Blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

ವರದಿ ರಾಣಿ ಪ್ರಸನ್ನ

ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು, ಸೇವಾ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ: 10-02-2025 ರಿಂದ

+ ಸಾರ್ವಜನಿಕರಿಗೆ ನೇರವಾಗಿ ಸೇವೆ ನೀಡುವ ಗ್ರಾಮ ಆಡಳಿತ

+ ಮಹಿಳಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುರಕ್ಷತಾ ಸೌಲಭ್ಯಗಳು ಬೇಡವೆ?

+ ಗ್ರಾಮ ಆಡಳಿತ ಅಧಿಕಾರಿಗಳು ಕುಟುಂಬದವರೊಂದಿಗೆ

ನೆಮ್ಮದಿಯಿಂದ ಜೀವನ ಸಾಗಿಸಲು ವರ್ಗಾವಣೆ ಬೇಡವೆ?

* ಗ್ರಾಮ ಆಡಳಿತ ಅಧಿಕಾರಿಗಳಿಗೆ ಬಡ್ತಿ ಬೇಡವೆ?

ಸರ್ಕಾರದ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ

ತಲುಪಿಸುವ ಗ್ರಾಮ ಆಡಳಿತ ಅಧಿಕಾರಿಗೆ ಕಾನೂನಿನ ರಕ್ಷಣೆ ಬೇಡವೆ?

+ ಗ್ರಾಮ ಆಡಳಿತ ಅಧಿಕಾರಿಗಳ ಮೇಲೆ ನಡೆಯುತ್ತಿರುವ

ಶೋಷಣೆಗಳು ನಿಲ್ಲುವುದು ಬೇಡವೆ? ಕಂದಾಯ ಇಲಾಖೆಯ ಆಧಾರ ಸ್ತಂಭಗಳಿಗೆ ಭದ್ರತೆ ಬೇಡವೆ?

ಗ್ರಾಮ ಆಡಳಿತ ಅಧಿಕಾರಿಗಳ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಏನೇ ಬರಲಿ ಒಗ್ಗಟ್ಟಿರಲಿ…

ಸಂಘಟನೆ ಚಿರಾಯು ವಾಗಲಿ…

ಸಾರ್ವಜನಿಕ ಸೇವೆಗಳಲ್ಲಿ ವ್ಯತ್ಯಯ, ಸಾರ್ವಜನಿಕರು ಸಹಕರಿಸಲು ಕೋರಿದೆ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ
ದಿನಾಂಕ  10-02-2025 ರಿಂದ
ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡುತ್ತಿರುವ ಬಗ್ಗೆ

*ಮುಷ್ಕರಕ್ಕೆ ಕಾರಣಗಳು ಮತ್ತು ಬೇಡಿಕೆಗಳು* 

ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ದಿನಾಂಕ:22-09-2024 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನ, ಚಿತ್ರದುರ್ಗ ದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಅಧ್ಯಕ್ಷರು, ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ ದಿನಾಂಕ:26-09-2024 ರಿಂದ 03-10-2024 ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಿದ ಕಾರಣ ದಿನಾಂಕ:03-10-2024 ರಂದು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಭರವಸೆ ನೀಡಿರುತ್ತಾರೆ. ಅದರಂತೆ ಸದರಿ ದಿನದಿಂದಲೇ ರಾಜ್ಯವ್ಯಾಪಿ ಮುಷ್ಕರವನ್ನು ಹಿಂಪಡೆಯಲಾಗಿರುತ್ತದೆ. ತದನಂತರ ಸರ್ಕಾರವು ಈ ವೃಂದದ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿರುತ್ತದೆ.  ಮೇಲ್ಕಂಡ ಎಲ್ಲಾ ಕಾರಣಗಳಿಗಾಗಿ ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿಗೆ ಎಲ್ಲಾ ನೌಕರರಿಗೆ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ತೀರ್ಮಾನಿಸಲಾಗಿರುತ್ತದೆ.

ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 51.5ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ಪೌತಿ ಖಾತೆ ದಾಖಲಿಸುವಂತೆ ಇ-ಪೌತಿ ಖಾತಾ ಆಂದೋಲನ ಕೈಬಿಡುವಂತೆ ಕೋರಿ,

ವಿಷಯಕ್ಕೆ ಸಂಬಂಧಿಸಿದಂತೆ ಕೃಷಿ ಜಮೀನಿನ ಮಾಲಿಕರು ಮರಣ ಹೊಂದಿದ ನಂತರ ಪೌತಿ/ವಾರಸಾ ರೀತಿಯ ಮಾಲಿಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆ ಮಾಡುವ ಹಿನ್ನೆಲೆಯಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ನಿರ್ವಹಣೆ ಕಾರ್ಯದ ಸಂದರ್ಭದಲ್ಲಿ `ಗ್ರಾಮ ಆಡಳಿತ ಅಧಿಕಾರಿಗಳು ಪೌತಿ ಎಂದು ಗುರುತಿಸಲಾದ ಪಹಣಿಗಳ ಮೃತ ಖಾತೆದಾರರ ಉತ್ತರಾಧಿಕಾರಿಗಳಿಗೆ ಹಕ್ಕುಬದಲಾವಣೆ ಮಾಡುವ ಸಂಬಂಧ ಇ-ಪೌತಿ ಆಂದೋಲನವನ್ನು ಜಾರಿಗೊಳಿಸಲು ತೀರ್ಮಾನಿಸಿರುವುದು ಸರಿಯಷ್ಟೇ. ಖಾತೆ
,ಇ-ಪೌತಿ ಖಾತೆ ಆಂದೋಲನವನ್ನು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘವು ಈ ಕೆಳಕಂಡ ಕಾರಣಗಳಿಂದಾಗಿ ವಿರೋಧಿಸುತ್ತದೆ.

