ರಾದಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಆಲೂರು ತಾಲೂಕಿನ ವಿದ್ಯಾರ್ಥಿಗಳಿಗೆ ನಾಲ್ಕನೇ ವರ್ಷದ ಪ್ರತಿಭಾ ಪುರಸ್ಕಾರ
ರಾಧಮ್ಮ ಜನಸ್ಪಂದನ ವತಿಯಿಂದ ನಾಲ್ಕನೇ ವರ್ಷದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡಿದ್ದು ಆಲೂರು ತಾಲೂಕಿನ ಎಲ್ಲಾ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಪ್ರಥಮ ಸ್ಥಾನದ ಆಧಾರದ ಮೇಲೆ ಮತ್ತು ಆಲೂರು ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಪ್ರಥಮ ಸ್ಥಾನದ ಆಧಾರದ ಮೇಲೆ ಈಗಿನ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯದವರು ಆ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಜಾತಿ ಎಂಬ ಬೀಜವನ್ನು ಬಿತ್ತಬಾರದು ಎಂಬ ದೃಷ್ಟಿಯಿಂದ ಪ್ರತಿ ವರ್ಷವೂ ಎಲ್ಲಾ ಜಾತಿ ಮತ್ತು ಧರ್ಮದ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಅಂದರೆ ನಾಲ್ಕನೇ ವರ್ಷದ ಪ್ರತಿಭಾ ಪುರಸ್ಕಾರವನ್ನು ಆಲೂರು ತಾಲೂಕಿನ ಒಕ್ಕಲಿಗರ ಸಮುದಾಯ ಭವನದಲ್ಲಿ ದಿನಾಂಕ 13 ಜನವರಿ 2025 ಸೋಮವಾರದಂದು ಹಮ್ಮಿಕೊಂಡಿದ್ದು ಈ ಕಾರ್ಯಕಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರು ಮತ್ತು ಕರ್ನಾಟಕದ ಲೋಕಾಯುಕ್ತರು ಆಗಮಿಸುತ್ತಿದ್ದು ಇವರೊಂದಿಗೆ ಎಂಕೆ ಪ್ರಾಣೇಶ್ ವಿಧಾನ ಪರಿಷತ್ ಉಪಸಭಾಪತಿಗಳು ಮತ್ತು ಆಲೂರು ಮತ್ತು ಸಕಲೇಶಪುರ ಶಾಸಕರದ ಸಿಮೆಂಟ್ ಮಂಜು, ಬೇಲೂರು ಶಾಸಕರಾದ ಎಚ್ ಕೆ ಸುರೇಶ್ ಮಾಜಿ ಶಿಕ್ಷಣ ಸಚಿವರಾದ ಎನ್ ಮಹೇಶ್ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲೆ ಹಿರಿಯರಾದಂತಹ ಅರಕಲಗೂಡು ಮಾಜಿ ಶಾಸಕರಾದ ಎಟಿ ರಾಮಸ್ವಾಮಿ ಅವರು ವಹಿಸಿದ್ದು ಮತ್ತು ಮತ್ತೊಬ್ಬ ಹಿರಿಯರಾದಂತಹ ಮಾಜಿ ಶಾಸಕರಾದ ಪುಟ್ಟೇಗೌಡರು ಗೌರವ ಉಪಸ್ಥಿತಿ ವಹಿಸಿಕೊಂಡಿದ್ದಾರೆ