ಹಣಬಲ ತೋಳ್ಬಲ ಇದ್ದರೆ ಯಾರು ಏನು ಬೇಕಾದರು ಮಾಡಬಹುದೆ ಪ್ರಜಾಪ್ರಭುತ್ವ ಅಸ್ತಿತ್ಬದಲ್ಲಿದೆಯೆ ಎಂದು
ಸಿ.ಐ. ಟಿ.ಯು. ಜಿಲ್ಲಾಧ್ಯಕ್ಷ
ಧರ್ಮೆಶ್ ಪ್ರಶ್ನೆ. ಮಾಡಿದ್ದಾರೆ.
ಸಕಲೇಶಪುರ ಭೂಮಾಫಿಯಾದ ತಾಣವಾಗುತ್ತಿದ್ದು, ಅವರು ಬೌನ್ಸರ್ಗಳನ್ನು ಕರೆಸಿ , ಆಡಳಿತ ವ್ಯವಸ್ಥೆಯನ್ಮು ಬಳಸಿ ಕೊಡುವ ಕಿರುಕುಳವು ಸಕಲೇಶಪುರ ಸಂಸ್ಕ್ರತಿಗೆ ಮಾರಕ. ಇದಕ್ಕೆ ಸ್ಥಳೀಯರು ಬಲಿಯಾಗದಂತೆ ಹೋರಾಟ ಮಾಡುವುದು ಅನಿವಾರ್ಯ ಎಂದು ಸಕಲೇಶಪುರ ಅಲೂರು ಮಾಜಿ ಶಾಸಕ ಹೆಚ್ .ಎಂ ವಿಶ್ವನಾಥ್ ಹೇಳಿದರು.
ಅವರು
ಸಕಲೇಶಪುರದ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದು ಕಿರುಕುಳ ಅನುಭವಿಸಿ ,ಮೂಲಭೂತ ಸೌಕರ್ಯಕ್ಕೂ ಅಡ್ಡಿಪಡಿಸಲಾಗಿದೆ ಎಂದು ಎಂದು ಸಕಲೇಶಪುರ ಕುರುಹೀನ ಶೆಟ್ಟಿ ಚಾರೀಟೇಬಲ್ ಟ್ರಸ್ಟ್ ಮನವಿ ಮಾಡಿ ಕರೆದಿದ್ದ ಸರ್ವ ಸಂಘಟನೆಗಳ ಸಭೆ ಯಲ್ಲಿ ಮಾತನಾಡಿದರು.
ಸಭೆಯಲ್ಲಿ ಸಕಲೇಶಪುರದ ಅನೇಕ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು. ಕುರುಹೀನ ಶೆಟ್ಟಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ರವರು ತಮ್ಮ ಸಮುದಾಯದ ಕುಟುಂಬವೊಂದು ಭೂಮಾಫಿಯಾದಿಂದ ದೌರ್ಜನ್ಯಕ್ಕೊಳಗಾಗಿರುವ ವಿಚಾರ ತಿಳಿಸಿ ನ್ಯಾಯಕೊಡಿಸಬೇಕೆಂದು ಸಭೆಗೆ ಮನವಿ ಮಾಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಡಾ. ಹೆಚ್ ಟಿ.ಮೋಹನ್ ಕುಮಾರ್ ಮಾತನಾಡಿ ಒಕ್ಕೂಟವು ಬೆಳೆಗಾರರ ಹಿತ ಕಾಪಾಡುತ್ತಿದೆ. ಭೂಮಾಫಿಯಾ ಅಥವಾ ಯಾವುದೇ ಸಮಸ್ಯೆಯಿದ್ದರು ಬಗೆಹರಿಸಲು ಹೋರಾಟ ಮಾಡುತ್ತೇವೆ. ಈ ಸಭೆಯಲ್ಲಿ ಆಗುವ ನಿರ್ಣಯಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದರು.