• ಖಾಸಗಿ ಒಡೆತನದ ಕೃಷಿ ಜಮೀನುಗಳ ಹಕ್ಕುಬದಲಾವಣೆ ವಿಚಾರವು ಖಾತೆದಾರರ ಅಥವಾ ವಾರಸುದಾರರ ವೈಯಕ್ತಿಕ ವಿಚಾರಗಳಾಗಿದ್ದು, ಸದರಿ ಜಮೀನುಗಳ ಹಕ್ಕುಬದಲಾವಣೆ ವಿಚಾರವು ಸಹ ಉತ್ತರಾಧಿಕಾರಿಗಳ ವೈಯಕ್ತಿಕ ವಿವೇಚನೆಗೆ ಬಿಟ್ಟ ವಿಚಾರವೇ ಆಗಿರುತ್ತದೆ. ಒತ್ತಾಯಪೂರ್ವಕ ಹಕ್ಕುಬದಲಾವಣೆ ಕ್ರಮ ತರವಾಗಿರುವುದಿಲ್ಲ.

*ಗ್ರಾಮ ಆಡಳಿತ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ತಾವೇ ಸ್ವತಃ ರೈತರನ್ನು ಸಂಪರ್ಕಿಸಿ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಪಹಣಿ, ಮ್ಯುಟೇಷನ್ ಮತ್ತಿತರ ದಾಖಲಾತಿಗಳನ್ನು ಸಂಗ್ರಹಿಸಿ ಹಕ್ಕುದಾಖಲೆಗೆ ಒತ್ತಡ ಹೇರುವ ಕ್ರಮವನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ*

• ಜಮೀನಿನ ಮಾಲಿಕರ ಇಚ್ಛೆಯಿಲ್ಲದೇ ಒತ್ತಾಯಪೂರ್ವಕ ಹಕ್ಕುಬದಲಾವಣೆ ಕ್ರಮವು ಸರ್ವತಹ ಸಮಂಜಸವಾದದ್ದಲ್ಲ ಆದ್ದರಿಂದ ತಮ್ಮ ಜಮೀನುಗಳ ಹಕ್ಕುಬದಲಾವಣೆಯ ಆಯ್ಕೆಯನ್ನು ನಿಯಮಾನುಸಾರ ಮೃತ ಖಾತೆದಾರರ ಒಡೆತನದಲ್ಲಿರುವ ಜಮೀನುಗಳ ವಾರಸುದಾರರ ಇಚ್ಛೆಗೆ ಬಿಡುವುದು ಸೂಕ್ತವಾಗಿರುತ್ತದೆ.

• ಅಭಿಯಾನ ಮಾದರಿಯಲ್ಲಿ/ತರಾತುರಿಯಲ್ಲಿ ಮಾಡಲಾಗುವ ಹಕ್ಕುಬದಲಾವಣೆ ಪ್ರಕರಣಗಳಲ್ಲಿ ವಾರಸುದಾರರುಗಳು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ/ಕಾನೂನುಬದ್ದ ಕೆಲವು ವಾರಸುದಾರರನ್ನು ಕೈಬಿಡುವುದು ಹಾಗೂ ವಿವಾಹಿತ ಹೆಣ್ಣುಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೈಬಿಡುವುದು, ಬಹುಪತ್ನಿತ್ವ ಹಕ್ಕಿನ ವಿವಾದಗಳು ಮುಂತಾದ ಕ್ರಮಗಳಿಂದಾಗಿ ತಪ್ಪಾಗಿ ಹಕ್ಕುದಾಖಲೆಗಳು ದಾಖಲಾಗುವ ಸಂಭವವಿದ್ದು, ಈ ಸಂಬಂಧ ಗ್ರಾಮ ಆಡಳಿತ ಅಧಿಕಾರಿಗಳು ಹಲವು ಬಗೆಯ ಕಾನೂನು ಕ್ರಮಗಳನ್ನು ಎದುರಿಸುವ ಪ್ರಸಂಗಗಳು ಎದುರಾಗುತ್ತವೆ.

• ಈಗಾಗಲೇ ಮೃತ ಖಾತೆದಾರರ ಹೆಸರಿನಲ್ಲಿರುವ ಪಹಣಿ ದಾಖಲೆಗಳನ್ನು ವಾರಸುದಾರರ ಹೆಸರುಗಳಿಗೆ ಬದಲಾಯಿಸುವಂತೆ ಅರ್ಜಿ ಸಲ್ಲಿಸಿ ಹಕ್ಕುಬದಲಾವಣೆ ಪಡೆದುಕೊಂಡಿರುವ ಪ್ರಕರಣಗಳಲ್ಲಿಯೇ ಸಾಕಷ್ಟು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ/ ದಾಖಲೆ ನೀಡಿ ಹಕ್ಕುದಾಖಲೆ ಮಾಡಿಕೊಂಡಿರುವ ಸಾವಿರಾರು ಪ್ರಕರಣಗಳಿದ್ದು,

ಸದರಿ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಮಾನತ್ತುಗೊಳಿಸಿ ಕ್ರಿಮಿನಲ್ ಪ್ರಕರಣಗಳನ್ನು ಸಹ ದಾಖಲಿಸಿರುವ ನೂರಾರು ಪ್ರಕರಣಗಳಿರುತ್ತವೆ.

