ವರದಿ ರಾಣಿ ಪ್ರಸನ್ನ
ಎಲ್ಲಾ ಜಾಗಾನು ನಮ್ಮದೇ ಅಂತೀರಾ ಹಾಗಾದ್ರೆ ನಮ್ಮ ಜಾಗ ಯಾವುದು ? ಮತ್ತೆ ಸರ್ವೇ ಮಾಡಿಸೋಕು ಜನಗಳೇ ದುಡ್ಡು ಕೊಡಬೇಕು ಎಂದು ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಗರಂ ಆಗುವ ಜೊತೆಗೆ ಅರಣ್ಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
ಮೂಕನ ಮನೆ ಫಾಲ್ಸ್ ಹತ್ತಿರ ಸೇತುವೆ ನಿರ್ಮಾಣಕ್ಕೆ ಸರಿಯಾದ ಪ್ಲಾನ್ ಮಾಡದೆ ಹಾಗು ಪ್ರವಾಸೋಧ್ಯಮ ಇಲಾಖೆಗೂ ಅದನ್ನು ನೀಡದೆ 25 ಲಕ್ಷ ಹಣವನ್ನು ಪೋಲು ಮಾಡಿರುವ ಕುರಿತು ಬಗರ್ ಹುಕುಂ ತಾಲ್ಲೂಕು ಅಧ್ಯಕ್ಷರು ಆದ ಹೆಚ್ ಹೆಚ್ ಉದಯ್ ಹಾಗು ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಪಿಡಬ್ಲ್ಯೂ ಡಿ ಇಂಜಿನಿಯರ್ ಅವರಿಗೆ ತರಾಟೆಗೆ ತೆಗೆದು ಕೊಂಡರು .
2024-25 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ಮಂಗಳವಾರ ನಡೆಯಬೇಕಾಗಿದ್ದು ಕಾರಣಾಂತರಗಳಿಂದ ಇಂದು ಬುಧವಾರ ನ.20ರಂದು ಶಾಸಕರಾದ .ಎಸ್ ಮಂಜುನಾಥ್ (ಸಿಮೆಂಟ್ ಮಂಜು) ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 11.30 ಗಂಟೆಗೆ ಸಕಲೇಶಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು.
ಅರಣ್ಯ ಇಲಾಖೆಯಿಂದ ಕುಡಿಯುವ ನೀರಿಗೆ ಗುಂಡಿ ತೆಗೆದು ಪೈಪ್ ಹಾಕಲು ಯಾವುದೇ ಸಮಸ್ಯೆ ಕೊಡಬಾರದು ಎಂದು ಸೂಚಿಸಿದರು. ಯಸಳುರಿನಲ್ಲಿ ಹಂದಿ ಬಲೆಗೆ ಬಿದ್ದಿದ್ದ ಕುರಿತು ರೈತರಿಗೆ ನೀಡಿದ ಸಮಸ್ಯೆಯ ಕುರಿತು ಚರ್ಚಿಸಿದರು. ಕಾಡು ಹಂದಿಗಳು ಬಂದು ರೈತರಿಗೆ ತೊಂದರೆ ಕೊಟ್ಟಾಗ ಮಾತನಾಡದವರು ಹಂದಿ ಬಲೆಗೆ ಬಿದ್ದಿದ್ದಕ್ಕೇಕೆ ಅವರಿಗೆ ಸಮಸ್ಯೆ ನೀಡುತ್ತೀರಿ ಎಂದು ಶಾಸಕರು ಯಸಲೂರು ಅರಣ್ಯ ಇಲಾಖೆಯವರನ್ನು ಪ್ರಶ್ನಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯವರು ಎಷ್ಟು ಗಿಡಗಳನ್ನು ಬೆಳೆದಿರಿ ಎಂಬ ಮಾಹಿತಿಗಿಂತಲು ಆ ಗಿಡಗಳನ್ನು ರೈತರಿಗೆ ಹಾಗು ಪರಿಶಿಷ್ಟ ಜಾತಿ ,ಪಂಗಡದವರಿಗೆ ಹಂಚಿಕೆ ಮಾಡಿದ್ದೀರಿ ಹಾಗು ಬೆಳೆಯಲು ಎಷ್ಟು ಹಣ ನೀಡಿದ್ದೀರಿ ಎಂಬ ಮಾಹಿತಿ ನೀಡಿ ಸುಮ್ಮನೆ ಎತ್ತಿನಹೊಳೆ ಅಲ್ಲೆಲ್ಲ ನೀಡಿ ನನಗೆ ಲೆಕ್ಕ ಕೊಡಬೇಡಿ ಎಂದು ಕುಮಾರಯ್ಯ ನವರು ಹಾಗು ಶಾಸಕರು ಸ್ವಲ್ಪ ಗರಂ ಆಗಿಯೇ ಮಾತನಾಡಿದರು.
