ವರದಿ ರಾಣಿ ಪ್ರಸನ್ನ
ಜೆ. ಎಸ್.ಎಸ್ . ಶಾಲೆಯಲ್ಲಿ ವಚನ ಸಂಭ್ರಮ
ಶರಣರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸುಸಂಸ್ಕೃರಾಗಬಹುದು.
ಹನ್ನೆರಡನೆ ಶತಮಾನದ ದಾರ್ಶನಿಕರು. ವಚನದ ಮೂಲಕ ಜನರಿಗೆ ಶರಣರ ತತ್ವಗಳು ಮಾರ್ಗದರ್ಶನ ವಾಗಿವೆ ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರದಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ದಿನಾಂಕ 12-2-2025ರಂದು ಸಕಲೇಶಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಹೆಬ್ಬಾಶಾಲೆ ದಿವಂಗತ ದೇವಮ್ಮ ಹಾಗೂ ದಿವಂಗತ ನಂಜೇಗೌಡ ಸ್ಮಾರಕ ಧತ್ತಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಮೂವತ್ತೇಂಟು ವರ್ಷದ ಹಿಂದೆ ಶ್ರೀ ಸುತ್ತೂರು ಜಗದ್ಗುರುಗಳಾದ ರಾಜೇಂದ್ರ ಸ್ವಾಮಿಜಿರವರು ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್ ಇಂದು ಎಲ್ಲಾ ಕಡೆ ಸಂಘಟಿತವಾಗಿದೆ.
ಶ್ರೀ ಸುತ್ತೂರು ಈಗಿನ ಜಗದ್ಗುರುಗಳಾದ ಡಾ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಗೌರವಾಧ್ಯಕ್ಷರಾಗಿ ಶರಣ ಸಾಹಿತ್ಯ ಪರಿಷತ್ ಇವರ ನೇತೃತ್ವದಲ್ಲಿ ಹಲ ವಾರು ಸಾಹಿತ್ಯಕ್ಕೆ ಕೆಲಸ ನಿರ್ವಹಿಸುತ್ತಿರುವುದು ನಮಗೆ ಸಂತೋಷತರುವಂತದ್ದು ಎಂದರು..
ಪ್ರಾಸ್ಥಾವಿಕವಾಗಿ ಮಾತನಾಡಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಶರಣ ಸಾಹಿತ್ಯ ಪರಿಷತ್ ಸಕಲೇಶಪುರ ತಾಲ್ಲೂಕು ಪ್ರದಾನ ಕಾರ್ಯದರ್ಶಿ ಯಡಹಳ್ಳಿ ಮಂಜುನಾಥ್ ಮಾತನಾಡಿ ಸುತ್ತೂರು ಜಗದ್ಗುರುಗಳು ಅನೇಕ ವಿದ್ಯಾ ಸಂಸ್ಥೆಗಳನ್ನು ರಾಜ್ಯ,ದೇಶ, ವಿದೇಶಗಳಲ್ಲಿ ಸ್ಥಾಪಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನಿಡಿದ್ದಾರೆ. ಶರಣ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳ ಹೆಸರಿನಲ್ಲಿ ಜಿಲ್ಲಾ ತಾಲ್ಲೂಕು ಕೇಂದ್ರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಚನ ಗಾಯನ, ಹಲವಾರು ವಿಷಯಗಳ ಮೇಲೆ ಚರ್ಚೆ ಸ್ಪರ್ಧೆ ಏರ್ಪಡಿಸಿ ಶರಣರ ತತ್ವ ಸಿದ್ಧಾಂತದ ಮಹತ್ವದ ವಿಚಾರ ತಿಳಿಸಲು ಇಂಥ ಕಾರ್ಯಕ್ರಮದಿಂದ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಕಲೇಶಪುರ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಲೋಹಿತ್ ಕೌಡಹಳ್ಳಿ ಮಾತನಾಡಿ ಶರಣಸಾಹಿತ್ಯ ಪರಿಷತ್ ವತಿಯಿಂದ ಆನೇಕ ಕಾರ್ಯಕ್ರಮ ಮಾಡಲಾಗುತ್ತಿದ್ದು ಇಂದು ಜೆ ಎಸ್ ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆಯಿಂದ ಅನೂಕೂಲ ಮತ್ತು ಆನಾನೂಕೂಲದ ಬಗ್ಗೆ ವಿದ್ಯಾರ್ಥಿಗಳು ಮಾತಾನಾಡಿದ್ದಾರೆ ಎಂದರು.
ಇದೆ ಸಂದರ್ಭದಲ್ಲಿ ಸಮಾಜಸೇವಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಅರ್ಚನಾ ಜಯಂತ್ ಹಾಗೂ ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಾರದ ಗುರುಮೂರ್ತಿ. ಅಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯ್ ಕುಮಾರ್, ತಾಲ್ಲೂಕು ಕೃಷಿ ಅಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಜೆ ಎಸ್ ಎಸ್ ಮುಖ್ಯ ಕಾರ್ಯ ಸಂಯೋಜನಾ ಅಧಿಕಾರಿ ಅರ್.ಮಂಜುನಾಥ್,ಶಾಲಾ ಮುಖೋಪಾಧ್ಯಾಯರಾದ ರೇಣುಕಾರಾಧ್ಯ, ಕದಳಿ ವೇದಿಕೆ ಸಕಲೇಶಪುರ ತಾಲ್ಲೂಕು ಸಂಚಾಲಕರಾದ ಮೀನಾಕ್ಷಿ ಖಾದರ್, ಮುಂತಾದವರು ಇದ್ದರು
ಕಾರ್ಯಕ್ರಮದಲ್ಲಿ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಜೆ ಎಸ್, ಎಸ್ ಶಾಲೇಯ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರು, ಉಪಾನ್ಯಾಸಕರು ಸಾರ್ವಜನಿಕರು ಭಾಗವಹಿಸಿದ್ದರು.