• ಮೃತರ ಹೆಸರಿನಲ್ಲಿರುವ ಕೃಷಿ ಜಮೀನುಗಳ ಪಹಣಿಗಳನ್ನು ಉತ್ತರಾಧಿಕಾರಿಗಳ ಹೆಸರಿಗೆ ಬದಲಾಯಿಸುವ ಸಂಬಂಧ ಕಾನೂನುಬದ್ದ ವಾರಸುದಾರರು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದಲ್ಲಿ ನಿಯಮಾನುಸಾರ ಉತ್ತರಾಧಿಕಾರಿಗಳಿಗೆ ಹಕ್ಕುದಾಖಲೆ ಮಾಡಲು ಎಲ್ಲಾ ಬಗೆಯ ಕ್ರಮಗಳನ್ನು ಅನುಸರಿಸಲು ಗ್ರಾಮ ಆಡಳಿತ ಅಧಿಕಾರಿಗಳು ಸಿದ್ದರಿದ್ದು ತಾವೇ ಮೃತ ಖಾತೆದಾರರ ವಾರಸುದಾರರುಗಳನ್ನು ಹುಡುಕಿ ಅವರಿಂದ ದಾಖಲಾತಿಗಳನ್ನು ಸಂಗ್ರಹಿಸಿ ಹಕ್ಕುಬದಲಾವಣೆ ಮಾಡುವ ಒತ್ತಾಯಪೂರ್ವಕ ಕೆಲಸ ನಿರ್ವಹಿಸಲು ಸಿದ್ದರಿರುವುದಿಲ್ಲ.

• ಪೌತಿ ಖಾತಾ ಬದಲಾವಣೆ ಪ್ರಕ್ರಿಯೆಯು ನಿರಂತರವಾಗಿದ್ದು, ಅವೈಜ್ಞಾನಿಕ ಶ್ರೇಯಾಂಕ ವ್ಯವಸ್ಥೆಯನ್ನು ಕೈಬಿಟ್ಟು ಎಂದಿನಂತೆ ನಿಯಮಬದ್ದವಾಗಿ ಹಾಗೂ ನಿರಂತರವಾಗಿ ಈ ಹಿಂದಿನಿಂದಲೂ ಇರವಂತೆ ಪೌತಿ ಖಾತೆ ಬದಲಾವಣೆ ವ್ಯವಸ್ಥೆಯನ್ನು ಮುಂದುವರೆಸುವುದು.

ಸಾರ್ವಜನಿಕರು ಕಂದಾಯ ಇಲಾಖೆಯ / ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ಎಲ್ಲಾ ಯೋಜನೆಗಳನ್ನು ಅಥವಾ ಯಾವುದೇ ಬಗೆಯ ಸೇವೆಯನ್ನು ಬಯಸಿ ಅರ್ಜಿ/ಮನವಿ ಸಲ್ಲಿಸುವ ಪ್ರಕರಣಗಳಿಗೆ ಕೆಲಸ ನಿರ್ವಹಿಸಿ ತ್ವರಿತಗತಿಯಲ್ಲಿ ಗುಣಮಟ್ಟದ ಸರ್ಕಾರಿ ಸೇವೆಯನ್ನು ಒದಗಿಸಲು ಸಿದ್ಧರಿದ್ದು, ಈ ರೀತಿಯ ಜಮೀನುಗಳ ಹಕ್ಕುದಾಖಲಾತಿ ಮಾಡುವ ಕ್ರಮವನ್ನು ಗ್ರಾಮ ಆಡಳಿತ ಅಧಿಕಾರಿಗಳೇ ರೈತರ ಮತ್ತು ಸಾರ್ವಜನಿಕರ ಮನೆ ಬಾಗಿಲುಗಳಿಗೆ ತೆರಳಿ ದಾಖಲಾತಿಗಳನ್ನು ಸಂಗ್ರಹಿಸಿ ವಾರಸುದಾರರುಗಳನ್ನು ಹುಡುಕಿ ಸೇವೆ ನೀಡುವ ಕ್ರಮವನ್ನು ಕರ್ನಾಟಕ ರಾಜ್ಯದ ಸಮಸ್ತ ಗ್ರಾಮ ಆಡಳಿತ ಅಧಿಕಾರಿಗಳ ಪರವಾಗಿ ಸಂಘವು ಒಕ್ಕೊರಲಿನಿಂದ ವಿರೋಧಿಸುತ್ತದೆ

ಮತ್ತು ಈ ಯೋಜನೆ ಅಲ್ಲದೇ ಮುಂದೆಯೂ ಸಹ ಗ್ರಾಮ ಆಡಳಿತ ಅಧಿಕಾರಿಗಳೇ ಸಾರ್ವಜನಿಕರ ಮನೆಬಾಗಿಲಿಗೆ ಹೋಗಿ ಹಕ್ಕುದಾಖಲೆ ಮಾಡುವಂತಹ ಯಾವುದೇ ಯೋಜನೆಗಳನ್ನು ರೂಪಿಸಬಾರದೆಂದು ಸಂಘವು ಆಗ್ರಹಿಸುತ್ತದೆ.

