*ವಿಜಯದುರ್ಗ ಸಾಧನಾ ರತ್ನ ಪ್ರಶಸ್ತಿಗೆ ವಿವಿಧ ಕ್ಷೇತ್ರದ ಹನ್ನೆರಡು ಸಾಧಕರ ಆಯ್ಕೆ*
ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು, ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ಘಟಕ ೨೦೨೫ ಜನವರಿ ೧೨ ಭಾನುವಾರ ಆಲೂರು ತಾಲ್ಲೂಕಿನ ಕೆ. ಹೊಸಕೋಟೆ ಹೋಬಳಿಯ ಹರಿಹಳ್ಳಿ ಶ್ರೀ ಕೆಂಚಾಂಬ ದೇವಸ್ಥಾನ ಆವರಣದಲ್ಲಿ ಹಿರಿಯ ಲೇಖಕಿ, ಪತ್ರಕರ್ತೆ ಲೀಲಾವತಿಯವರ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹನ್ನೆರಡು ಸಾಧಕರಿಗೆ ೨೦೨೫ ನೇ ಸಾಲಿನ “ವಿಜಯದುರ್ಗ ಸಾಧನಾ ರತ್ನ ಪ್ರಶಸ್ತಿ”ಗೆ ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಿಂದ ಡಾ. ಎಂ. ಇ. ಜಯರಾಜ್ ಹಾಗೂ ರವಿ ಆರ್.ಎನ್; ಮಾಧ್ಯಮ ಕ್ಷೇತ್ರದಿಂದ ಎಂ.ಪಿ. ಹರೀಶ್ ಹಾಗೂ ಟಿ.ಕೆ.ಕುಮಾರಸ್ವಾಮಿ; ಸಂಘಟನಾ ಕ್ಷೇತ್ರದಿಂದ ಎಚ್.ವಿ.ರಾಘವೇಂದ್ರ ಹಾಗೂ ಬಿ.ಕೆ.ರಂಗಸ್ವಾಮಿ; ಸಮಾಜ ಸೇವಾ ಕ್ಷೇತ್ರದಿಂದ ಎಚ್.ಜಿ.ಕಾಂಚನಮಾಲ ಹಾಗೂ ನವೀನ್ ಕುಮಾರ್; ಸಾಹಿತ್ಯ ಕ್ಷೇತ್ರದಿಂದ ಡಿ. ಸುಜಲಾದೇವಿ ಹಾಗೂ ಸತ್ಯನಾರಾಯಣ ಹರಿಹಳ್ಳಿ; ಸ್ಕೌಟ್ಸ್ & ಗೈಡ್ಸ್ ಕ್ಷೇತ್ರದಿಂದ ಬಿ.ಎಸ್. ಹಿಮ ಹಾಗೂ ಎಲಿಜಬೆತ್ ಎಂ. ಎಲ್. ಅವರುಗಳನ್ನು ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಜನವರಿ ೧೨ ರಂದು ನಡೆಯುವ ಆಲೂರು ತಾಲ್ಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಲೂರಿನ ಹಿರಿಯ ಸಾಹಿತಿ ಎಸ್. ಎಂ. ದೇವರಾಜೇಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮಣಿಪುರ ಕೃಷ್ಣೇಗೌಡ, ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಕ.ಸಾ.ಪ. ಮಾಜಿ ಅಧ್ಯಕ್ಷ ಎಸ್.ಎಸ್. ಶಿವಮೂರ್ತಿ, ಸಾಹಿತಿ ಸತ್ಯನಾರಾಯಣ ಹರಿಹಳ್ಳಿ ಉಪಸ್ಥಿತರಿದ್ದರು.
previous post