ಆಲೂರು. ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಊರಿನ ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರೆಲ್ಲ ಒಟ್ಟುಗೂಡಿ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ರೀತಿಯಲ್ಲಿ ಆಲೂರು ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಲೇಜರ್ ಟೈ. ಬೆಲ್ಟು. ಸಹಿತವಾಗಿ ಸಮಸ್ತವನ್ನು ನೀಡಿ ಹೊಸೂರು ಗ್ರಾಮಸ್ಥರು ಮಾದರಿಯಾಗಿದ್ದಾರೆ.
ವಸೂರು ಗ್ರಾಮದ ಪೋಷಕ ವರ್ಗ ಹಾಗೂ ಹಿರಿಯ ವಿದ್ಯಾರ್ಥಿಗಳು. ಈ ಸಮಸ್ತ ಗಳಿಗೆ ಸಹಕಾರ ನೀಡಿದ್ದಾರೆ. ಊರಿನ ಗ್ರಾಮಸ್ಥರಾದ ವೆಂಕಟೇಶ್. ಮುಖ್ಯ ಶಿಕ್ಷಕಿಯಾದ ಶ್ರೀಮಂತ ಬೇಬಿ ಹಜಾರೆ. ಶ್ರೀ ನಂಜೇಗೌಡರು ಹಾಗೂ ವೆಂಕಟನಾರಾಯಣ ಶಿಕ್ಷಕರು. ಇವರ ಪರಿಶ್ರಮದಿಂದ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎಂದು ತೋರಿಸಿಕೊಡುವ ಕೆಲಸ ಮಾಡಿದ್ದಾರೆ. ಅದೇ ಊರಿನ ಹಳೆ ವಿದ್ಯಾರ್ಥಿ ದೀಪಕ್ ಎಂಬತ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಈತನು ನಮ್ಮ ಮಾಧ್ಯಮದೊಂದಿಗೆ ಮಾತನಾಡಿ ನಮಗೆ ಹಿಂದೆ ನಮ್ಮ ಸರ್ಕಾರಿ ಶಾಲೆಯಲ್ಲಿ ಯಾವುದೇ ರೀತಿ ಸೌಲಭ್ಯವಿಲ್ಲ ಆದರೂ ಶಿಕ್ಷಕರ ನೆರವಿನಿಂದ ಕಷ್ಟಪಟ್ಟು ಓದಿ ದುಬೈನಲ್ಲಿ ಕೆಲಸ ಮಾಡುವ ಸಂದರ್ಭ ಬಂದಿದೆ. ನಮ್ಮ ಮಕ್ಕಳು ಮೂಲಭೂತ ಸೌಕರ್ಯಯಿಂದ ವಂಚಿತವಾಗಬಾರದೆಂದು ನಾವುಗಳು ಹಾಗೂ ನಮ್ಮ ಶಿಕ್ಷಕರೆಲ್ಲ ಸೇರಿ ಮಕ್ಕಳಿಗೆ ಸಮವಸ್ತ್ರವನ್ನು ನೀಡಿದ್ದೇವೆ ಎಂದು ಹೆಮ್ಮೆಯಿಂದ ಮಾತನಾಡಿದರು. ನಾವು ಬದಲಾಗಿ ನಮ್ಮ ಮಕ್ಕಳನ್ನು ಸರ್ಕಾರಿಗೆ ಶಾಲೆಗೆ ಸೇರಿಸುವುದರ ಮೂಲಕ ಸರ್ಕಾರಿ ಶಾಲೆಗಳನ್ನು ಬೆಳೆಸಬೇಕೆಂದು ಮಾತನಾಡಿ ಕನ್ನಡದ ಕಂಪನ್ನು ಹೆಚ್ಚಿಸಿದರು.