ಉಲ್ಲೇಖಿತ ಸರ್ಕಾರದ ಪತ್ರದಲ್ಲಿ ತಿಳಿಸಿರುವಂತೆ ಇ-ಪೌತಿ ಖಾತಾ ಆಂದೋಲನ ಜಾರಿಗೊಳಿಸಲು ಪ್ರಾಯೋಗಿಕವಾಗಿ ಆಯ್ಕೆಯಾಗಿರುವ ಗದಗ ಜಿಲ್ಲೆಯಲ್ಲಿ ಈ ಮೇಲ್ಕಂಡ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಹಾಗೂ ರಾಜ್ಯ ಸಂಘದ ತೀರ್ಮಾನದಂತೆ ನಿರ್ವಹಿಸುವುದಿಲ್ಲ ಎಂಬ ಅಂಶವನ್ನು ಸಂಘವು ತಮ್ಮ ಆದ್ಯ ಗಮನಕ್ಕೆ ತರುತ್ತಾ, ಮುಂದುವರೆದಂತೆ ಇ-ಪೌತಿ ಖಾತಾ ಆಂದೋಲನದ ಕೆಲಸವನ್ನು ಪತ್ರದಲ್ಲಿ ಮೇಲೆ ವಿವರಿಸಿರುವ ಕಾರಣಗಳಿಗಾಗಿ ರಾಜ್ಯಾದ್ಯಂತ ನಿರ್ವಹಿಸದಿರಲು ರಾಜ್ಯ ಸಂಘದ ಕಾರ್ಯಕಾರಿ ಸಮಿತಿಯು ಒಮ್ಮತದ ನಿರ್ಣಯ ಕೈಗೊಂಡಿರುತ್ತದೆ ಎಂಬ ಅಂಶವನ್ನು ತಮ್ಮ ಆದ್ಯ ಗಮನಕ್ಕೆ ತರಬಯಸುತ್ತದೆ.

2. ಚಿಕ್ಕಮಗಳೂರು ಜಿಲ್ಲೆಯಲ್ಲಿ 30 ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನೈಸರ್ಗಿಕ ನ್ಯಾಯ ತತ್ವಗಳನ್ನು ಹಾಗೂ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶವನ್ನು ಈ ಕೂಡಲೇ ಹಿಂಪಡೆಯುವುದು.

3. *ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್ ನಿಯಮ 160 ರ ಉಪಖಂಡ(2)ನ್ನು ಮರುಸ್ಥಾಪಿಸುವ ಬಗ್ಗೆ ಅಥವಾ ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿಯನ್ನು ರಚಿಸುವ ಬಗ್ಗೆ*

ಕಳೆದ ನಾಲ್ಕು ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಪದೋನ್ನತಿ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಕೆ.ಸಿ.ಎಸ್.ಆರ್ ನಿಯಮ 16ಎ ರ ಉಪಖಂಡ(2)ವನ್ನು ಹಿಂಪಡೆದಿರುವುದರಿಂದ ನೌಕರರ ಜೀವನದಲ್ಲಿ ಈ ಕೆಳಕಂಡಂತೆ ಹಲವಾರು ಸಮಸ್ಯೆಗಳು ಉಂಟಾಗಿರುತ್ತದೆ. ಆದ್ದರಿಂದ ಈ 16ಎ ಉಪಖಂಡ(2)ನ್ನು ಮರುಸ್ಥಾಪಿಸುವಂತೆ ಅಥವಾ ಕಂದಾಯ ಇಲಾಖೆಯಲ್ಲಿ ಇತರೆ ಎಲ್ಲಾ ಇಲಾಖೆಗಳಲ್ಲಿ ಮಾಡಿರುವಂತೆ ವರ್ಗಾವಣೆಯ ಮಾರ್ಗಸೂಚಿಯನ್ನು ರಚಿಸುವಂತೆ ಸಂಘದ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುತ್ತದೆ.

ರಾಜ್ಯದಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಗಳನ್ನೊಳಗೊಂಡಂತೆ ಗ್ರೂಪ್ ಸಿ & ಡಿ ವೃಂದದ ನೌಕರರಿಗಾಗಿ ಸಂವಿಧಾನದ ವಿಧಿ 14 ಮತ್ತು 16ನ್ನು ಎತ್ತಿಹಿಡಿದು, ಕೆ.ಸಿ.ಎಸ್.ಆರ್ ನಿಯಮ-16ಎ ರ ಉಪಖಂಡ(।।)ನ್ನು ಅಂತರ್ ಜಿಲ್ಲಾ ವರ್ಗಾವಣೆಯ 5ವರ್ಷ ಮೇಲ್ಪಟ್ಟ ಅವರ ಸೇವೆಯನ್ನು ಬಿಟ್ಟುಕೊಟ್ಟು ಮತ್ತೊಂದು ಜಿಲ್ಲಾ ಘಟಕಕ್ಕೆ ವರ್ಗಾವಣೆಯಾಗುವ ಅವಕಾಶವನ್ನು ಕಲ್ಪಿಸಲಾಗಿತ್ತು.

