ವರದಿ ರಾಣಿ ಪ್ರಸನ್ನ
ಇಲ್ಲೊಂದು ಸರ್ವತೋಮುಖ ಪ್ರತಿಭೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಂಡಿಯಾ. ಬುಕ್ ಆಫ್ ರೆಕಾರ್ಡ್ ಸ್ಪರ್ದೆಯಲ್ಲಿ ಭಾಗವಹಿಸಿ ” Super Talented Kid With Outstanding Memory ” ಎಂದು ಬಿರುದು ಪಡೆದಿರುವ ಆಚಂಗಿ ನಿವಾಸಿ ಆರ್ವಿ.
ಈ ಪ್ರತಿಭೆಯ ತಾಯಿ ವಿಜಯಲಕ್ಷ್ಮಿ ಹಾಗು ತಂದೆ ಕಾರ್ತಿಕ್ ಆಚಂಗಿ ನಿವಾಸಿಗಳು .
ಆರ್ವಿಯ ಕಲೆಯನ್ನು ಗುರುತಿಸಿ ಬೆಂಗಳೂರಿನ ” ಚಿತ್ರಸಂತೆ ” ತಂಡವು ಇವಳಿಗೆ “ರಾಜ್ಯೋತ್ಸವ ಪುರಸ್ಕಾರ ” ನೀಡಿ ಗೌರವಿಸಿದೆ. 49 ಜನ ಹಿರಿಯ ವಿವಿಧ ಸಾಧಕರ ಪೈಕಿ ಅತ್ಯಂತ ಕಿರಿಯ ಸಾಧಕಿ ಇವಳಾಗಿರುತ್ತಾಳೆ. ಹಾಗೆ ಇವಳು ಹನುಮ ಜಯಂತಿ ಹಾಗೂ 4ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕಲೆ ಪ್ರದರ್ಶನ ನೀಡಿ ಸನ್ಮಾನ ಮಾಡಿರುತ್ತಾರೆ . ಹಾಸನದಲ್ಲಿ ನಡೆದ ” ಗಮಕ ನಮನ – ಕವಿ ನಮನ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಮಾಡಲಾಗಿದೆ.
ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಇವಳ ಕಲೆ ಗಮನಿಸಿ ಇವಳಿಗೆ ವೇದಿಕೆ ಕಲ್ಪಿಸಿ ಕೊಡಲಾಗಿತ್ತು.
ಮಾರ್ಚ್ ನಲ್ಲಿ ಹಾಸನದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಹ ಭಾಗಿಯಾಗಲಿದ್ದಾಳೆ.
ಈ ಮಗು “ಇಂಡಿಯಾ ಬುಕ್ ಆಫ್ ರೆಕಾರ್ಡ್ ” ಪಡೆದದ್ದಕ್ಕೆ ಈಕೆಯ ಕಲೆಯನ್ನು ಗುರುತಿಸಿ ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜು ಹಾಗು ಭಜರಂಗದಳ ಹಾಗು ರಘುಜಿ ಅವರು ಗಣೇಶನ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿರುತ್ತಾರೆ.
ಈ ಮಗುವಿನ ಪ್ರತಿಭೆ ಏನು ಹಾಗಾದ್ರೆ ಒಂದು ವರ್ಷ ಹನ್ನೊಂದು ತಿಂಗಳಿನಲ್ಲಿ ಏನು ಸಾಧನೆ ಮಾಡಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು ಇಲ್ಲಿದೆ ನೋಡಿ ಈ ಮಗುವಿನ ಪ್ರತಿಭೆ , ತನ್ನನ್ನು ತಾನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಭಗವದ್ಗೀತೆ , ದೇವರ ಶ್ಲೋಕಗಳು, ದೇವರ ನಾಮಗಳು , ಭರತ ನಾಟ್ಯ ಮುದ್ರೆಗಳು, 400ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವುದು, ಕವಿಗಳ ಹೆಸರು ಹಾಗು ಕಾವ್ಯ ನಾಮಗಳು, ದಿಕ್ಕುಗಳನ್ನು ಗುರುತಿಸುವುದು, ಹಳೇ ಗನ್ನಡ, ಕನ್ನಡ , ಹಾಗು ಇಂಗ್ಲಿಷ್ ನಲ್ಲಿ ಹೇಳುವಳು, , ಭಜನೆಗಳು, ಹನುಮಾನ್ ಚಾಲಿಸಾ , ಹಾಗೆಯೇ ಮೆಡಿಕಲ್ ಮತ್ತು ಹಾಸ್ಪಿಟಲ್ ನಲ್ಲಿ ಬಳಸುವ ವಸ್ತುಗಳ ಹೆಸರು , ಕನ್ನಡದ ಮಾಸಗಳು , ಇಂಗ್ಲಿಷ್ ನ ತಿಂಗಳು, ವಾರದ ದಿನಗಳು, ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಹೇಳುತ್ತಾಳೆ, ದೇಹದ ಭಾಗಗಳು, ಪ್ರಾಣಿಗಳು ಹಾಗು ಪಕ್ಷಿ ಹಣ್ಣುಗಳ ಹೆಸರನ್ನು ಹೇಳುತ್ತಾಳೆ. ಯೋಗಾಸನ, ಜಿಲ್ಲೆಗಳ ಹೆಸರು , ಕನ್ನಡದ ಪ್ರಥಮಗಳು, ಜನರಲ್ ನಾಲೆಡ್ಜ್ ಪ್ರಶ್ನೆಗಳಿಗೆ ಉತ್ತರಿಸುವ ಕೆಲವೊಂದು ಸಿನಿಮಾ ಹಾಡುಗಳನ್ನು ಹಾಡುವುದು ಮತ್ತು ನೃತ್ಯ ಮಾಡುವುದು , ಪಜಲ್ ಸಾಲ್ವ್ ಮಾಡುವುದು.
ಇವರ ತಾಯಿ ವಿಜಯಲಕ್ಷ್ಮಿ ಈಕೆ ಪ್ರತಿಭಾನ್ವಿತಳಾಗಲಿಕ್ಕೆ ಅವರ ತಾಯಿಯ ಕೊಡುಗೆ ಹೆಚ್ಚಿನದ್ದಿದೆ ಅವರು ಮಗುವಿಗೆ ಮೊಬೈಲ್ ಅನ್ನು ನೀಡದೆ ಇತರಹದ ಚಟುವಟಿಕೆಗಳಲ್ಲಿ ತೊಡಗಿರುವುದು.
ಮುಂದಿನ ಈ ಮಗುವಿನ ಭವಿಷ್ಯವು ಈ ನಮ್ಮ ಸಕಲೇಶಪುರಕ್ಕೆ ಹೆಸರು ತರುವಂತಾಗಲಿ ಇಡೀ ನಮ್ಮ ಸಕಲೇಶಪುರದ ಹೆಸರನ್ನು ಎಲ್ಲೆಡೆ ಹರಡಲಿ.