ಆರೋಗ್ಯ ಇಲಾಖೆಯವರಿಗೆ ಸಾರ್ವಜನಿಕರ ದೂರಿನ ಮೇರೆಗೆ ಕ್ರಾಫಾರ್ಡು ಆಸ್ಪತ್ರೆಯಲ್ಲಿ ಬಿಸಿ ನೀರು ಹಾಗು ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಗೆ ಹಣ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಇನ್ನೊಮ್ಮೆ ದೂರುಗಳು ಬಂದರೆ ನಾನೆ ಸ್ವತಃ ಬಂದು ಇದರ ಕುರಿತು ಕ್ರಮ ವಹಿಸಬೇಕೆಂದು ಸೂಚಿಸಿದರು.
ನ್ಯಾಯ ಬೆಲೆ ಅಂಗಡಿಯಲ್ಲಿ ಎಷ್ಟು ಏ ಪಿ ಎಲ್ ಕಾರ್ಡ್ ಗಳಿಗೆ ಬದಲಾವಣೆಯಾಗಿದೆ ಎಂದು ಮಾಹಿತಿ ಪಡೆದರು, ಸರಿಯಾದ ಸಮಯಕ್ಕೆ ಬಿಪಿಎಲ್ ದಾರರಿಗೆ ದಾಸ್ತಾನನ್ನು ನೀಡಬೇಕು ಎಂದು ತಿಳಿಸಿದರು.
ಗ್ರಾಮಗಳಲ್ಲಿ ಸಾರಾಯಿಯನ್ನು ಮಾರದಂತೆ ನೋಡಿಕೊಳ್ಳಬೇಕು ಕ್ರಮ ವಹಿಸಬೇಕು ಇದರಿಂದ ಕೂಲಿ ಕಾರ್ಮಿಕರು ಸಾಲ ಮಾಡಿ ಕುಡಿದು ವಾರದಲ್ಲಿ ಬಂದ ಹಣವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಇದರ ಕುರಿತು ಕ್ರಮವಹಿಸಿ ಎಂದು ಅಬಕಾರಿ ಇಲಾಖೆ ವೆಂಕಟೇಶ್ ಅವರಿಗೆ ಶಾಸಕರು ಸೂಚಿಸಿದರು ಈ ಸಮಯದಲ್ಲಿ ಅವರು ಸಿಬ್ಬಂದಿ ಕೊರತೆ ಕುರಿತು ಸಹ ಶಾಸಕರಿಗೆ ತಿಳಿಸಿದರು.
ಪ್ರತಿ ಶಾಲೆಗಳಿಗೆ ಎನ್ ಆರ್ ಐ ಜಿ ಅಡಿ ಪಿಡಿಓಗಳು ಪ್ರಸ್ತಾವನೆಯನ್ನು ನೀಡಿ ಪ್ರತಿ ಶಾಲೆಗಳಿಗೆ ಕಾಂಪೌಂಡ್ ಅನುಮೋದನೆ ,ಪಡೆಯುವಂತೆ ಸೂಚಿಸಿದರು
ಪಶುಪಾಲನಾ ಇಲಾಖೆ , ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಗಳಿಂದ ಅವಗಾಹನೆಗೆ, ಅನಾನುಕೂಲತೆ, ಅನುಕೂಲತೆಗಳ ಕುರಿತು ಮಾಹಿತಿ ಪಡೆದರು.
ಈ ಸಭೆಯಲ್ಲಿ ಸಕಲೇಶಪುರ ತಾಲ್ಲೂಕು ದಂಡಾಧಿಕಾರಿ ಮೇಘನಾ , ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್, ಬಗರ್ ಹುಕುಂ ತಾಲ್ಲೂಕು ಅಧ್ಯಕ್ಷರು ಅಧ್ಯಕ್ಷರು ಹೆಚ್ ಹೆಚ್ ಉದಯ್, ಕೋಮಾರಯ್ಯ, ತಾಲ್ಲೂಕು ಮಟ್ಟದ ಎಲ್ಲಾ ಅನುಷ್ಟಾನಾಧಿಕಾರಿಗಳು ಹಾಗೂ ತುಲ್ಲೂಕಿನ 26 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.ಸಭೆಗೆ ಖುದ್ದು ಇಲಾಖಾ ಮುಖ್ಯಾಧಿಕಾರಿಗಳು ಖುದ್ದು ಹಾಜರಾಗಬೇಕೆಂದು ಸೂಚಿಸಲಾಗಿತ್ತು ಆದರೂ ಕೆಲವು ಅಧಿಕಾರಿಗಳು ಗೈರು ಹಾಜರಾಗಿದ್ದರು.
previous post
next post