ಆದರೆ ಸರ್ಕಾರಿ ಸುತ್ತೋಲೆ ಸಂಖ್ಯೆ: ಸಿಆಸುಇ 179 ಸೇನೆನಿ 2020 ದಿನಾಂಕ: 06-07-

2021 ರಂತೆ ಕೆ.ಸಿ.ಎಸ್.ಆರ್ ತೆಗೆದುಹಾಕಲಾಗಿರುತ್ತದೆ. ನಿಯಮ-16ಎ d ಉಪಖಂಡ(11)ನ್ನು ಹಿಂಪಡೆದು

ಈ ನಿಯಮವನ್ನು ಹಿಂಪಡೆದಿರುವುದರಿಂದ,

• ನೌಕರರ ಕೌಟುಂಬಿಕ ಸಮಸ್ಯೆ,

ಸಣ್ಣ-ಸಣ್ಣ ಮಕ್ಕಳ ಪಾಲನೆ/ಪೋಷಣೆ ಮಾಡಲು,

ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆ,

ದೂರ-ದೂರದ ಊರಿನಲ್ಲಿರುವ ತಮ್ಮ ವಯಸ್ಸಾಗಿರುವ ತಂದೆ-ತಾಯಿಗಳ ಪೋಷಣೆ ಮಾಡಲು,

ಗರ್ಭಿಣಿಯರು/ಬಾಣಂತಿಯರ ವೈಯಕ್ತಿಕ ಸಮಸ್ಯೆಗಳು,

ಪತಿ-ಪತ್ನಿಯರ ನಡುವೆ ಬಿರುಕು ಮೂಡುತ್ತಿರುವುದು.

ಅಂಗವಿಕಲ ನೌಕರರಿಗೆ ಜೀವನ ನಡೆಸುವುದು ಕಷ್ಟಕರವಾಗಿರುವುದು.

ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳ ಕಾರಣ ಹಾಗೂ ಇತರೆ ಸಮಸ್ಯೆಗಳ ಕಾರಣ ನಿರಂತರ ಪ್ರಯಾಣ ಹಾಗೂ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗಿರುತ್ತದೆ

ಅದರಂತೆ,

> ಕೆ.ಸಿ.ಎಸ್.ಆರ್ ನಿಯಮ-16ಎ ಅನ್ನು ಮರುಸ್ಥಾಪಿಸುವುದರಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಿದಂತಾಗುತ್ತದೆ.

> ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟಾಗುವುದಿಲ್ಲ.

> ಸಾರ್ವಜನಿಕ ಹಾಗೂ ಉಂಟಾಗುವುದಿಲ್ಲ. ಸೇವಾವಲಯದಲ್ಲಿ ಯಾವುದೇ ರೀತಿಯ ದುಷ್ಪರಿಣಾಮ

> ಈ ನಿಯಮವನ್ನು ಮರುಸ್ಥಾಪಿಸುವುದರಿಂದಾಗಿ ನೌಕರರ ವೇತನದಿಂದ ಸರ್ಕಾರಕ್ಕೆ ಆದಾಯದ ಉಳಿತಾಯವಾಗುತ್ತದೆ. ಕಾರಣ 10-15 ವರ್ಷ ಸೇವಾಜೇಷ್ಟತೆಯನ್ನು ನೌಕರರು ಬಿಟ್ಟುಕೊಟ್ಟಾಗ ಅಂತರ್ ಜಿಲ್ಲಾ ವರ್ಗಾವಣೆಯಾಗಿ ಹೋಗುವ ಜಿಲ್ಲೆಯಲ್ಲಿ ಅವರ ಪದೋನ್ನತಿ ಇಲ್ಲದೆ ಅದೇ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ ಇದರಿಂದ ಪದೋನ್ನತಿ ವಂಚಿತರಾಗುವ ಕಾರಣ ಸರ್ಕಾರಕ್ಕೆ ಆದಾಯದ ಉಳಿತಾಯವಾಗುತ್ತದೆ.

> ಇದರಿಂದಾಗಿ ಸರ್ಕಾರದಿಂದ ಉನ್ನತ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ನೇಮಕಾತಿ ಮಾಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ.

ಆದ್ದರಿಂದಾಗಿ ಗ್ರೂಪ್ ಸಿ ಮತ್ತು ಡಿ ಗುಂಪಿನ ನೌಕರರನ್ನು ಜೇಷ್ಟತೆಯ ಒಂದು ಘಟಕದಲ್ಲಿನ ಹುದ್ದೆಯಿಂದ, ಜೇಷ್ಟತೆಯ ಮತ್ತೊಂದು ಘಟಕದಲ್ಲಿನ ಅದೇ ಕೇಡರ್ ನಲ್ಲಿನ ಸಮಾನ ಹುದ್ದೆಗೆ ವರ್ಗಾವಣೆಗಾಗಿ ಈ ಹಿಂದೆ ಇದ್ದ ಕೆ.ಸಿ.ಎಸ್.ಆರ್ ನಿಯಮ-16ಎ ರ ಉಪಖಂಡ(1)ನ್ನು ಮರುಸ್ಥಾಪಿಸಲು ಕೋರಿದೆ.

4. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ:

• ಕರ್ನಾಟಕ ಉಚ್ಚನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ: 329/23 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಮಾಡಿರುವ ವೃಂದ ಮತ್ತು ನೇಮಕಾತಿ ತಿದ್ದುಪಡಿಯನ್ನು ಯಥಾವತ್ತಾಗಿ ಸಮರ್ಥಿಸಿಕೊಳ್ಳುವ ಬಗ್ಗೆ,

• ಕೆಲವು ವಿಶೇಷ ಚೇತನ, ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ಹಾಗೂ ಮಾಜಿ ಸೈನಿಕರ ನಿಯೋಜನೆಗಳನ್ನು ಕೌನ್ಸಿಲಿಂಗ್ಸ್ ಮೂಲಕ ನಿಯೋಜನೆ ಆದೇಶಗಳನ್ನು ಮಾಡುವ ಬಗ್ಗೆ,

5. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ :

• ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿ

• ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಅಲ್ಕೆರಾ



ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್ (12ಜಿಬಿ/256ಜಿಬಿ), ಸಿಯುಜಿ ಸಿಮ್ ಮತ್ತು ಡೇಟಾ

• ಗೂಗಲ್ ಕ್ರೋಮ್ ಬುಕ್/ ಲ್ಯಾಪ್ ಟಾಪ್‌

• ಪ್ರಿಂಟರ್ ಮತ್ತು ಸ್ಕ್ಯಾನ‌ರ್


6. ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶ ನೀಡುವ ಬಗ್ಗೆ:

ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರದಿಂದ ಅಭಿವೃದ್ಧಿಪಡಿಸಿರುವ ಈ ಕೆಳಕಂಡ ಲ್ಲಾ ವೆಬ್/ಮೊಬೈಲ್ ತಂತ್ರಾಂಶಗಳಾದ,

1.ಸಂಯೋಜನೆ
2.ಗರುಡ ಆಪ್
3.ಇ-ಆಫೀಸ್
4.ಆಧಾರ್ seeಡ್
5.ವೋಟರ್ ಹೆಲ್ಸ್ ಲೈನ್
6.ಬಗರ್ ಹುಕುಂ
8.ಬೆಳೆ ಸಮೀಕ್ಷೆ
8.ಹಕ್ಕುಪತ್ರ
9.ಬೆಳೆ ಸಮೀಕ್ಷೆಯ ಅನುಮೋದನೆ  ವೆಬ್ ఆటో
10.ನಮೂನೆ 1-5 ರ ವೆಬ್ ಅಪ್ಲಿಕೇಷನ್
11.ಪಿ.ಎಂ ಕಿಸಾನ್ ವೆಬ್ ಆಪ್
12.ಪೌತಿ ಆಂದೋಲನ ಆಪ್
13.ಕೃಷಿ ಗಣತಿ
11.ಸಂರಕ್ಷಣೆ
12.ನೀರಾವರಿ ಗಣತಿ
(ಬೆಳೆ ಕಟಾವು ಮೊಬೈಲ್ ಆಪ
13.సి-బిజిలో ఆటో
14. ನವೋದಯ


ಈ ಮೇಲ್ಕಂಡಂತೆ ಅಭಿವೃದ್ಧಿಪಡಿಸಿರುವ ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ-ವೃಂದದ ನೌಕರರ ಹತ್ತು ಪಟ್ಟು ಕೆಲಸಗಳ ವಾಬ್ದಾರಿಯನ್ನು ವಹಿಸುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ -ದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನೀಡುವಂತೆ ಕೋರಿದೆ.

7. ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಎಲ್ಲಾ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿ ಮಾಡುವ ಬಗ್ಗೆ:

ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪದೋನ್ನತಿಯು 25-30 ವರ್ಷಕ್ಕೆ ಒಂದು ಪದೋನ್ನತಿಯನ್ನು ಪಡೆದು ಅಥವಾ ಪದೋನ್ನತಿ ಇಲ್ಲದೆ ನಿವೃತ್ತಿಯಾಗುತ್ತಿದ್ದು, ಈ ಇಲಾಖೆಯಲ್ಲಿ ಅತಿ ಹೆಚ್ಚು ಪ್ರ.ದ.ಸ ಹಾಗೂ ರಾಜಸ್ವ ನಿರೀಕ್ಷಕರು ಹುದ್ದೆಯನ್ನು ಅನುಕಂಪದ ನೇಮಕಾತಿ ಮೂಲಕ ಭರ್ತಿ ಮಾಡುತ್ತಿರುವುದರಿಂದ ಈ ವೃಂದದ ನೌಕರರು ಪದೋನ್ನತಿ ವಂಚಿರಾಗಿರುತ್ತಾರೆ.

ಆದ್ದರಿಂದ

• ಅನುಕಂಪದ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಆಗಬೇಕಾಗಿರುತ್ತದೆ.

ಹಾಲಿ ಇರುವ ಅನುಕಂಪದ ಆಧಾರದ ಮೇಲೆ ನೀಡುವ ಪ್ರ.ದ.ಸ ಹುದ್ದೆಯ ನೇಮಕಾತಿಯನ್ನು ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ನೀಡುವ ಬದಲಾಗಿ,

ಪಿ.ಯು.ಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರು ಅಥವಾ ತತ್ಸಮಾನ ಹುದ್ದೆಯ ನೇಮಕಾತಿ ಮಾಡುವಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡುವಂತೆ ಸಂಘವು ಆಗ್ರಹಿಸುತ್ತದೆ.

