನರು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಮನಸ್ಸನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಬೇಕು. ಆಗ ಮಾತ್ರ ಬದುಕು ಬಾರ ಆಗುವುದಿಲ್ಲ.ಈ ತರಹದ ಕಾರ್ಯಕ್ರಮಗಳನ್ನು ಮಾಡುವುದರಿಂದ ಮನಸ್ಸಿಗೆ ಸಂಸ್ಕಾರ ಸಿಗುತ್ತದೆ ನಮ್ಮಮನಸ್ಸು ಎಚ್ಚೆತ್ತುಕೊಳ್ಳುತ್ತವೆ. ಎಂದು ಹೇಳಿದರು.
ಹೈಕೋರ್ಟ್ ನ್ಯಾಯಾಧೀಶರಾದ ಸಂದೇಶ್ ಮಾತನಾಡಿ, ಸ್ವಾಸ್ಥ್ಯ ಸಮಾಜಕ್ಕೆ ಶಿಕ್ಷಣ ಹಾಗೂ ಆರೋಗ್ಯ ಅತಿ ಮುಖ್ಯ ಇವೆರಡನ್ನು ಶ್ರೀಮಠ ನೀಡುತ್ತಾ ಬಂದಿದೆ. ಇವತ್ತು ಗುರುವಂದನ ಹಾಗೂ ನಾಡಪ್ರಭು ಕೆಂಪೇಗೌಡರ ಒಟ್ಟಿಗೆ ಒಂದೇ ವೇದಿಕೆಯಲ್ಲಿ ನೆನೆಸಿಕೊಳ್ಳುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಲೋಕ ಕಲ್ಯಾಣವಾದರೆ ಮಾತ್ರ ಆತ್ಮಕಲ್ಯಾಣವಾಗುತ್ತದೆ.ಸಮಾಜ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಲೋಕ ಕಲ್ಯಾಣ ಮಾಡಿದವರನ್ನು ನೆನೆಯುವಂಥದ್ದು ಈ ತರದ ಕಾರ್ಯಕ್ರಮಗಳನ್ನು ಮಾಡುವುದರ ಜೊತೆಗೆ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಸಾಧನೆ ಮಾಡಬೇಕು
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮಾತನಾಡಿ, ನಾಡ ಪ್ರಭು ಕೆಂಪೇಗೌಡ 21ಕ್ಕೂ ಹೆಚ್ಚು ಸಮುದಾಯವನ್ನು ಒಟ್ಟಿಗೆ ತೆಗೆದುಕೊಂದು ಹೋಗುವ ಕೆಲಸ ಮಾಡಿದ್ದಾರೆ. ಈ ನಾಡಪ್ರಭು ಕೆಂಪೇಗೌಡ ಕಂಚಿನ ಪುತ್ಥಳಿ ಪ್ರಾರಂಭದ ಗುದ್ದಲಿ ಪೂಜೆ ಹಾಗೂ ಉದ್ಘಾಟನೆ ಮಾಡುವುದಕ್ಕೆ ನಾನು ಬಂದಿರುವುದು ನನ್ನ ಪುಣ್ಯ. ಇದರ ಮಹತ್ವದ ಕೆಲಸ ಮಾಡಿದ ತಾಲ್ಲೂಕು ಒಕ್ಕಲಿಗ ಸಂಘಕ್ಕೆ ಅಭಿನಂದನೆಗಳು ಎಂದರು. ಮಲೆನಾಡ ಜನಕ್ಕೆ ಒತ್ತುವರಿ ಜಮೀನು ಮಾಡಿಕೊಂಡವರು ಕೋರ್ಟಿಗೆ ಅಲೆಯುವಂತೆ ಆಗಿತ್ತು. ಈ ಭಾಗದ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಅವರ ಒತ್ತುವರಿ ಜಮೀನನ್ನು 30 ವರ್ಷಕ್ಕೆ ಲೀಸಿಗೆ ತೆಗೆದುಕೊಳ್ಳುವಂತೆ ಮಾಡಿಕೊಟ್ಟಿದೀನಿ ನಾನು ಸಣ್ಣವನಾಗಿನಿಂದ ನನ್ನ ಬೆಳೆಸಿದ್ದು ಈ ಶ್ರೀ ಮಠ, ಮಠವು ಅನೇಕ ಮಕ್ಕಳನ್ನು ರಾಜಕೀಯ ನಾಯಕರನ್ನಾಗಿ ಮಾಡಿದೆ ಮುಖ್ಯ ಮಂತ್ರಿ ಪ್ರಧಾನ ಮಂತ್ರಿ ಮಾಡಿದ ಹೆಗ್ಗಳಿಕೆ ಇದೆ ಮಠಕ್ಕಿದೆ.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಾಸಕರಾದ ಸಿಮೆಂಟ್ ಮಂಜುನಾಥ್ ,ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಮಾದರ ಚನ್ನೈಯ ಸ್ವಾಮೀಜಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು ಹೆಚ್ ವಿ ವಿಶ್ವನಾಥ್,ಬೇಲೂರು ಶಾಸಕರು ಹುಲ್ಲಹಳ್ಳಿ ಸುರೇಶ್ ,ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು ಮುದ್ದೇಗೌಡ, ಮಾಜಿ ಶಾಸಕರು ಹೆಚ್. ಕೆ ಕುಮಾರ್ ಸ್ವಾಮಿ, ಮುರುಳಿ ಮೋಷನ್, ಮಾರುತಿ ದೇವರಾಜ್, ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ವಸಂತ್ ಮಲ್ಲೇಶ್ ಭೈರಮುಡಿ ಚಂದ್ರು, ಸುಪ್ರಜಿತ್ ಯಜಮಾನ್, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ರಘು,ಶಿವಲಿಂಗ ಸ್ವಾಮೀಜಿ, ಸ್ವಾಮಿಶ್ವರ ನಾಥ ಸ್ವಾಮೀಜಿ,ಶೃಂಗೇರಿ ಮಠದ ಗುಂನಂಥ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಇದ್ದರು.



