*ಡಿ ಕಂಪನಿ ಫ್ಯಾನ್ ಅಸೋಸಿಯೇಷನ್ ಸಕಲೇಶಪುರ ಇವರ ವತಿಯಿಂದ ಶಾಲೆ ಮಕ್ಕಳಿಗೆ ಉಚಿತ ಬ್ಯಾಗು, ನೋಟ್ ಪುಸ್ತಕ, ಆಟದ ಸಾಮಗ್ರಿ ವಿತರಣೆ ಮಾಡಲಾಯಿತು.*
ಚಾಲೆಂಜಿಂಗ್ ಸ್ಟಾರ್ ದರ್ಶನ್, (ಡಿ ಬಾಸ್) ರವರ 48ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡುವ ಮೂಲಕ ಹೆಬ್ಬಶಾಲೆ ಗ್ರಾಮ ಪಂಚಾಯಿತಿ
ಹೆನ್ನಲಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ಸಿಹಿ ವಿತರಿಸಿ ಉಚಿತ ಬ್ಯಾಗು,ನೋಟ್ ಪುಸ್ತಕ, ಪೆನ್ನು ಪೆನ್ಸಿಲ್ ,ಜಾಮಿಟ್ರಿ ಬಾಕ್ಸ್, ಹಾಗೂ ಆಟೋಪಕರಣಗಳನ್ನು ವಿತರಿಸಲಾಯಿತು .
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಸಿಧರ್ ಮಾತನಾಡಿ ಎಲ್ಲಾಸರ್ಕಾರಿ ಶಾಲೆಗಳಲ್ಲಿ ಇತರ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮಕ್ಕಳಿಗೆ ಉತ್ಸಹ ಜೊತೆಗೆ ಬಡ ಮಕ್ಕಳಿಗೂ ಸಹಾಯ ಮಾಡಿದಂತಾಗುತ್ತದೆ, ಇದೇ ತರ ಇತರೆ ಸಂಸ್ಥೆಗಳು ಮುಂದೆ ಬಂದಲ್ಲಿ ಸರ್ಕಾರಿ ಶಾಲೆ ಮುಚ್ಚುವುದು ತಪ್ಪಿಸಲು ಸಹಾಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿ ಕಂಪನಿ ತಾಲೂಕು ಅಧ್ಯಕ್ಷರಾದ ಶಶಿಕುಮಾರ್, ಉಪಾಧ್ಯಕ್ಷರಾದ ಕೋಮಲೇಶ್, ಖಜಾಂಚಿ ಪ್ರೇಮ್ ಕುಮಾರ್, ಸದಸ್ಯರುಗಳಾದ ಶಿವು,ಮಧು ,ಪಾಲಾಕ್ಷ, ರಾಹುಲ್ ಮನೋಜ್ ವಿನಯ್, ಮಂಜುನಾಥ್, ಸಂಜಯ್ ,ಆಕಾಶ್, ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಪೂರ್ಣೇಶ್ , ಶಾಲೆಯ ಶಿಕ್ಷಕರಾದ ಜಗದೀಶ್, ಶಿಕ್ಷಕಿಸುಮಲತಾ, ಹಾಜರಿದ್ದರು.