ಇದರಿಂದಾಗಿ ಸರ್ಕಾರಕ್ಕೆ ಆದಾಯದ ಉಳಿತಾಯವಾಗುತ್ತದೆ.

ಆರ್ಥಿಕ ಹೊರೆ ಉಂಟಾಗುವುದಿಲ್ಲ.

ಎಲ್ಲಾ ವೃಂದಗಳಲ್ಲಿ ಪದೋನ್ನತಿ ವಂಚಿತರಾಗುವುದು ತಪ್ಪುತ್ತದೆ.

8. ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವಾಗ ಜೀವಹಾನಿ ಆಗುವ ಗ್ರಾಮ ಆಡಳಿತ ಅಧಿಕಾರಿಗಳ ಕುಟುಂಬಕ್ಕೆ 50ಲಕ್ಷ ರೂಗಳ ಪರಿಹಾರ ಮಂಜೂರು ಮಾಡುವ ಬಗ್ಗೆ,

9. ಮಾತೃ ಇಲಾಖೆಯ ಎಲ್ಲಾ ಕೆಲಸಗಳೊಂದಿಗೆ ಸರ್ಕಾರದ ಆದೇಶದಂತೆ ಇತರೆ ಇಲಾಖೆಗಳ ಹಲವಾರು ಕೆಲಸಗಳನ್ನು ನಿರ್ವಹಿಸುವ ಹಾಗೂ ಚುನಾವಣೆ, ಅತಿವೃಷ್ಟಿ, ಅನಾವೃಷ್ಟಿ, ಇನ್ನಿತರ ಗುರುತರವಾದ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ದಿನನಿತ್ಯ ಸಾರ್ವಜನಿಕ ವಲಯದಲ್ಲಿ ನೂರಾರು ಸೇವೆಗಳನ್ನು ನೀಡುವಾಗ ಮಾರಣಾಂತಿಕ ದೈಹಿಕ ಹಲ್ಲೆ, ಕೊಲೆ ಪ್ರಕರಣಗಳು ಈಗಾಗಲೇ ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯಲ್ಲಿರುವಂತೆ 3000/- ರೂಗಳನ್ನು ಆಪತ್ತಿನ ಭತ್ಯೆ (ರಿಸ್ಕ್ ಅಲೊಯನ್ಸ್) ನೀಡುವ ಬಗ್ಗೆ,

10.ಪೊಲೀಸ್
ಇಲಾಖೆಯಲ್ಲಿರುವಂತೆ ನೂರಾರು ಕೆಲಸಗಳನ್ನು ನಿರ್ವಹಿಸುವ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನೊಳಗೊಂಡಂತೆ ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನವನ್ನು ಹೆಚ್ಚುವರಿ ಮಾಡಿ ಆದೇಶಿಸುವ ಬಗ್ಗೆ,

11. ಪ್ರಯಾಣ ಭತ್ಯೆ ದರವನ್ನು 500/- ರೂಗಳಿಂದ 5000/- ರೂಗಳಿಗೆ ಹೆಚ್ಚುವರಿಮಾಡುವ ಬಗ್ಗೆ,

12.ಆಯುಕ್ತಾಲಯದ ಅಡಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಜೇಷ್ಟತೆಯನ್ನು ರಾಜ್ಯ ಮಟ್ಟದ ಜೇಷ್ಟತೆಯನ್ನಾಗಿ ಪರಿಗಣಿಸುವ ಬಗ್ಗೆ,

13.ಮನೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಮಾತ್ರ ನೀಡುವ ಜವಾಬ್ದಾರಿ ನಿರ್ವಹಿಸುವಂತೆ ಆದೇಶಿಸುವ ಬಗ್ಗೆ,

14. ಕ್ಷೇತ್ರಮಟ್ಟದ ಗ್ರಾ.ಆ.ಅ ಗಳನ್ನು ಕಛೇರಿಗಳಿಗೆ ನಿಯೋಜಿಸಿಕೊಂಡಿರುವ ಪ್ರಕರಣಗಳಲ್ಲಿ ಅವರುಗಳ ಮೂಲ ಹುದ್ದೆಗಳಿಗೆ ಬಿಡುಗಡೆಗೊಳಿಸಲು ಸರ್ಕಾರವು ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆ ನಂತರವೂ ಸಹ ಕ್ಷೇತ್ರ ಮಟ್ಟದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕಛೇರಿ ನಿಯೋಜನೆಯಿಂದ ಬಿಡುಗಡೆಗೊಳಿಸದೇ ಇರುವ ಪ್ರಕರಣಗಳಲ್ಲಿ ಸಂಬಂಧಿಸಿದವರ ವಿರುದ್ಧ ಸರ್ಕಾರದ ಸುತ್ತೋಲೆಯಂತೆ ಕ್ರಮ ಜರುಗಿಸುವ ಬಗ್ಗೆ,

15.ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಂತೆ ಹಾಗೂ ಕಛೇರಿ ಅವಧಿಯನ್ನು ಹೊರತುಪಡಿಸಿ ಸಭೆ/ವರ್ಚುವಲ್ ಸಭೆಗಳನ್ನು ನಡೆಸದಂತೆ ಸರ್ಕಾರವು ಸುತ್ತೋಲೆಯನ್ನು ಹೊರಡಿಸಿದ ನಂತರವೂ ಕೂಡ ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುತ್ತಿರುವವರ ಬಗ್ಗೆ ಶಿಸ್ತು ಕ್ರಮ ಜರುಗಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆ,

