ವರದಿ ರಾಣಿ ಪ್ರಸನ್ನ
ಡಾ. ಅವರೇಕಾಡು ವಿಜಯಕುಮಾರ್ ರವರಿಗೆ ರಾಜ್ಯಮಟ್ಟದ “ಮಲೆನಾಡ ಕಣ್ಮಣಿ” 2025 ರಾಜ್ಯ ಪ್ರಶಸ್ತಿ
ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಅವರೆಕಾಡು ಗ್ರಾಮದವರಾದ ಡಾ. ಅವರೇಕಾಡು ವಿಜಯಕುಮಾರ್, ಪ್ರಸ್ತುತ ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಭಾಷಾಂತರ ಅಧ್ಯಯನ ಮತ್ತು ವಿದೇಶಿ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಗುರುತಿಸಿ ದಿನಾಂಕ 22- 2- 2025 ರ ಶನಿವಾರ ಬೆಳಗ್ಗೆ 10:00 ಗಂಟೆಗೆ ಚಿಕ್ಕಮಗಳೂರಿನ ಎ.ಐ.ಟಿ. ಕಾಲೇಜು ಸಭಾಂಗಣದಲ್ಲಿ ಜರುಗಲಿರುವ ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಶೃಂಗೇರಿ ಶಾಖ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೂಜ್ಯ ಗುಣನಾಥ ಸ್ವಾಮಿಯವರು, ಡಾ. ಸಿ ಟಿ ರವಿ, ಡಾ. ಜೆ.ಪಿ. ಕೃಷ್ಣೇಗೌಡ, ಹೆಚ್. ಡಿ. ತಮ್ಮಯ್ಯ, ಶ್ರೀಮತಿ ಗಾಯತ್ರಿ ಶಾಂತಗೌಡ ಇವರುಗಳು ಅಮೃತೇಶ್ವರ ಪ್ರಕಾಶನ ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ರಾಜ್ಯಮಟ್ಟದ “ಮಲೆನಾಡ ಕಣ್ಮಣಿ” 2025 ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