ಭೂಮಾಫಿಯಾದ ಕೈಗೆ ಸಿಕ್ಕಿಕೊಂಡರೆ ಸ್ಥಳೀಯರು ಎಷ್ಟು ಸಂಕಟ ಪಡಬೇಕಾಗುತ್ತದೆ ಎಂಬುದು ಸಕಲೇಶಪುರ ತಾಲ್ಲೂಕಿನ ಪ್ರತಿ ಹಳ್ಳಿಯ ಮನೆ ಮನೆಗೂ ತಿಳಿಯಬೇಕು.ಆಗ ಇದರ ವಿರುದ್ದ ಜನ ಜಾಗೃತಿಯಾಗಿ ಭೂಮಾಫಿಯಾವನ್ಮು ಮಟ್ಟ ಹಾಕಬಹುದಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿರ್ದೇಶಕ ಬೆಕ್ಕನಳ್ಳಿ ನಾಗರಾಜ ತಿಳಿಸಿದರು.
ಬರೀ ಸಭೆ ನಡೆಸಿ ಎದ್ದು ಹೋದರೆ ಪ್ರಯೋಜನವಿಲ್ಲ .ನಮ್ಮ ಜಮೀನಿನ ದಾಖಲಾತಿಗಳನ್ನು ಕಾನೂನಾತ್ಮಕ ಹೋರಾಟಕ್ಕೆ ಸಿದ್ದಪಡಿಸಿಕೊಳ್ಳುವುದು . ಹಾಗೂ ಜನಾಂದೋಲನ ,,ಚಳುವಳಿ ಮಾಡಲು ರೂಪುರೇಷೆ ಸಿದ್ದಪಡಿಸಬೇಕೆಂದು ನಿರ್ದೇಶಕ ಸುರೇಂದ್ರ ತಿಳಿಸಿದರು.
ಭೂಮಾಫಿಯಾದ ಚಟುವಟಿಕೆಗಳು ಭಯ ಹುಟ್ಟಿಸುತ್ತವೆ. ಮೊಕದ್ದಮೆ ನ್ಯಾಯಲಯದಲ್ಲಿದ್ದಾಗಲೆ, ಜಮೀನು ಅತಿಕ್ರಮಣ ಹಾಗೂ ವಾಸದ ಮನೆ ಖುಲ್ಲಾ ಮಾಡಿಸಲು ಪ್ರಯತ್ನಿಸುವುದು ಹಾಗೂ ಮೂಲಭೂತ ಸೌಕರ್ಯಗಳಿಗೆ ಅಡ್ಡಿಪಡಿಸುವುದು, ಭಯಾನಕವಾಗಿದೆ ಎಂದು ಹುರುಡಿ ಶಿವಕುಮಾರ್ ಹೇಳಿದರು.
ಯಡೇಹಳ್ಳಿ ಮಂಜುನಾಥ್ ಮಾತನಾಡಿ ಭೂವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪನವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಸ್ಥಳೀಯರ ಧ್ವನಿಯನ್ನು ಅಡಗಿಸಿ ಅವರು ಏನು ಸಾಧನೆ ಮಾಡುತ್ತಾರೆ ನೋಡೋಣ . ಮೂಲಭೂತ ಸೌಕರ್ಯಗಳಿಗೆ ಅಡ್ಡಿಪಡಿಸಿರುವ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ತತಕ್ಷಣ ಎಸಿ. ಹಾಗೂ ಡಿವೈಎಸ್ ಪಿ ಯವರನ್ನು ಒತ್ತಾಯ ಮಾಡುವ ಬನ್ನಿ ಎಂದರು.