16. ಸು. 50 ವರ್ಷಗಳ ಹಿಂದಿನ ಕಾಲದ ಕಛೇರಿಯ ಸಿಬ್ಬಂದಿ ದ್ವಿ.ದ.ಸ/ಪ್ರ.ದ.ಸ/ಶಿರಸ್ತೇದಾರ್‌ಗಳ ಹುದ್ದೆಗಳನ್ನು ಹಾಗೂ ಕ್ಷೇತ್ರಮಟ್ಟದಲ್ಲಿನ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಗಳನ್ನು/ ಹೋಬಳಿಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಪರೀಷ್ಕರಿಸಿ ಪುನರ್ವಿಂಗಡಣೆ ಮಾಡಿ ಹೆಚ್ಚುವರಿ ಹುದ್ದೆಗಳನ್ನು ಸೃಜಿಸುವ ಬಗ್ಗೆ,

17.ವಂಶವೃಕ್ಷ/ ಜಾತಿ ಪ್ರಮಾಣ ಪತ್ರ/ ಇತರೆ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಎಫ್.ಐ.ಆರ್ ದಾಖಲಿಸುತ್ತಿರುವುದನ್ನು ನಿಲ್ಲಿಸಿ, ತಪ್ಪು ಮಾಹಿತಿ ನೀಡುವ ಅರ್ಜಿದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸುವ ಬಗ್ಗೆ ಇಲಾಖೆಯ ಮುಖ್ಯಸ್ಥರಿಗೆ ಸೂಕ್ತ ಆದೇಶ ನೀಡುವ ಬಗ್ಗೆ,

18.ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸವನ್ನು ಕೃಷಿ/ತೋಟಗಾರಿಗೆ ಇಲಾಖೆಗೆ ನಿರ್ವಹಿಸುವಂತೆ ಆದೇಶಿಸುವ ಬಗ್ಗೆ,

19.ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಣೆ ಮಾಡುವ ಬಗ್ಗೆ,

20. ಪ್ರೋಟೋಕಾಲ್ ಕೆಲಸದಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೈಬಿಡುವಂತೆ ಸೂಕ್ತ ಆದೇಶ ನೀಡುವ ಬಗ್ಗೆ,

21. ಗ್ರಾಮ ಆಡಳಿತ ಅಧಿಕಾರಿಗಳ ಜಾಬ್ ಚಾರ್ಟ್ ನಿಗದಿಪಡಿಸುವ ಬಗ್ಗೆ (ಕಡ್ಡಾಯವಾಗಿ ನಿರ್ವಹಿಸಬೇಕಾದ ದಾಖಲೆಗಳು)

22. ದಪ್ತರ್ ಹಾಗೂ ಜಮಾಬಂದಿಯನ್ನು ರದ್ದುಪಡಿಸುವ ಬಗ್ಗೆ,

23. ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆಯನ್ನು ಒದಗಿಸುವ ವಿಚಾರದ ಸದರಿ ವೃಂದದ ನೌಕರರ ಬಹುವರ್ಷದ ಬೇಡಿಕೆಯನ್ನು ಆದ್ಯತೆಯಾಗಿ ಪರಿಗಣಿಸಿ ಈಡೇರಿಸುವ

ಮೇಲ್ಕಂಡಂತೆ ಈ ಎಲ್ಲಾ ಬೇಡಿಕೆಗಳು ಈಡೇರುವವರೆಗೆ ದಿನಾಂಕ:10-02-2025 ರಿಂದ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ. ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗುವುದು ಎಂಬ ಅಂಶವನ್ನು ತಮ್ಮ ಅವಗಾಹನೆಗೆ ತರಬಯಸುತ್ತಾ ಸಮೂಹದ ಬೇಡಿಕೆಗಳನ್ನು ಈಡೇರಿಸಿ ಉತ್ತಮ ಮತ್ತು ಗುಣಮಟ್ಟದ ರೀತಿಯಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಸಂಘವು ಆಗ್ರಹಿಸಿದೆ.
[10/02, 4:38 pm] Rani: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಬಡಪಾಯಿ ರೈತರ ಪರದಾಟ.

ಇಂದಿನಿಂದ ಮುಷ್ಕರ ವಿ ಎ ಗಳ ಕೆಲಸದಲ್ಲಿ ವ್ಯತ್ಯಯ ಮುಷ್ಕರ ಮುಗಿಯುವವರೆಗೂ ರೈತರ ಕೆಲಸ ಸ್ಥಗಿತ

ವಿ ಎ ಗಳ ಬೇಡಿಕೆಗಳಿಗೆ ಒಪ್ಪಿತೆ ಸರ್ಕಾರ

Related posts

ಸಕಲೇಶಪುರದ ಸಾಗರ್ ಗೆ ಚಿನ್ನದ ಪದಕ

Bimba Prakashana

ಸಿ.ಟಿ ರವಿಯನ್ನು ಭೇಟಿ ಆದ ಸಕಲೇಶಪುರ ತಂಡ

Bimba Prakashana

ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More