*ಹೃದಯಕ್ಕೆ ತಟ್ಟುವ ಸತ್ಯ ಕತೆ…ಒಂದು ಹನಿ ಕಣ್ಣೀರು*
*”ಕಾಮ ಏಷ ಕ್ರೋದ ಎಶಂ”*
ಕೆಟ್ಟ ಕಾಮನೆಯಿಂದಾಗಿ ಮನುಷ್ಯ ಏನೆಲ್ಲಾ ಮಾಡುತ್ತಾನೆ ಎನ್ನುವುದಕ್ಕೆ ಈ ಸತ್ಯ ಘಟನೆ ಸಾಕ್ಷಿ .
ತುಂಬ ವರ್ಷಗಳಿಂದ ಬರಿಬೇಕೊ ಬೇಡವೋ ಅಂತ ಹೇಳಿ
ತಳಮಳದಿಂದ ದಿನ ದುಡುತ್ತಾ ಇದ್ದೆ.. 2024 ಮುಗಿಯೋ ಹಿಂದಿನ ದಿನಾನೇ ಬರೆದು ಬಿಟ್ಟು ತಲೆ ಒಳಗಿಂದ ತೆಗೆದುಬಿಡಬೇಕು ಅಂತ ನಿರ್ಧಾರ ಮಾಡಿ.. ಇವತ್ತು ನಿಮ್ಮ ಮುಂದೆ ಎರಡು ಪುಟ ಬರೆಯಬೇಕಾಗಿದ್ದನ್ನ ಕೆಲವೇ ಸಾಲುಗಳಲ್ಲಿ ಬರೆದು ಮುಗಿಸುತ್ತಿದ್ದೇನೆ…
ಆರೋಗ್ಯ ಇಲಾಖೆಯಲ್ಲಿ ಗ್ರಾಮೀಣ ಭಾಗದ ಆರೋಗ್ಯ ಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಸಂಸಾರಸ್ಥ ಹೆಣ್ಣುಮಗಳು, ಅಪ್ರತಿಮ ಸುಂದರಿ, ಸೇವಾ ಮನೋಭಾವದ ಹೆಣ್ಣು ಮಗಳು, ಅವಳ ಆ ಸೌಂದರ್ಯವನ್ನು ನೋಡಿದ ಕೆಲವು ಕೆಟ್ಟ ಕಾಮುಕ ದೃಷ್ಟಿಯ ಜನರು ಹೇಗಾದರೂ ಮಾಡಿ ಅವಳನ್ನು ದೈಹಿಕವಾಗಿ ಅನುಭವಿಸಬೇಕು ಎಂದು, ಸುಖ ಸುಮ್ಮನೆ ಆರೋಗ್ಯ ಸಮಸ್ಯೆಯಾಗಿದೆ ಎಂದು ಆರೋಗ್ಯ ಮಂದಿರಕ್ಕೆ ಹೋಗುವುದು, ಇನ್ಯಾರಿಗೂ ಆರೋಗ್ಯ ಸಮಸ್ಯೆ ಆಗಿದೆ ಎಂದು ಕರೆದುಕೊಂಡು ಹೋಗುವುದು, ಸುಮ್ಮನೆ ಬೇಡದ ವಿಷಯಗಳನ್ನು ಮಾತನಾಡಿಸುವುದು ಮಾಡತೊಡುತ್ತಿದ್ದರು. ಇಂಥವರ ಸಂಖ್ಯೆ ದಿನ ಹೆಚ್ಚಾಗಿ ಒಂದು ಗುಂಪೇ ನಿರ್ಮಾಣವಾಯಿತು.. ಆದರೆ ಆ ಹೆಣ್ಣು ಮಗಳು ಸೇವೆ ಬಿಟ್ಟು ಬೇರೆ ಏನನ್ನು ಯೋಚಿಸುತ್ತಿರಲಿಲ್ಲ,,, ಪ್ರಯತ್ನಿಸಿದವರೆಲ್ಲ ಸಮಯಕ್ಕಾಗಿ ಕಾಯುತ್ತಿದ್ದರು… ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವಕಿಯಾಗಿದ್ದರಿಂದ ಅವಳಿಗೆ ಒಂದು ಮನೆ ಆರೋಗ್ಯ ಮಂದಿರ ನಿರ್ಮಾಣ ಮಾಡಿ ಅಲ್ಲಿಯೇ ಸೇವೆ ನೀಡಲಾಗಿತ್ತು, ಅಲ್ಲೇ ಬಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.. ಒಂದು ದಿನ ರೋಗಿಗಳಿಗೆ ಉಪಚರಿಸುವಾಗ ಯಾಕೋ ಸುಸ್ತಾಗಿ ಕುಸಿದು ಬಿದ್ದಳು… ಚಿಕಿತ್ಸೆ ಬಂದಿದ್ದ ಕೆಲವರು ಅನತಿ ದೂರದಲಿದ್ದ ಸರ್ಕಲ್ ಗೆ ಓಡಿ ಬಂದು ಅಲ್ಲಿದ್ದವರಿಗೆ ವಿಷಯ ತಿಳಿಸಿದರು… ವಿಷಯ ತಿಳಿದದ್ದು ಅವಳನ್ನು ಅನುಭವಿಸಲು ಕಾಯುತ್ತಿದ್ದವರಿಗೆ ಆಗಿತ್ತು… ತಕ್ಷಣ ಓಡಿಬಂದವರು ಒಂದು ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೊರಟರು, ವಿಕೃತ ಕಮಿಷ್ಠರು ಹೇಗಿರುತ್ತಾರೆ ಎಂದರೆ, ಕಾಮದ ಕೈಗಳಿಂದ ಎದೆ ಮೇಲೆಲ್ಲ ಕೈಯಾಡಿಸಿದರೂ, ಆಸ್ಪತ್ರೆಗೆ ತಲುಪುವುದರೊಳಗೆ ಇಡೀ ಮೈಯನ್ನೆಲ್ಲ ಸ್ಪರ್ಶಿಸಿದರು… ಹದಿನೈದು ಕಿಲೋಮೀಟರ್ ಇದ್ದ ತಾಲೂಕು ಆಸ್ಪತ್ರೆ ಬಂದೇಬಿಟ್ಟಿತು.. ಆಸ್ಪತ್ರೆಯ ಎಮರ್ಜೆನ್ಸಿ ರೂಮೊಳಗೆ ತೆಗೆದುಕೊಂಡು ಹೋದರು ಪರೀಕ್ಷೆ ನಡೆಸಿದ ವೈದ್ಯರು ಹೇಳಿದರು ಇವರು ಸತ್ತು ಹೋಗಿ ಅರ್ಧ ಗಂಟೆ ಕಳೆದಿದೆ ಎಂದು.. ಮುಂದಕ್ಕೆ ಬರೆಯಲು ಕೈ ಬರಲಿಲ್ಲ .. *ನನಗೆ ಕಾಡಿದ್ದು ಪ್ರಾಣ ಹೋಗುವ ಸಂದರ್ಭದಲ್ಲಿ ಕೂಡ ಕಾಮತೃಷೆ ತೀರಿಸಿಕೊಳ್ಳಲು ಪ್ರಯತ್ನಪಟ್ಟಿದ್ದು…* ನಾನು ಜಿಎಸ್ ಶಿವರುದ್ರಪ್ಪನವರ ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂಬ ಹಾಡನ್ನು ಮೊಬೈಲ್ನಲ್ಲಿ ಕೇಳುತ್ತಾ ಕುಳಿತೆ..
ಯಡೇಹಳ್ಳಿ ಆರ್ ಮಂಜುನಾಥ್
previous post
next post