ದಲಿತ ಮುಖಂಡ ದೇವರಾಜು ಮಾತನಾಡಿ
ದಲಿತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಕುಟುಂಬಕ್ಕೆ . ಹೊರಗಿನ ದಲಿತ ವ್ಯಕ್ತಿಗಳನ್ನು ಬಳಸಿಕೊಂಡು ಸುಳ್ಳು ಅಟ್ರಾಸಿಟಿ ದಾಖಲಿಸಿ , ನಾಪತ್ತೆಯಾಗುವಂತೆ ಮಾಡಲಾಯಿತು. ಇದನ್ನು ಪೋಲೀಸ್ ಅಧಿಕಾರಿಗಳು ಪರಿಶೀಲಿಸದೆ ಮಾಡಿದ್ದಾರೆ. ನೈಜ ಪ್ರಕರಣಗಳಲ್ಲಿ ತೀರ್ಮಾನ ಮಾಡಿ ಕಳುಹಿಸುತ್ತಾರೆ. ಸುಳ್ಳು ಪ್ರಕರಣ ದಾಖಲಿಸುತ್ತಾರೆ. ಈ ರೀತಿಯಾದರೆ ನೈಜ ಪ್ರಕರಣಗಳನ್ನು ಜನ ಅನುಮಾನದಿಂದ ನೋಡುತ್ತಾರೆ
ನೈಜ ಅಟ್ರಾಸಿಟಿ ಪ್ರಕರಣಗಳಿಗೆ ನ್ಯಾಯ ಸಿಗುವುದಿಲ್ಲ ಇದು ನಾಚಿಕೆಗೇಡಿನ ವಿಷಯ ಎಂದರು.
ಸಭೆಯಲ್ಲಿ ಭೂಮಾಫಿಯಾದ ವಿರುದ್ದ ಹೋರಾಟಕ್ಕೆ ಸರ್ವ ಸಂಘಟನೆಗಳ ಒಕ್ಕೂಟ ರಚನೆಯಾಗಬೇಕೆಂದು ನಿರ್ಣಯಿಸಲಾಯಿತು.
ಸಭೆಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ ಸಂಘದ ಅಧ್ಯಕ್ಷ ಪರಮೇಶ್, ಕಸ್ಬಾ ಬೆಳೆಗಾರರ ಸಂಘದ ಅಧ್ಯಕ್ಷ ಪ್ರಸನ್ನ, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜು . ಕಾಂಗ್ರೇಸ್ ಮುಖಂಡ ವಡ್ರಳ್ಳಿ ರಾಜು ದಲಿತ ಮುಖಂಡ ಮಾಸುವಳ್ಳಿ ಚಂದ್ರು, ವಿರೇಶ್ ಪ್ರದೇಶ ಕಾಂಗ್ರೇಸ್ ಸಮಿತಿ ಸದಸ್ಯ ಸಲೀಂ ಕೊಲ್ಲಹಳ್ಳಿ .ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗಿರೀಶ್, ಅಕ್ಕಮಹಾದೇವಿ ಸಂಘದ ಅಧ್ಯಕ್ಷರು , ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರತ್ನಾಕರ್.ಮುಸ್ಲೀಂ ಮುಖಂಡರಾದ ಶಬ್ನೀರ್ ಖಾನ್ ಸವಿತಾ ಸಮಾಜದ ಅಧ್ಯಕ್ಷರಾದ ಸೋಮಶೇಖರ್ ಹಾಜರಿದ್ದರು.
ನಂತರ ತಂಡದಿಂದ ಸಕಲೇಶಪುರ ಉಪವಿಭಾಗಾಧಿಕಾರಿಗಳು ಹಾಗೂ ಡಿವೈ.ಎಸ್ಪಿ ಯವರನ್ನು ಭೇಟಿ ಮಾಡಿ ಭೂ ಮಾಫಿಯಾದಿಂದ ದೌರ್ಜನ್ಯಕ್ಕೊಳಗಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಕುಟುಂಬಕ್ಕೆ ಸೂಕ್ತ ಸೌಲಭ್ಯ ಒದಗಿಸುವಂತೆ ಆಗ್ರಹಿಸಲಾಯಿತು.
