ವರದಿ ರಾಣಿ ಪ್ರಸನ್ನ
ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುನಾಥ್ ರವರ ಮನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಜನವರಿ 12 ರಿಂದ 26 ವರೆಗೆ ನಡೆಯುವ ಭಾರತಮಾತಾ ಪೂಜನಾ ಕಾರ್ಯಕ್ರಮದ ಪೂಜಾ ಕಾರ್ಯಕ್ರಮ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರಕರಾದ ತಿಪ್ಪೇಶ್ ಜಿ ಯವರು ಭಾರತ ವಿಶ್ವ ಗುರು ವಾಗುವತ್ತ ಹೆಜ್ಜೆ ಇಡುತ್ತಿದೆ ಎಂದರು. ವಿವಾಹ ವಿಚ್ಚೇದನ ನಡೆಯಲು ನಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಡದೇ ಇರುವುದು ಕಾರಣ ಎಂದರು.
ಈ ಮೊದಲು ಭಾರತ ಮಾತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ ಹಾಸನ ವಿಭಾಗ ಸೇವಾ ಪ್ರಮುಖ್ ಗೌತಮ್ ಜಿ ಸಂಘದ ಪ್ರಮುಖ್ ನಂದನ್ ವಿಶ್ವಹಿಂದೂ ಪರಿಷದ್ ಜಿಲ್ಲಾ ಸಹಕಾರ್ಯದರ್ಶಿ ಕರಡಿಗಾಲ ಹರೀಶ್ ತಾಲೂಕು ಅಧ್ಯಕ್ಷರಾದ ಬಿರಡಹಳ್ಳಿ ಬಾಲಕೃಷ್ಣ ಮತ್ತು ಪರಿಷದ್ ನ ಎಲ್ಲ ಕಾರ್ಯಕರ್ತರು ಭಾಗವಹಿಸಿದ್ದರು.
previous post
next post