ವರದಿ ರಾಣಿ ಪ್ರಸನ್ನ
ಸಕಲೇಶಪುರದ ಬಾಗೆ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯ ಅದ್ದೂರಿ ಸ್ವಾಗತ.
ಸಕಲೇಶಪುರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಇಂದು ಬಿಡದಿಯಿಂದ ಹೊರಟು ಆದಿಚುಂಚನಗಿರಿ ಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಕಲೇಶಪುರಕ್ಕೆ ಕಳಿಸಿಕೊಡಲಾಯಿತು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್ ಎಮ್ ವಿಶ್ವನಾಥ್ ತಿಳಿಸಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸಕಲೇಶಪುರ ತಲುಪಲಿದೆ. ಸಕಲೇಶ್ವರ ದೇವಸ್ಥಾನದ ಬಳಿ ಬರಲಿದೆ . ದೇವಸ್ಥಾನದಲ್ಲಿ ಪುತ್ಥಳಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ನಿಗಧಿತ ಸ್ಥಳಕ್ಕೆ ತಲುಪಿದ ನಂತರ ಪುತ್ಥಳಿಯನ್ನು ಪ್ರತಿಷ್ಟಾಪಿಸಲಾಗುವುದು ಎಂದು ತಿಳಿಸಿದ್ದಾರೆ ಸಕಲೇಶಪುರದ ಎಲ್ಲಾ ನಾಗರಿಕ ಬಂಧುಗಳು ಆಗಮಿಸಿ ಬರಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರು ವಿಶ್ವನಾಥ್, ಬಾಚಿಹಳ್ಳಿ ಪ್ರತಾಪ್, ಭೈರಮುಡಿ ಚಂದ್ರು ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷರು, ದೊಡ್ಡದಿಣ್ಣೆ ಮಂಜಣ್ಣ, ಸ್ವಾಮುಗೌಡ್ರು, ಕವನ್ ಗೌಡ್ರು, ಜಯಶಂಕರ್ , ಜಯಪ್ರಕಾಶ್, ವಚನ್ ಗೌಡ್ರು, ರಘು ಪಾಳ್ಯ, ಗೋಪಿ, ಬಾಗೆ ಪಂಚಾಯಿತಿ ಅಧ್ಯಕ್ಷರು ರೇಖಾ ಗೋಪಿನಾಥ್, ಯಡೆಹಳ್ಳಿ ಮಂಜಣ್ಣ, ಯಡೇಹಳ್ಳಿ ಬಸವಣ್ಣ, ಮಾಜಿ ಅಧ್ಯಕ್ಷರು ರಾಮಕೃಷ್ಣ, ಸುಲೋಚನ ರಾಮಕೃಷ್ಣ , ಇನ್ನು ಇನ್ನಿತರ ಮುಖಂಡರು, ಗ್ರಾಮಸ್ಥರು, ಉಪಸ್ಥಿತರಿದ್ದರು,









